ಇನ್ನು ಮುಂದೆ ಟಾಟಾ ಕಾರುಗಳಲ್ಲಿ ಸ್ಯಾಮ್‌ಸಂಗ್ 'ಡ್ರೈವ್ ಲಿಂಕ್' ಆಪ್

Written By:

ಜಗತ್ತಿನ ದೈತ್ಯ ವಾಹನ ತಯಾರಕ ಸಂಸ್ಥೆಗಳು ಅಪಲ್ ಹಾಗೂ ಗೂಗಲ್‌ಗಳಂತಹ ಸಂಸ್ಥೆಗಳೊಂದಿಗೆ ಕೈ ಜೋಡಿಸಿಕೊಂಡು ನೂತನ ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಕಾರುಗಳಲ್ಲಿ ಸ್ಮಾರ್ಟ್ ಫೋನ್ ಓಪರೇಟಿಂಗ್ ಸಿಸ್ಟಂ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಇದರಿಂದ ಹೊರತಾಗಿಲ್ಲ.

ಹೌದು, ದಕ್ಷಿಣ ಕೊರಿಯಾದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಮ್‌ಸಂಗ್ ಜತೆಗೂಡಿರುವ ಟಾಟಾ ಮೋಟಾರ್ಸ್ ಕಾರುಗಳಲ್ಲಿ ನೂತನ ಮೊಬೈಲ್ ಓಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಿದೆ.

2014 ಆಟೋ ಎಕ್ಸ್‌ಪೋದಲ್ಲಿ ಕಂಡುಬಂದಿರುವ ಒಪ್ಪಂದದ ಪ್ರಕಾರ ಟಾಟಾ ಕಾರುಗಳಲ್ಲಿ ಸ್ಯಾಮ್‌ಸಂಗ್ 'ಡ್ರೈವ್ ಲಿಂಗ್' ಅಪ್ಲಿಕೇಷನ್ ಆಳವಡಿಸಲಾಗುವುದು. ಇದು ಮೈಕ್ರೊಲಿಂಕ್ ತಂತ್ರಗಾರಿಕೆಯ ಮುಖಾಂತರ ಟಾಟಾ ಕಾರುಗಳ ಮಾಹಿತಿ ಮನರಂಜನಾ ಸಿಸ್ಟಂಗಳಿಗೆ ಕನೆಕ್ಟ್ ಮಾಡಲಿದೆ. ಇದರ ಫಲವಾಗಿ ಹೆಚ್ಚು ಸುಲಿಲತಾದ, ಸುರಕ್ಷಿತ ಹಾಗೂ ಉಪಯುಕ್ತವಾದ ಮಾಹಿತಿ ಮನರಂಜನಾ ವ್ಯವಸ್ಥೆಯು ಆಳವಡಿಕೆಯಾಗಲಿದೆ. ಇದರಲ್ಲಿ ಇಂಟೆರ್‌ನೆಟ್ ಸಂಪರ್ಕದೊಂದಿಗೆ, ಸಂಗೀತ, ನೇವಿಗೇಷನ್, ಹ್ಯಾಂಡ್ಸ್ ಫ್ರಿ ತಂತ್ರಜ್ಞಾನ, ಟೆಕ್ಸ್ಟ್ ಟು ಸ್ಪೀಚ್ ವೈಶಿಷ್ಟ್ಯಗಳು ಒಳಗೊಂಡಿರಲಿದೆ.

ಇವೆಲ್ಲದರ ಜತೆಗೆ ಆನ್ ಬೋರ್ಡ್ ಡಯೊಗ್ನೊಸ್ಟಿಕ್, ವೆಹಿಕಲ್ ಲೈಫ್‌ಸೈಕಲ್ ನಿರ್ವಹಣಾ ಮಾಹಿತಿಗಳನ್ನು ಪ್ರಸ್ತುತ ಅಪ್ಲಿಕೇಷನ್ ಒಳಗೊಂಡಿರಲಿದೆ. ಇದು ಚಾಲಕರಿಗೆ ಸರ್ವೀಸ್ ಮಾಡಿಸಬೇಕಾದ ದಿನಾಂಕ ಮತ್ತು ವಾಹನ ಕೆಟ್ಟಿದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಒದಗಿಸಲಿದೆ.

Tata Motors

ಒಟ್ಟಿನಲ್ಲಿ ಸ್ಯಾಮ್‌ಸಂಗ್ ಡ್ರೈವ್ ಲಿಂಕ್ ಅಪ್ಲಿಕೇಷನ್ ಡ್ಯಾಶ್‌ಬೋರ್ಡ್‌ನಲ್ಲಿರುವ ಮಾಹಿತಿ ಮನರಂಜನಾ ವ್ಯವಸ್ಥೆಗಷ್ಟೇ ಸೀಮಿತವಲ್ಲ. ಬದಲಾಗಿ ಇದು ಕಾರಿನಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರಿಗೂ ಉಪಯುಕ್ತ ಮಾಹಿತಿಯನ್ನು ಒದಗಿಸಲಿದೆ. ಅಂದರೆ ರಿಯರ್ ಸೀಟ್ ಸಂಪರ್ಕಿತ ಟ್ಯಾಬ್ಲೆಟ್ ಹಾಗೂ ಇತರ ಡಿವೈಸ್‌ಗಳ ಸೇವೆಯನ್ನು ಹೊಂದಿರಲಿದೆ.

English summary
Even as global automakers are teaming up with technology giants like Apple and Google to provide in-car infotainment solutions through their mobile operating systems iOS and Android respectively, Indian auto major Tata Motors has signed a deal with South Korean smartphone leader, Samsung.
Story first published: Friday, February 14, 2014, 14:58 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more