ಜೆ-ನರ್ಮ್-II ಯೋಜನೆಯಡಿ ರಾಜ್ಯದಲ್ಲಿ ಓಡಾಡಲಿದೆ 487 ಟಾಟಾ ಬಸ್

By Nagaraja

ಜವಾಹರಲಾಲ್‌ ನೆಹರೂ ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ-II (ಜೆ-ನರ್ಮ್‌) ಅಡಿ ಕರ್ನಾಟಕಕ್ಕೆ ಮತ್ತೆ 487 ಹೊಸ ಬಸ್ಸುಗಳ ಸೇರ್ಪಡೆಯಾಗಲಿದೆ. ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್‌ಆರ್‌ಟಿಸಿ) ನಿರ್ದೇಶ ಪಡೆದಿರುವುದಾಗಿ ಟಾಟಾ ಮೋಟಾರ್ಸ್ ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಕೇವಲ ಕೆಎಸ್‌ಆರ್‌ಟಿಸಿ ಮಾತ್ರವಲ್ಲ ಹಿಮಾಚಲ ರಸ್ತೆ ಸಾರಿಗೆ ನಿಗಮದಿಂದಲೂ ಇದಕ್ಕೆ ಸಮಾನವಾದ ಆದೇಶವನ್ನು (780) ಟಾಟಾ ಪಡೆದುಕೊಂಡಿದೆ. ಒಟ್ಟಾರೆಯಾಗಿ ಟಾಟಾ ಸಂಸ್ಥೆಗೆ ಜೆ ನರ್ಮ್ ಸ್ಕೀಮ್ II ಯೋಜನೆಯಡಿ ಒಟ್ಟು 2700 ಬಸ್ಸುಗಳ ನಿರ್ಮಾಣಕ್ಕೆ ಆಜ್ಞೆ ಲಭಿಸಿರುತ್ತದೆ.

Tata bus

ಟಾಟಾದ ನಗರ ಬಸ್ಸುಗಳು ಎಲ್ಲ ಹೊಸತನದಿಂದ ಕೂಡಿರಲಿದ್ದು, ಗುಣಮಟ್ಟ, ಸುರಕ್ಷತೆ ಮತ್ತು ಪ್ರಯಾಣಿಕರ ಆರಾಮದಾಯಕತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಇಂತಹ ಬಸ್ಸುಗಳಲ್ಲಿ ಸಿಸಿಟಿ ಕ್ಯಾಮೆರಾ ಆಳವಡಿಸಲಾಗುವುದು. ಇದು ಬಸ್ಸಿನಲ್ಲಿ ಕ್ಷಣ ಕ್ಷಣದ ಆಗು ಹೋಗುಗಳನ್ನು ಸೆರೆ ಹಿಡಿಯಲು ನೆರವಾಗಲಿದೆ.

ಇಂತಹ ನಗರ ಬಸ್ಸುಗಳು ಸಾರ್ವಜನಿಕ ಮಾಹಿತಿಗಾಗಿ ಇಂಟೆಲಿಜೆನ್ಸ್ ಟ್ರಾನ್ಸ್‌ಫೋರ್ಟ್ ಸಿಸ್ಟಂ (ಐಟಿಎಸ್) ವ್ಯವಸ್ಥೆಯನ್ನು ಹೊಂದಿರಲಿದೆ. ಹಾಗೆಯೇ ಜಿಪಿಎಸ್ ಎಲೆಕ್ಟ್ರಾನಿಕ್ ಪರದೆಯ ನೆರವಿನಿಂದ ತಲುಪುವ ಸಮಯ, ಹಾದಿ ಮುಂತಾದ ಅಗತ್ಯ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಲು ನೆರವಾಗಲಿದೆ.

Most Read Articles

Kannada
English summary
Tata Motors today announced that it had received an order from KSRTC (Karnataka State Road Transport Corporation) to supply 487 nos. and another for 780 nos. from HRTC (Himachal Road Transport Corporation) for Tata Marcopolo built buses as per “Urban Bus Specifications” under JNNURM – II scheme.
Story first published: Tuesday, September 2, 2014, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X