ವೋಲ್ವೋ ಕಾನ್ಸೆಪ್ಟ್ ಎಕ್ಸ್‌ಸಿ ಕೂಪೆ ಅನಾವರಣ

Written By:

ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಲ್ವೋ ತನ್ನ ನೂತನ ಎಕ್ಸ್‌ಸಿ ಕೂಪೆ ಕಾನ್ಸೆಪ್ಟ್‌ ಅನಾವರಣಗೊಳಿಸಿದೆ. ಇಲ್ಲಿ ಆಕರ್ಷಕ ಚಿತ್ರ ಸೇರಿದಂತೆ ವೀಡಿಯೋ ಬಿಡುಗಡೆಗೊಳಿಸಲಾಗಿದೆ.

ಎರಡು ಡೋರಿನ ಕ್ರಾಸೋವರ್ ಕಾನ್ಸೆಪ್ಟ್ ಆಗಿರುವ ಎಕ್ಸ್‌ಸಿ ಕೂಪೆ ಮುಂಬರುವ ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳ್ಳಲಿದೆ. ಈ ಪ್ರತಿಷ್ಠಿತ ಆಟೋ ಮೇಳ ಮುಂದಿನ ತಿಂಗಳಲ್ಲಿ ಸಾಗಲಿದೆ. ಇದಕ್ಕೆ ಮುನ್ನುಡಿಯಾಗಿ ಎಕ್ಸ್‌ಸಿ ಕೂಪೆ ವಿವರವನ್ನು ಕಂಪನಿ ಬಹಿರಂಗಪಡಿಸಿದೆ.

To Follow DriveSpark On Facebook, Click The Like Button
Volvo Concept XC Coupe

ವೋಲ್ವೋ ಎಕ್ಸ್‌ಸಿ ಕೂಪೆ ಕಾನ್ಸೆಪ್ಟ್ ತಲಹದಿಯ ಎಕ್ಸ್‌ಸಿ90 ಕ್ರಾಸೋವರ್ ವರ್ಷಾಂತ್ಯದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಕೂಪೆ ಕಾನ್ಸೆಪ್ಟ್ ರೀತಿಯಲ್ಲೇ ಎಕ್ಸ್‌ಸಿ ಕೂಪೆ ಕೂಡಾ ವೋಲ್ವೋದ ಸ್ಕೇಲಬಲ್ ಪ್ರಾಡಕ್ಟ್ ಆರ್ಕಿಟೆಕ್ಚರ್ (ಎಸ್‌ಪಿಎ) ತಲಹದಿಯಲ್ಲಿ ನಿರ್ಮಾಣವಾಗಲಿದೆ.

ಹಾಗಿದ್ದರೂ ಡಿಸೈನ್ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬಂದಿಲ್ಲ. ಆದರೂ ಆಧುನಿಕ ಕ್ರೀಡಾ ವಿನ್ಯಾಸವನ್ನು ಪಡೆದುಕೊಳ್ಳಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದೆ.

<center><iframe width="100%" height="450" src="//www.youtube.com/embed/JCwNXQwc144" frameborder="0" allowfullscreen></iframe></center>

English summary
Volvo has released images and a video of the second of the three design studies, the first being the Coupe Concept. This one is a two door crossover concept called the XC Coupe and it is set to be unveiled at the Detroit Motor Show this month.&#13;
Story first published: Thursday, January 9, 2014, 15:01 [IST]
Please Wait while comments are loading...

Latest Photos