2015ರಲ್ಲಿ ಜಪಾನ್ ಎಸ್‌ಯುವಿ ಹೋಂಡಾ ಸಿಆರ್-ವಿ ಎಂಟ್ರಿ

Written By:

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ 2014ನೇ ಸಾಲಿನಲ್ಲಿ ಸಿಟಿ ಸೆಡಾನ್‌ಗಳಂತಹ ಗಮನಾರ್ಹ ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿತ್ತು.

ಪ್ರಸ್ತುತ, ಸಂಸ್ಥೆಯು ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿರುವ ಸಿಆರ್-ವಿ ಪರಿಚಯಿಸಲು ಹೊರಟಿದೆ. ಬಲ್ಲ ಮೂಲಗಳ ಪ್ರಕಾರ 2015ನೇ ಸಾಲಿನಲ್ಲೇ ಹೋಂಡಾ ಸಿಆರ್-ವಿ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

honda crv

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೋಂಡಾ ಸಿಆರ್-ವಿ ದುಬಾರಿ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದೆ. ನಿಸ್ಸಂಶಯವಾಗಿಯೂ ಇದು ಭಾರತ ಪ್ರವೇಶಿಸಲಿದ್ದಲ್ಲಿ ಸಿರಿವಂತರ ಕುಟುಂಬವನ್ನು ಆಕರ್ಷಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮೊದಲ ಬಾರಿಗೆ ಅಮೇಜ್ ಹಾಗೂ ಸಿಟಿ ಡೀಸೆಲ್ ಮಾದರಿಗಳ ಮೂಲಕ ದೇಶದಲ್ಲಿ ಮೋಡಿ ಮಾಡಿದ್ದ ಹೋಂಡಾ, ಸಿಆರ್-ವಿ ಮಾದರಿಯನ್ನೇ ದೇಶಕ್ಕೆ ಪರಿಚಯಿಸಲಿದೆ. ಈ ಮೂಲಕ ಡೀಸೆಲ್ ಮಾದರಿಗಳಲ್ಲಿ ತಮ್ಮ ಕ್ಷಮತೆಯನ್ನು ಮಗದೊಮ್ಮೆ ತೋರ್ಪಡಿಸಲಿದೆ.

2013 ಜಿನೆವಾ ಮೋಟಾರು ಶೋದಲ್ಲಿ ಹೋಂಡಾ ಸಂಸ್ಥೆಯು ಸಿಆರ್-ವಿ 1.5 ಲೀಟರ್ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್ ಪರಿಚಯಿಸಿತ್ತು. ಇದೇ ಎಂಜಿನ್ ಭಾರತಕ್ಕೆ ಪರಿಚಯವಾಗುವ ಸಿಆರ್-ವಿ ಮಾದರಿಯಲ್ಲೂ ಪರಿಚಯಿಸುವ ಸಾಧ್ಯತೆಯಿದೆ. ಇದು 118 ಅಶ್ವಶಕ್ತಿ (200 ತಿರುಗುಬಲ) ಉತ್ಪಾದಿಸಲಿದೆ.

ಅಂತೆಯೇ 2.0 ಲೀಟರ್ (154ಅಶ್ವಶಕ್ತಿ, 189 ತಿರುಗುಬಲ) ಅಥವಾ 2.4 ಲೀಟರ್ (187ಅಶ್ವಶಕ್ತಿ, 225 ತಿರುಗುಬಲ) ಪೆಟ್ರೋಲ್ ಎಂಜಿನ್ ಕೂಡಾ ಇರಲಿದೆ. ಇನ್ನು ಹೋಂಡಾ ಸಿಆರ್-ವಿ ದೇಶದಲ್ಲಿ 20ರಿಂದ 25 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಇದು ಟೊಯೊಟಾ ಫಾರ್ಚ್ಯುನರ್ ಸವಾಲನ್ನು ಎದುರಿಸಲಿದೆ.

English summary
Japanese carmaker Honda unveiled the 2015 CR-V facelift which was showcased at the 2014 Paris Motor Show as a concept.
Story first published: Saturday, January 3, 2015, 12:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark