ಭರ್ತಿ 999999 ಕೀ.ಮೀ.; ಇನ್ನೂ ಮುಂದಕ್ಕೆ..!

Written By:

ಜೀವನ ಕಾಲ ಪರ್ಯಂತ ಓಡಿಸಿದರೂ ಸಾಮಾನ್ಯ ಕಾರೊಂದು ಎಷ್ಟು ಕೀ.ಮೀ. ದೂರ ಕ್ರಮಿಸಬಹುದು? ಆ ನಿರ್ದಿಷ್ಠ ಕಾರಿಗೆ ಅಷ್ಟೊಂದು ಬಾಳ್ವಿಕೆ ಬರಬಹುದೇ? ಹೌದು, ಹಳೆಯ ಕಾರಿಗೆ ಇವೆಲ್ಲ ತೊಂದರೆಗಳು ಎದುರಾಗುವುದು ಸಾಮಾನ್ಯ.

ಆದರೆ ಇವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಓಮಾನ್ ನ ಕಾರು ಯಶಸ್ವಿಯಾಗಿದೆ. ಅದುವೇ ಟೊಯೊಟಾ ಕರೊಲ್ಲಾ. ಇದರ ಒಡೆತನವನ್ನು ಮೊಹಮ್ಮದ್ ಸೈದ್ ಅಬ್ದುಲ್ಲಾ ಅನ್ ಹಿನಾ ಎಂಬವರು ಹೊಂದಿದ್ದಾರೆ.

To Follow DriveSpark On Facebook, Click The Like Button
toyota corolla

1998ನೇ ಇಸವಿಯಲ್ಲಿ ಮೊಹಮ್ಮದ್ ಹೊಚ್ಚ ಹೊಸ ಟೊಯೊಟಾ ಕರೊಲ್ಲಾ ಕಾರನ್ನು ಖರೀದಿಸಿದ್ದರು. ಈಗ 13 ವರ್ಷಗಳ ಬಳಿಕ ಟೊಯೊಟಾದ ಸಂತೃಪ್ತ ಗ್ರಾಹಕರೆನಿಸಿಕೊಂಡಿದ್ದಾರೆ. ಅಲ್ಲದೆ ಒಂದು ಬಾರಿಯೂ ತಮ್ಮ ಕರೊಲ್ಲಾ ಕಾರನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ.

ಈಗ ಟೊಯೊಟಾ ಕರೊಲ್ಲಾ ಭರ್ಜರಿ 999999 ಕೀ.ಮೀ. ದೂರವನ್ನು ಕ್ರಮಿಸಿದ್ದು ಒಂದು ಮಿಲಿಯನ್ (10 ಲಕ್ಷ) ಎಂಬ ಮ್ಯಾಜಿಕ್ ಸಂಖ್ಯೆಗೆ ದಾಪುಗಾಲನ್ನಿಟ್ಟಿದೆ. ಇದು ಕರೊಲ್ಲಾ ಮಾಲಿಕನಿಗೆ ಸೇರಿದಂತೆ ಟೊಯೆಟಾ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿ ಪರಿಣಮಿಸಿದೆ. ಅಲ್ಲದೆ ಟೊಯೊಟಾ ಓಮಾನ್ ಅಧಿಕೃತ ಫೇಸ್ ಬುಕ್ ಪುಟದಲ್ಲೂ ಇದನ್ನು ಹಂಚಿಕೊಳ್ಳಲಾಗಿದೆ.

toyota corolla

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್, "ನಿರ್ವಹಣೆ, ವಿಶ್ವಾಸಾರ್ಹತೆ ಹಾಗೂ ಬಾಳ್ವಿಕೆಯ ವಿಚಾರದಲ್ಲಿ ಕರೊಲ್ಲಾ ಅದ್ಭುತವೆನಿಸಿದ್ದು, ಟೊಯೊಟಾಗೆ ಟೊಯೊಟಾ ಮಾತ್ರ ಸರಿಸಾಟಿ" ಎಂದು ವರ್ಣಿಸಿದ್ದಾರೆ. ಅಲ್ಲದೆ ಇದರ ಪಾಲನೆಗಾಗಿ ಹೆಚ್ಚಿನ ಖರ್ಚೇನು ಮಾಡಿಲ್ಲ. ಬದಲಾಗಿ ನಿಯಮಿತ ಸರ್ವಿಸ್ ಗಳನ್ನಷ್ಟೇ ಮಾಡುತ್ತಿದ್ದೆ ಎಂದಿದ್ದಾರೆ.

ಟ್ಯಾಕ್ಸಿ ಸೇವೆಯನ್ನು ಹೊಂದಿರುವ ಮೊಹಮ್ಮದ್ ಈಗ ಟೊಯೊಟಾದ ನಿಷ್ಠಾವಂತ ಗ್ರಾಹಕನಾಗಿದ್ದು, ಅವರ ಬಳಿ ಲ್ಯಾಂಡ್ ಕ್ರೂಸರ್ ಕೂಡಾ ಇದೆ. 

English summary
999999 Kms: An Toyota Corolla still running strongly
Story first published: Thursday, May 28, 2015, 6:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark