ಅಪಘಾತ ಪರೀಕ್ಷೆಯಲ್ಲಿ ಸೆಲೆರಿಯೊಗೆ 3 ನಕ್ಷತ್ರ

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ದೇಶದ ವಾಹನ ಮಾರುಕಟ್ಟೆಗೆ ಬಹುನಿರೀಕ್ಷಿತ ಸೆಲೆರಿಯೊ ಪ್ರಯಾಣಿಕ ಕಾರನ್ನು ಮಾರುತಿ ಸುಜುಕಿ ಬಿಡುಗಡೆಗೊಳಿಸಿತ್ತು. ಇನ್ನೊಂದೆಡೆ ಮಾರುತಿ ಅಂಗಸಂಸ್ಥೆಯಾಗಿರುವ ಜಪಾನ್‌ ಮೂಲದ ಸುಜುಕಿ ತಳಹದಿಯಲ್ಲಿ ನಿರ್ಮಾಣವಾಗಿರುವ ಸೆಲೆರಿಯೊ ಕಾರನ್ನು ಯುರೋ ಎನ್‌ಸಿಎಪಿ (Euro NCAP Test) ಅಪಘಾತ ಪರೀಕ್ಷೆಗೆ ಗುರಿಪಡಿಸಲಾಗಿದೆ.

ನಿಮ್ಮ ಮಾಹಿತಿಗಾಗಿ, 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಸೆಲೆರಿಯೊ ಇನ್ನಷ್ಟೇ ಯುರೋಪ್ ಮಾರುಕಟ್ಟೆಯನ್ನು ತಲುಪಬೇಕಾಗಿದೆ. ಇದರಂತೆ ಕಡ್ಡಾಯ ಅಪಘಾತ ಪರೀಕ್ಷೆಯಲ್ಲಿ ಭಾಗವಹಿಸಿದೆ. ಅಲ್ಲದೆ ಸರಾಸರಿ ಮೂರು ಸ್ಟಾರ್‌ಗಳನ್ನು (ಗರಿಷ್ಠ 5ರಲ್ಲಿ) ಗಿಟ್ಟಿಸಿಕೊಳ್ಳುವಲ್ಲಿ ಸೆಲೆರಿಯೊ ಯಶಸ್ವಿಯಾಗಿದೆ. ಅಂದ ಹಾಗೆ ಸುಜುಕಿ ಸೆಲೆರಿಯೊ ಯರೋಪ್‌ನಲ್ಲಿ 2014 ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.


ಯುರೋ ಎನ್‌ಸಿಎಪಿ ಇತ್ತೇಚೆಗಷ್ಟೇ ನಡೆಸಿದ್ದ ಅಪಘಾತ ಪರೀಕ್ಷೆಯಲ್ಲಿ ಸ್ವಿಫ್ಟ್ ಹಾಗೂ ದಟ್ಸನ್ ಗೊ ವೈಫಲ್ಯ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಸೆಲೆರಿಯೊ ಸುರಕ್ಷತಾ ಪರೀಕ್ಷೆ ಹೆಚ್ಚಿನ ಪ್ರಾಮುಖ್ಯತೆ ಗಿಟ್ಟಿಸಿಕೊಂಡಿತ್ತು.

ಸುಜುಕಿ ಸಂಸ್ಥೆಯು ಸದ್ಯ ಯುರೋಪ್ ಮಾರುಕಟ್ಟೆಯಲ್ಲಿ ಆಲ್ಟೊ ಮಾದರಿಯನ್ನು ಮಾರಾಟ ಮಾಡುತ್ತಿದೆ. ಇದರ ಬದಲಿ ಸ್ಥಾನವನ್ನು ಸೆಲೆರಿಯೊ ತುಂಬಲಿದೆ. ಭಾರತದಲ್ಲಿ ಬಿಡುಗಡೆಯಾಗಿದ್ದ ಸೆಲೆರಿಯೊ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಿತ್ತು. ಕೈಗೆಟಕುವ ದರಗಳಲ್ಲಿ ಎಎಂಟಿ ವರ್ಷನ್ ಪರಿಚಯಿಸಿರುವುದೇ ಸೆಲೆರಿಯೊ ಯಶಸ್ಸಿಗೆ ಕಾರಣವಾಗಿತ್ತು.

Suzuki Celerio

ಇನ್ನು ಭಾರತದಲ್ಲಿ ಲಭ್ಯವಿರುವ ಅದೇ ತಾಂತ್ರಿಕತೆಯೊಂದಿಗೆ ಸೆಲೆರಿಯೊ ಯುರೋಪ್‌ನಲ್ಲಿ ಮಾರಾಟವಾಗಲಿದೆ. ಇದು 1.0 ಲೀಟರ್ ಕೆ ಸಿರೀಸ್ ಎಂಜಿನ್ ಪಡೆದುಕೊಳ್ಳಲಿದ್ದು, 67 ಬಿಎಚ್‌ಪಿ (90 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 23 ಕೀ.ಮೀ. ಮೈಲೇಜ್ ನೀಡಲಿದೆ.

ಅಂದ ಹಾಗೆ ಯುರೋಪ್‌ನಲ್ಲಿ ಮಾರಾಟವಾಗಲಿರುವ ಸೆಲೆರಿಯೊ ಭಾರತದಲ್ಲಿ ನಿರ್ಮಾಣವಾಗುವುದಿಲ್ಲ. ಬದಲಾಗಿ ಥಾಯ್ಲೆಂಡ್ ಘಟಕದಲ್ಲಿ ಉತ್ಪಾದನೆಯಾಗಲಿದೆ. ಅಂತೆಯೇ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ಸೆಲೆರಿಯೊ ಅಪಘಾತ ಪರೀಕ್ಷೆ ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/k0AwHKJwz9Q?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Japanese automobile Suzuki had launched its Celerio family hatchback at 2014 Auto Expo. The vehicle was then launched only in India, however, it was announced that it would be offered in Europe as well.&#13;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X