ಇನ್ನು ನ್ಯಾನೋ ಆಗಲಿದೆ 'ಸ್ಮಾರ್ಟ್ ಸಿಟಿ ಕಾರು'

Written By:

ವಿಶ್ವದ ಅತಿ ಅಗ್ಗದ ಕಾರೆಂಬ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಅಂತೆಯೇ ದೇಶದ ಹಲವಾರು ಮಧ್ಯಮ ವರ್ಗದ ಕುಟುಂಬದ ಕಾರೆಂಬ ಕನಸನ್ನು ನನಸಾಗಿಸಿರುವ ಟಾಟಾ ನ್ಯಾನೋ ಸದ್ಯದಲ್ಲೇ ಹೊಸ ರೂಪ ಪಡೆದುಕೊಳ್ಳಲಿದ್ದು, ಮುಂದಿನ ವರ್ಷದಿಂದ 'ಸ್ಮಾರ್ಟ್ ಸಿಟಿ ಕಾರು' ಎಂದೆನಿಸಿಕೊಳ್ಳಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಟಾಟಾ ಮೋಟಾರ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಗಿರೀಶ್ ವಾಗ್, 'ನ್ಯಾನೋ ಬ್ರಾಂಡಿಂಗ್ ವಿಚಾರದಲ್ಲಿ ಆಗಿರುವ ತಪ್ಪಿನಿಂದಾಗಿ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ. ಇದು ಮುಂದಿನ ವರ್ಷದಲ್ಲಿ ಅಗ್ಗದ ಕಾರೆಂಬ ಬದಲು ಸ್ಮಾರ್ಟ್ ಕಾರೆನೆಸಿಕೊಳ್ಳಲಿದೆ' ಎಂದಿದ್ದಾರೆ.

Tata Nano

ಜನರ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ನ್ಯಾನೋದಲ್ಲಿ ಹಲವಾರು ನಾವೀತ್ಯತೆಯ ವೈಶಿಷ್ಟ್ಯಗಳನ್ನು ಆಳವಡಿಸಲಾಗುವುದು. ಇದು ನ್ಯಾನೋ ಗುಣಮಟ್ಟದ ಉತ್ಪನ್ನವಾಗಿ ಮಾರ್ಪಾಡಿಸಲು ನೆರವಾಗಲಿದೆ. ಇದೇ ಸಂದರ್ಭದಲ್ಲಿ ನ್ಯಾನೋ ಸುರಕ್ಷತೆಗೂ ಹೆಚ್ಚು ಆದ್ಯತೆ ಕೊಡಲಾಗುವುದು ಎಂಬುದನ್ನು ಅವರು ತಿಳಿಸಿದರು.

ನ್ಯಾನೋ ಕಾರುಗಳ ಮೇಲೆನ ಅಪಪ್ರಚಾರವೇ ಅತಿ ಹೆಚ್ಚು ಹಿನ್ನಡೆಗೆ ಕಾರಣವಾಗಿದೆ. ಅನೇಕ ಮಂದಿ ನ್ಯಾನೋ ಟೆಸ್ಟ್ ಡ್ರೈವ್ ಮಾಡುತ್ತಿದ್ದರೂ ಅಪಪ್ರಚಾರ ಆಲಿಸಿದಾಕ್ಷಣ ತಮ್ಮ ಯೋಜನೆ ಕೈಬಿಡುತ್ತಿರುವುದಾಗಿ ತಿಳಿಸಿದ್ದಾರೆ.

Read in English: New Nano On The Cards
English summary
The world's cheapest car, the Tata Nano will get a makeover when it is relaunched next year under the name 'Smart City Car'.
Story first published: Saturday, August 16, 2014, 12:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark