ದೆಹಲಿಯಲ್ಲಿ 15 ವರ್ಷಕ್ಕೂ ಹಳೆಯ ವಾಹನಗಳಿಗೆ ನಿಷೇಧ!

By Nagaraja

ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಕಟ್ಟುನಿಟ್ಟಿನ ನಿಯಮ ಪಾಲನೆಗೆ ಆದೇಶ ಹೊರಡಿಸಿದ್ದು 15 ವರ್ಷಕ್ಕಿಂತಲೂ ಹಳೆಯದಾದ ವಾಹನಗಳನ್ನು ನಿಲುಗಡೆಗೊಳಿಸುವಂತೆ ಆದೇಶಿಸಿದೆ.

ಹಸಿರು ನ್ಯಾಯಾಲಯದ ಈ ಆದೇಶದೊಂದಿಗೆ ರಸ್ತೆಯಲ್ಲಿ ಅಂದಾಜು 10 ಲಕ್ಷ ಡೀಸೆಲ್ ಹಾಗೂ ಪೆಟ್ರೋಲ್ ಗಾಡಿಗಳ ಓಡಾಟ ನಿಲುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಸಂಬಂಧಪಟ್ಟಂತೆ ಕೆಲವೊಂದು ನಿರ್ಬಂಧ ಹಾಗೂ ಅತಿಮ ಭಾರದ ಟ್ರಕ್‌ಗಳು ನಗರ ಪ್ರವೇಶಿಸಿದಂತೆ ಆದೇಶ ಹೊರಡಿಸಿದೆ.

delhi

ಸಾರ್ವಜನಿಕ ನ್ಯಾಯಾಲಯದ ಅಧಿಕಾರ ಹೊಂದಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು, ತಕ್ಷಣದಿಂದ ನಗರದಲ್ಲಿ ಸೈಕಲ್ ಮಾರ್ಗ ನಿರ್ಮಿಸುವಂತೆಯು ಸೂಚನೆ ನೀಡಿದೆ. ಅಂತೆಯೇ ನಗರದಲ್ಲಿ ವಾಯು ಶುದ್ಧೀಕರಣ ಸಾಧ್ಯತೆಯನ್ನು ಅನ್ವೇಷಣೆ ಮಾಡುವಂತೆಯೇ ಅಧಿಕಾರಿಗಳಿಗೆ ಸೂಚಿಸಿದೆ.

ಎನ್‌ಜಿಟಿ ಮುಖ್ಯಸ್ಥ ಸ್ವಾಂತತೇರ್ ಕುಮಾರ್ ಅಧ್ಯಕ್ಷತೆಯಲ್ಲಿ ಸೇರಿದ ನ್ಯಾಯಪೀಠವು ಸರಿ ಸುಮಾರು ಒಂದು ವರ್ಷದ ಹಿಂದೆ ವರ್ಧಮಾನ್ ಕೌಶಿಕ್ ನೀಡಿರುವ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ 14 ಮಹತ್ವದ ತೀರ್ಪುಗಳನ್ನು ನೀಡಿದೆ.

ದಿನ ಸಾಗಿದಂತೆ ದೆಹಲಿ ಪರಿಸರ ಹದೆಗೆಡುತ್ತಿದೆ. ಇದರಿಂದಾಗಿ 15 ವರ್ಷಕ್ಕಿಂತಲೂ ಹಳೆಯ ವಾಹನಗಳನ್ನು ಆರ್‌ಟಿಇ ಇಲಾಖೆ ನವೀಕರಣ ಅಥವಾ ಮರು ನೋಂದಣಿ ಮಾಡುವಂತಿಲ್ಲ. ಇಂತಹ ವಾಹನಗಳು ಸಾರ್ವಜನಿಕ ಪ್ರದೇಶದಲ್ಲಿ ಕಂಡುಬಂದಲ್ಲಿ ಮುಟ್ಟುಗೋಲು ಹಾಕಬೇಕು ಎಂದು ಆದೇಶಿಸಿದೆ.

Most Read Articles

Kannada
English summary
The National Green Tribunal (NGT) ordered a set of directions to overcome the problem. Of the 14 orders made by a bench headed by NGT's chairperson Swatanter Kumar, the most important one is to ban all the petrol and diesel vehicles that are older than 15 years. 
Story first published: Friday, November 28, 2014, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X