ಮಹೀಂದ್ರ ಕೆಯುವಿ100 - ನೀವು ತಿಳಿದುಕೊಳ್ಳಬೇಕಾದ ಅಂಶಗಳು

Written By:

ದೇಶದ ನಂ.1 ಕ್ರೀಡಾ ಬಳಕೆಯ ವಾಹನ ತಯಾರಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಅತಿ ನೂತನ ಕೆಯುವಿ100 ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಭರ್ಜರಿಯಾಗಿ ಅನಾವರಣಗೊಳಿಸಿದೆ.

Also Read: ಮಹೀಂದ್ರ ಮಿನಿ ಎಸ್‌ಯುವಿಗೆ ನಾಮಕರಣವಾಯ್ತು ಮುಂದಕ್ಕೆ ಓದಿ

ಈ ಬಹುನಿರೀಕ್ಷಿತ ಎಸ್‌ಯುವಿ ಮುಂದಿ ವರ್ಷಾರಂಭದಲ್ಲಿ ಅಂದರೆ 2016 ಜನವರಿ 15ರಂದು ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ. ಈ ಸಂಬಂಧ ನೂತನ ಕೆಯುವಿ100 ಬಗ್ಗೆ ವಾಹನ ಪ್ರೇಮಿಗಳು ಅರಿತುಕೊಳ್ಳಬೇಕಾದ ಅಂಶಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ.

To Follow DriveSpark On Facebook, Click The Like Button
ಕೆಯುವಿ1oo

ಕೆಯುವಿ1oo

ಇಲ್ಲಿ 'K' ಎಂಬುದು ಕೂಲ್ (kool), 'UV' ಎಂಬುದು ಎಸ್‌ಯುವಿ ಮತ್ತು '100' ಎಂಬುದು 1 ಹಾಗೂ ಡಬಲ್ oh ಸಂಕೇತಿಸುತ್ತದೆ.

ಯುವ ಎಸ್‌ಯುವಿ

ಯುವ ಎಸ್‌ಯುವಿ

ಆಕ್ರಮಣಕಾರಿ ವಿನ್ಯಾಸ, ಎಸ್‌ಯುವಿ ಶೈಲಿ ಮೈಗೂಡಿಸಿ ಬಂದಿರುವ ಮಹೀಂದ್ರ ಕೆಯುವಿ100 ಕಾರನ್ನು ಸಂಸ್ಥೆಯ ಚೆನ್ನೈನ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿ ಮಾಡಲಿದ್ದು, ಇದೇ ಕಾರಣಕ್ಕೆ ಯುವ ಎಸ್‌ಯುವಿ ಎಂಬ ಥೀಮ್ ಹೆಸರನ್ನು ಪಡೆದಿದೆ.

ವಿಶ್ವದರ್ಜೆಯ ಫಾಲ್ಕನ್ ಎಂಜಿನ್

ವಿಶ್ವದರ್ಜೆಯ ಫಾಲ್ಕನ್ ಎಂಜಿನ್

ಮಹೀಂದ್ರ ಎಕ್ಸ್‌ಯುವಿ500 ಹಾಗೂ ಟಿಯುವಿ100 ಕೆಳ ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಕೆಯುವಿ100 ಕಾರಿನಲ್ಲಿ ಅತಿ ನೂತನ ವಿಶಅವ ದರ್ಜೆಯ ಎಂಫಾಲ್ಕನ್ ಎಂಜಿನ್ ಬಳಕೆ ಮಾಡಲಾಗುತ್ತದೆ. ಹಾಗೆಯೇ ಇದೇ ಪೆಟ್ರೋಲ್ ಎಂಜಿನ್ ವಿಭಾಗಕ್ಕೂ ಮಹೀಂದ್ರ ಕಾಲಿಡಲಿದೆ.

ಎಂಜಿನ್

ಎಂಜಿನ್

 • ಪೆಟ್ರೋಲ್: mFALCON, G80
 • ಎಂಜಿನ್ ಸಾಮರ್ಥ್ಯ: 1198 ಸಿಸಿ
 • ಗರಿಷ್ಠ ಪವರ್: 82(61)@5500 bhp(kW)@rpm
 • ತಿರುಗುಬಲ: 115@3500-3600 Nm@rpm
ಎಂಜಿನ್

ಎಂಜಿನ್

 • ಡೀಸೆಲ್: mFALCON, D75
 • ಎಂಜಿನ್ ಸಾಮರ್ಥ್ಯ: 1198 ಸಿಸಿ
 • ಗರಿಷ್ಠ ಪವರ್: 77(57)@3750 (bhp(kW)@rpm)
 • ತಿರುಗುಬಲ: 190@1750-2250 Nm@rpm

'ಪ್ರೆ' (prey) ಬೇಟೆಹಕ್ಕಿಯ ಹೆಸರನ್ನು ಇದಕ್ಕಿಡಲಾಗಿದೆ.

ವೆರಿಯಂಟ್

ವೆರಿಯಂಟ್

ಎಲ್ಲ ವೆರಿಯಂಟ್ ಗಳಲ್ಲೂ ಆ್ಯಂಟಿ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ಲಭ್ಯ.

 • ಬೇಸ್ ವೆರಿಯಂಟ್: ಕೆ2 ಮತ್ತು ಕೆ2 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)
 • ಮಿಡ್ ವೆರಿಯಂಟ್: ಕೆ4 ಮತ್ತು ಕೆ4 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)
 • ಹೈ ವೆರಿಯಂಟ್: ಕೆ6 ಮತ್ತು ಕೆ6 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)
 • ಟಾಪ್ ಎಂಡ್ ವೆರಿಯಂಟ್: ಕೆ8 (ಡ್ಯುಯಲ್ ಏರ್ ಬ್ಯಾಗ್)

ಏಳು ಆಕರ್ಷಕ ಬಣ್ಣಗಳು

ಏಳು ಆಕರ್ಷಕ ಬಣ್ಣಗಳು

Fiery Orange,

Flamboyant Red,

Dazzling Silver,

Aquamarine,

Pearl White,

Designer Grey,

Midnight Black

ಮೊನೊಕಾಕ್ ಸಂರಚನೆ

ಮೊನೊಕಾಕ್ ಸಂರಚನೆ

ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಮೊನೊಕಾಕ್ ಸಂರಚನೆಯ ಕೆಯುವಿ100 ಗುಟಮಟ್ಟ, ತಾಂತ್ರಿಕತೆ, ನಿರ್ವಹಣೆ ಎಲ್ಲದರಲ್ಲೂ ಅದ್ಭುತ ಚಾಲನಾ ಅನುಭವ ನೀಡಲಿದೆ.

ಬುಕ್ಕಿಂಗ್ ಪ್ರಾರಂಭ

ಬುಕ್ಕಿಂಗ್ ಪ್ರಾರಂಭ

ಅಂದ ಹಾಗೆ ನೂತನ ಕೆಯುವಿ100 ಮಿನಿ ಎಸ್‌ಯುವಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆಸಕ್ತರು ನಿಮ್ಮ ಹತ್ತಿರದ ಮಹೀಂದ್ರ ಅಧಿಕೃತ ಶೋ ರೂಂಗಳಿಗೆ ಭೇಟಿ ಕೊಡಬಹುದಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಇನ್ನು ಕಾರಿನೊಳಗಿನ ವೈಶಿಷ್ಟ್ಯಯು ಬಿಡುಗಡೆ ವೇಳೆಯಷ್ಟೇ ತಿಳಿದು ಬರಲಿದೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

English summary
All you need to know about Mahindra's New SUV KUV100
Story first published: Saturday, December 19, 2015, 16:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark