ಫ್ರಂಟ್ ಸಸ್ಪೆನ್ಷನ್ ಸಮಸ್ಯೆ; ಟೊಯೊಟಾ ಕ್ಯಾಮ್ರಿ ಹಿಂದಕ್ಕೆ ಕರೆ

By Nagaraja

ಅತ್ಯ್ತುತ್ತಮ ಗುಣಮಟ್ಟದ ಕಾರುಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಗೀಗ ಸಮಸ್ಯೆ ತಟ್ಟಿದೆ.

ವರದಿಗಳ ಪ್ರಕಾರ ಟೊಯೊಟಾ ಕ್ಯಾಮ್ರಿ ಕಾರಿನ ಫ್ರಂಟ್ ಸಸ್ಪೆನ್ಫನ್‌ನಲ್ಲಿ ಸಮಸ್ಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಬಹುನಿರೀಕ್ಷಿತ ಮಾದರಿಯನ್ನು ಹಿಂದಕ್ಕೆ ಕರೆಯಲು ಟೊಯೊಟಾ ಸಂಸ್ಥೆಯು ನಿರ್ಧರಿಸಿದೆ.

ನಿಮ್ಮ ಮಾಹಿತಿಗಾಗಿ, ಒರಟು ರಸ್ತೆಯಲ್ಲಿ ಚಲಿಸುವಾಗ ಘರ್ಷಣೆಯನ್ನು ತಗ್ಗಿಸಲು ವಾಹನದ ಚಕ್ರಗಳ ಮೇಲ್ಭಾಗದಲ್ಲಿ ಆಳವಡಿಸಲಾಗುವ ಸಸ್ಪೆನ್ಷನ್ ಸಲಕರಣೆಯು ಆರಾಮದಾಯಕ ಚಲನೆಗೆ ಅತ್ಯಧಿಕ ಮಹತ್ವವೆನಿಸುತ್ತದೆ.

Toyota Camry

ಇದೀಗ ಕಾರಿನ ಮುಂಭಾಗದ ಸಸ್ಪೆನ್ಷನ್‌ನಲ್ಲಿ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಟೊಯೊಟಾ ಕ್ಯಾಮ್ರಿ ಮಾದರಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತದೆ. ಇದರಲ್ಲಿ ಯುರೋಪ್, ಅಮೆರಿಕ ಸೇರಿದಂತೆ ಭಾರತದ ಮಾದರಿಗಳು ಸೇರಿವೆ.

ಒಟ್ಟು 1.7 ಲಕ್ಷ ಯುನಿಟ್‌ಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗಿದೆ. ಇವೆಲ್ಲವೂ ಜಪಾನ್‌ನಲ್ಲೇ ತಯಾರಿಯಾಗಿದ್ದು, ತದಾ ಬಳಿಕ ಇತರ ರಾಷ್ಟ್ರಗಳಿಗೆ ರಫ್ತಾಗಿವೆ. ಅಲ್ಲದೆ ಸಮಸ್ಯೆ ಬಾಧಿತ ಕಾರುಗಳಿಗೆ ಉಚಿತವಾಗಿ ಬದಲಿ ಸಸ್ಪೆನ್ಷನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

2011 ಮಾರ್ಚ್ ತಿಂಗಳಿಂದ ಜುಲೈ ವರೆಗೆ ಉತ್ಪಾದನೆಯಾದ 119 ಕ್ಯಾಮ್ರಿ ಮಾದರಿಗಳನ್ನು ಭಾರತಕ್ಕೂ ಆಮದು ಮಾಡಲಾಗಿತ್ತು. ಇದರಲ್ಲೂ ಸಮಸ್ಯೆ ಇದೆಯೇ ಇನ್ನಷ್ಟೇ ತಿಳಿದು ಬರಬೇಕಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ದೂರ ದಾಖಲಾಗಿಲ್ಲ ಎಂಬುದನ್ನು ಸಂಸ್ಥೆ ತಿಳಿಸಿದೆ.

ಬೈಕ್ ಎನ್ ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ - 340 ರು. ಗಳಿಂದ ತ್ವರೆ ಮಾಡಿ

Most Read Articles

Kannada
English summary
Toyota today is in the news, as they will be recalling several of their Camry vehicles sold globally. The models affected are in Europe, United States and India. There is an issue with the front suspension of this sedan.
Story first published: Friday, November 14, 2014, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X