ಎಲ್ಲೆಡೆ ನಕಲಿ ವಾಹನ ವಸ್ತುಗಳ ದಂಧೆ; ಸಿಡಿದೆದ್ದ ಸಿಯಾಮ್

By Nagaraja

ವಾಹನೋದ್ಯಮದಲ್ಲಿ ನಕಲಿ ವಸ್ತುಗಳ ದಂಧೆ ಜಾಸ್ತಿಯಾಗುತ್ತಲೇ ಇದೆ. ನಕಲಿ ಆಟೋ ಬಿಡಿಭಾಗಗಳ ತಯಾರಿಕೆ ಹಾಗೂ ಮಾರಾಟದಿಂದಾಗಿ ದೇಶದ ವಾಹನೋದ್ಯಮ ಕೆಟ್ಟ ಹೆಸರಿಗೆ ಗುರಿಯಾಗುತ್ತಿದೆ. ಇದರ ವಿರುದ್ಧ ಸಿಡಿದಿದ್ದಿರುವ ಭಾರತೀಯ ವಾಹನೋದ್ಯಮ ತಯಾರಕರ ಒಕ್ಕೂಟ (ಸಿಯಾಮ್) ನಕಲಿ ವಾಹನ ವಸ್ತುಗಳ ಬಗ್ಗೆ ಅರಿವು ಮೂಡಿಸುವತ್ತ ಬೃಹತ್ ಅಭಿಯಾನವನ್ನು ಆರಂಭಿಸಿದೆ.

ಇದೀಗಷ್ಟೇ ಅಂತ್ಯಗೊಂಡ 2014 ಆಟೋ ಎಕ್ಸ್ ಪೋದಲ್ಲಿ ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮಾನ್ಯುಫಾಕ್ಚರರ್ಸ್‌ (ಸಿಯಾಮ್), 'ಸಿಯಾಮ್‌ಫೈಟಿಂಗ್‌ಫೇಕ್' ಅಭಿಯಾನವನ್ನು ಆರಂಭಿಸಿದ್ದು, ವಾಹನ ನಕಲಿ ವಸ್ತುಗಳ ವಿರುದ್ಧ ಪ್ರಚಾರ ಹಮ್ಮಿಕೊಂಡಿತ್ತು.

ಇದಕ್ಕಾಗಿ ದೆಹಲಿ ಆಟೋ ಎಕ್ಸ್ ಪೋ ನಡೆಯುವ ಸ್ಥಳದಲ್ಲಿ ಮೂರು ಸ್ಟಾಲ್‌ಗಳನ್ನು ಸ್ಥಾಪಿಸಿತ್ತು. ಇದೇ ಸಂದರ್ಭದಲ್ಲಿ 'ಸೇ ಇಟ್ ವಿತ್ ಎ ಸ್ಲೋಗನ್' ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಈ ಸಂದರ್ಭದಲ್ಲಿ ನಕಲಿ ವಸ್ತುಗಳ ವಿರುದ್ಧ ಪ್ರೇಕ್ಷಕರಿಗೆ ತಮ್ಮದೇ ಆದ ಘೋಷಣೆ ವಾಕ್ಯ ರಚಿಸುವ ಅವಕಾಶ ಮಾಡಿಕೊಡಲಾಗಿತ್ತು. ಅಷ್ಟೇ ಅಲ್ಲದೆ ಶ್ರೇಷ್ಠ ಘೋಷಣೆ ವಾಕ್ಯ ಪಡೆದವರಿಗೆ ಬಹುಮಾನ ನೀಡಲಾಗಿತ್ತು.

ಇಲ್ಲಿ 3,000ಕ್ಕೂ ಹೆಚ್ಚು ಮಂದಿ ನಕಲಿ ವಸ್ತುಗಳ ವಿರುದ್ಧ ಘೋಷಣೆ ವಾಕ್ಯ ಕೂಗಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ದೆಹಲಿ ಹಾಗೂ ಮುಂಬೈನ ವಿವಿಧ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ 'ರಿಯಲ್ vs ಫೇಕ್' ಚಿತ್ರಕಲೆ ಸ್ಪರ್ಧೆಯ ವಿಜೇತರನ್ನು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು.

ಒಟ್ಟಿನಲ್ಲಿ ನೈಜ್ಯ ಬಿಡಿಭಾಗಗಳ ಬಗ್ಗೆ ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿತ್ತು. ಇದನ್ನು ನೃತ್ಯ ಕಲಾರೂಪದ ಮೂಲಕವೂ ಪ್ರದರ್ಶಿಸಲಾಗಿತ್ತು. ಅಂತಿಮವಾಗಿ ಮೂರು ಪ್ರಮಾಣ ಗೋಡೆಗಳಲ್ಲಿ ಗ್ರಾಹಕರು ತಮ್ಮ ಹಸ್ತಾಕ್ಷರದೊಂದಿಗೆ ನಕಲಿ ವಸ್ತುಗಳ ವಿರುದ್ಧ ಹೋರಾಡುವುದಾಗಿ ಘೋಷಿಸಿದರು.

Most Read Articles

Kannada
English summary
The menace of counterfeit auto spare parts is a major worry that results in huge losses to the industry as well as negatively affects those using parts that are not genuine. To fight the problems caused by counterfeit parts and to increase awareness among the public SIAM and the newly formed Anti-Counterfeiting Group held various campaigns at the recently concluded Auto Expo 2014.
Story first published: Wednesday, February 12, 2014, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more