ಬರಿದಾಯ್ತು ಸ್ಪೈಕರ್; ಸ್ಪೋರ್ಟ್ಸ್ ಕಾರಿನ ಭವಿಷ್ಯ ಎತ್ತ?

Written By:

ಹಾಲೆಂಡ್ ಮೂಲದ ಕ್ರೀಡಾ ಕಾರು ಉತ್ಪಾದಕ ಸಂಸ್ಥೆಯಾಗಿರುವ ಸ್ಪೈಕರ್, ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಗೆ ಮುಳುಗಿದೆ ಎಂಬುದನ್ನು ಸಂಸ್ಥೆಯೇ ಘೋಷಿಸಿದೆ.

ಇದನ್ನು ಸಂಸ್ಥೆಯ ಸ್ಥಾಪಕರಾಗಿರುವ ವಿಕ್ಟರ್ ಮುಲ್ಲರ್ ಘೋಷಿಸಿದ್ದಾರೆ. ಹಾಗಿದ್ದರೂ ನಿರೀಕ್ಷೆ ಕೈಬಿಡದ ಅವರು ಹೂಡಿಕೆದಾರರು ತಮ್ಮ ಸಂಸ್ಥೆಯನ್ನು ಮೇಲೆತ್ತುವ ಭರವಸೆ ವ್ಯಕ್ತಪಡಿಸಿದ್ದಾರೆ.

To Follow DriveSpark On Facebook, Click The Like Button
spyker

ಈ ಸಂದರ್ಭದಲ್ಲಿ ಭಾವುಕರಾಗಿರುವ ವಿಕ್ಟರ್, "ಹೊಸ ಕನಸುಗಳೊಂದಿಗೆ 15 ವರ್ಷಗಳ ಹಿಂದೆ ಸಂಸ್ಥೆಯೊಂದನ್ನು ರಚಿಸಲಾಗಿತ್ತು. ಆದರೆ ಈವಾಗ ಎಲ್ಲವೂ ಶೂನ್ಯವಾಗಿದೆ" ಎಂದಿದ್ದಾರೆ.

ಈಗಿನ ಪರಿಸ್ಥಿತಿ ಗಮನಿಸಿದಾಗ, "ಇದು ಅಂತ್ಯವಲ್ಲ. ಇದು ಮುಕ್ತಾಯದ ಆರಂಭ ಕೂಡಾ ಅಲ್ಲ. ಆರಂಭದ ಮುಕ್ತಾಯವಾಗಿದೆ" ಎಂದಿದ್ದಾರೆ.

ಸ್ಪೈಕರ್ ಬಗ್ಗೆ ಒಂದಿಷ್ಟು...

1999ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಸ್ಪೈಕರ್ ಎನ್.ವಿ. ಹಾಲೆಂಡ್ ಮೂಲದ ಆಟೋಮೊಬೈಲ್ ಸಂಸ್ಥಯಾಗಿದ್ದು, ಹೈ ಎಂಡ್ ಕ್ರೀಡಾ ಕಾರುಗಳಲ್ಲಿ ಉತ್ಪಾದಿಸುತ್ತಿದೆ. ಇದರ ಕೇಂದ್ರ ಕಚೇರಿ ಹಾಲೆಂಡ್‌ನ ಝಿವೊಲ್ಡೆದಲ್ಲಿ ಸ್ಥಿತಗೊಂಡಿದೆ.

Read in English: Spyker Declares Bankruptcy
English summary
Spyker has officially declared bankruptcy, after many difficult months for this Dutch automobile manufacturer.
Story first published: Saturday, December 20, 2014, 14:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark