ದೇಶಕ್ಕೆ ಕಾಲಿಡುತ್ತಿರುವ ಫಿಯೆಟ್ ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಕಾರು

Posted By:

ಇಟಲಿ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆ ಫಿಯೆಟ್ ಇಂಡಿಯಾ, ಅತಿ ಶೀಘ್ರದಲ್ಲೇ ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ದೀಪಾವಳಿ ಹಬ್ಬದ ಆವೃತ್ತಿಯನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿರುವ ಭಾರತೀಯ ವಾಹನ ಪ್ರೇಮಿಗಳಿಗಿದು ಪರಿಪೂರ್ಣ ಆಯ್ಕೆಯಾಗಿರಲಿದೆ.

ಹೌದು, ಎಲ್ಲ ಹೊಸತನದಿಂದ ಕೂಡಿರುವ 2015 ಫಿಯೆಟ್ ಅಬಾರ್ತ್ ಪುಂಟೊ ಇವೊ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದರಂತೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಸ್ಥೆ ಆರಂಭಿಸಿದೆ.

ಫಿಯೆಟ್ ಅಬಾರ್ತ್ ಪುಂಟೊ ಇವೊ

ಹೊಸ ಫಿಯೆಟ್ ಕಾರಿನಡಿಯಲ್ಲಿರುವ ಶಕ್ತಿಶಾಲಿ 1.4 ಲೀಟರ್ ಟಿ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 145 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದೇ ಎಂಜಿನ್ ಫಿಯೆಟ್ ಅಬಾರ್ತ್ ಅವೆಂಚ್ಯುರಾದಲ್ಲೂ ಕಂಡುಬರುತ್ತಿದೆ.

ಫೋಕ್ಸ್ ವ್ಯಾಗನ್ ಜಿಟಿ ಟಿಎಸ್‌ಐ ಹಿಂದಿಕ್ಕಿರುವ ಫಿಯೆಟ್ ಪುಂಟೊ ಇವೊ ಟಿ ಜೆಟ್ ಈಗ ಅತ್ಯಂತ ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರೆನಿಸಿಕೊಳ್ಳಲಿದೆ. ಜರ್ಮನಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ ಕಾರಿನಲ್ಲಿರುವ 1.2 ಲೀಟರ್ ಟಿಎಸ್ ಐ ಪೆಟ್ರೋಲ್ ಮೋಟಾರು 105 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಫಿಯೆಟ್ ಅಬಾರ್ತ್ ಪುಂಟೊ ಇವೊ

10 ಲಕ್ಷ ರು.ಗಳ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಹೊಸ ಫಿಯೆಟ್ ಅಬಾರ್ತ್ ಪುಂಟೊ ಇವೊ, 16 ಇಂಚುಗಳ ಡ್ಯುಯಲ್ ಟೋನ್ ಅಲಾಯ್ ವೀಲ್, ಬದಿಯಲ್ಲಿ ಅಬಾರ್ತ್ ಚಿತ್ರ, ವಿಂಗ್ ಮಿರರ್, ವಿಭಿನ್ನ ಸೀಟು, ಸ್ಟೀರಿಂಗ್ ವೀಲ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

Read more on ಫಿಯೆಟ್ fiat
English summary
Abarth Punto Evo Bookings Open By Fiat India; Launch By Next Month
Story first published: Monday, September 7, 2015, 17:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark