ವಿಶಿಷ್ಟ ನೋಟದ 2016 ಹೋಂಡಾ ಅಕಾರ್ಡ್ ಅನಾವರಣ

Written By:

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಅತಿ ನೂತನ 2016 ಹೋಂಡಾ ಅಕಾರ್ಡ್ ಕಾರನ್ನು ಭರ್ಜರಿಯಾಗಿ ಅನಾವರಣಗೊಳಿಸಿದೆ. ನೂತನ ಕಾರು ವಿಶಿಷ್ಟ ನೋಟವನ್ನು ಕಾಪಾಡಿಕೊಂಡಿರುವುದು ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.

ಹೊರಮೈಯಲ್ಲಿ ನಿಖರವಾದ ಸ್ವಭಾವ ರೇಖೆಗಳು ಹೆಚ್ಚು ಆಕರ್ಷಕವೆನಿಸಿದೆ. ಅಲ್ಲದೆ ಕಾರಿನೊಳಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

To Follow DriveSpark On Facebook, Click The Like Button
2016 ಹೋಂಡಾ ಅಕಾರ್ಡ್

ಎಂಜಿನ್ ತಾಂತ್ರಿಕತೆ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 2.4 ಲೀಟರ್ ಫೋರ್ ಸಿಲಿಂಡರ್ ಅಥವಾ 3.5 ಲೀಟರ್ ವಿ6 ಎಂಜಿನ್ ಪಡೆದುಕೊಳ್ಳಲಿದೆ. ಇನ್ನು ಫೋರ್ ಸಿಲಿಂಡರ್ ಎಂಜಿನ್ ಸಿಕ್ಸ್ ಸ್ಪೀಡ್ ಅಥವಾ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ. ಅದೇ ಹೊತ್ತಿಗೆ ವಿ6 ಮಾದರಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದಾಗಿದೆ.

ಇನ್ನುಳಿದಂತೆ ಎಲ್ ಇಡಿ ಹೈಡ್ ಲೈಟ್, ಎಲ್ ಇಡಿ ಫಾಗ್ ಲೈಟ್, ಹೊಸ ಗ್ರಿಲ್, ಟೈಲ್ ಲೈಟ್ ಮತ್ತು 19 ಇಂಚುಗಳ ಅಲಾಯ್ ವೀಲ್ ಗಳು ಹೆಚ್ಚಿನ ಪ್ರೀಮಿಯಂ ಲುಕ್ ನೀಡಲಿದೆ.

2016 ಹೋಂಡಾ ಅಕಾರ್ಡ್

ಒಳಮೈಯಲ್ಲಿರುವ ಏಳು ಇಂಚುಗಳ ಬೃಹತ್ ಟಚ್ ಸ್ಕ್ರೀನ್ ನಲ್ಲಿ ನೀಡಲಾಗಿರುವ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯವು ಮೆಚ್ಚುಗೆಗೆ ಪಾತ್ರವಾಗಲಿದೆ. ಇನ್ನು ಹೀಟಡ್ ರಿಯರ್ ಸೀಟು, ಎಚ್ ಡಿ ರೆಡಿಯೋ, 60/40 ವಿಭಜಿತ ಸೀಟು ಸಂಯೋಜನೆ ಹಾಗೂ ರೈನ್ ಸೆನ್ಸಿಂಗ್ ವೈಪರ್ ಮುಂತಾದ ವೈಶಿಷ್ಟ್ಯಗಳಿರಲಿದೆ.

2016 ಹೋಂಡಾ ಅಕಾರ್ಡ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಢಿಕ್ಕಿ ತಗ್ಗಿಸುವಿಕೆ ಬ್ರೇಕಿಂಗ್ ಸಿಸ್ಟಂ, ಮುಂಭಾಗ ಸಂಘರ್ಷ ಎಚ್ಚರಿಕೆ, ಲೇನ್ ಎಚ್ಚರಿಕೆ, ಏರ್ ಬ್ಯಾಗ್, ಅಡಾಪ್ಟಿಪ್ ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳಿರಲಿದೆ.

English summary
2016 Honda Accord Unveiled; Gets Apple CarPlay And Style Upgrades
Story first published: Saturday, July 25, 2015, 10:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark