ಮಹೀಂದ್ರ ಹೊಸ ಎಸ್‌ಯುವಿಗೆ 'ಯುದ್ಧ ಟ್ಯಾಂಕರ್' ಸ್ಪೂರ್ತಿ!

Written By:

ದೇಶದ ಕ್ರೀಡಾ ಬಳಕೆಯ ವಾಹನಗಳ (ಎಸ್‌ಯುವಿ) ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಹೊಚ್ಚ ಹೊಸ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವುದರ ಬಗ್ಗೆ ನಾವು ಕಳೆದ ದಿನವಷ್ಟೇ ವರದಿ ಮಾಡಿದ್ದೆವು.

ಮಹೀಂದ್ರ 'ಟಿಯುವಿ300'(TUV300)

ಇದಕ್ಕೆ ಸಂಬಂಧಿಸಿದಂತೆ ತಾಜಾ ರೇಖಾ ಚಿತ್ರಗಳು, ವಿಡಿಯೋ ಹಾಗೂ ಮತ್ತಷ್ಟು ಆಸಕ್ತಿದಾಯಕ ಮಾಹಿತಿಗಳೊಂದಿಗೆ ನಿಮ್ಮ ನೆಚ್ಚಿನ ವಾಹನ ಜಾಲತಾಣ ಕನ್ನಡ ಡ್ರೈವ್ ಸ್ಪಾರ್ಕ್ ಮತ್ತೆ ನಿಮ್ಮ ಮುಂದೆ ಬಂದಿದೆ.

ಯುದ್ಧ ಟ್ಯಾಂಕರ್ ಸ್ಪೂರ್ತಿ

ಯುದ್ಧ ಟ್ಯಾಂಕರ್ ಸ್ಪೂರ್ತಿ

ವರದಿಗಳ ಪ್ರಕಾರ ಮಹೀಂದ್ರ ಹೊಸ ಎಸ್‌ಯುವಿಗೆ ಯುದ್ಧ ಟ್ಯಾಂಕರ್ ವಿನ್ಯಾಸ ಸ್ಪೂರ್ತಿಯಾಗಿದೆ. ಅಲ್ಲದೆ ಸ್ಟೈಲಿಷ್ ಡಿಎನ್‌ಎಯಿಂದ ಪ್ರೇರಣೆ ಪಡೆದಿರುವ ನೂತನ ಟಿಯುವಿ300 ಎಸ್‌ಯುವಿ ಸಂಪೂರ್ಣ ಹೊಸ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ವೆಬ್ ಸೈಟ್, ವೀಡಿಯೋ ಬಿಡುಗಡೆ

ವೆಬ್ ಸೈಟ್, ವೀಡಿಯೋ ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ಮುಂಬರುವ ಹಬ್ಬದ ಆವೃತ್ತಿಯ ಸಮಯದಲ್ಲಿ (ಸೆಪ್ಟೆಂಬರ್) ನೂನತ ಮಹೀಂದ್ರ ಟಿಯುವಿ300 ಮಿನಿ ಎಸ್ ಯುವಿ ಬಿಡುಗಡೆಯಾಗಲಿದೆ. ಈ ಸಂಬಂಧ ಸಂಸ್ಥೆಯು ಅಧಿಕೃತ ವೆಬ್ ಸೈಟ್ ಹಾಗೂ ವಿಡಿಯೋವನ್ನು ಬಿಡುಗಡೆ ಮಾಡಿದೆ. [ಕೊನೆಯ ಪುಟದಲ್ಲಿ ವೀಡಿಯೋ ವೀಕ್ಷಿಸಿ]

ರೇಖಾಚಿತ್ರ

ರೇಖಾಚಿತ್ರ

  • ಬೃಹತ್ ಬೊನೆಟ್,
  • ಮೊನಚಾದ ವಿನ್ಯಾಸ,
  • ನೇರವಾದ ರೂಫ್ ಲೈನ್,
  • ಹೆಚ್ಚುವರಿ ಚಕ್ರ,
  • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್,
  • ಸಮಭುಜ ವೀಲ್ ಆರ್ಚ್
ಟಿಯುವಿ300 ಪೂರ್ಣರೂಪ

ಟಿಯುವಿ300 ಪೂರ್ಣರೂಪ

ಪ್ರೊಜೆಕ್ಟ್ ಕೋಡ್: ಯು301 (U301)

ಇಲ್ಲಿ 'ಟಿಯುವಿ300' ಎಂಬ ಪದವು ಟಿಯುವಿ, 3 ಡಬಲ್ ಒ (oh) ಎಂದು ಉಚ್ಛಾರಿಸಲ್ಪಡಲಿದೆ. ಅಂತೆಯೇ 'ಟಿ' ಎಂಬುದು ಕಠಿಣ ಹಾಗೂ ಸ್ಟೈಲಿಷ್ ಎಸ್ ಯುವಿ ವಿನ್ಯಾಸವನ್ನು ಪ್ರತಿನಿಧಿಸಲಿದೆ. ಹಾಗೆಯೇ '300' ಅಂಕಿಗಳು ಶ್ರೇಣಿಯ ಹೆಸರನ್ನು ಸೂಚಿಸುತ್ತದೆ.

ಮಿನಿ ಬೊಲೆರೊ

ಮಿನಿ ಬೊಲೆರೊ

ಬಲ್ಲ ಮೂಲಗಳ ಪ್ರಕಾರ ನೂತನ ಮಹೀಂದ್ರ ಟಿಯುವಿ300 ಮಿನಿ ಬೊಲೆರೊ ಎನಿಸಿಕೊಳ್ಳಲಿದೆ. ನೂತನ ಕಾರು ಉಪಯುಕ್ತ ವಿಭಾಗದಲ್ಲಿ ಭಾರಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.

4 ಮೀಟರ್ ಮ್ಯಾಜಿಕ್...

4 ಮೀಟರ್ ಮ್ಯಾಜಿಕ್...

ನಾಲ್ಕು ಮೀಟರ್ ಪರಿಧಿಯೊಳಗೆ ನಿರ್ಮಾಣವಾಗಲಿರುವುದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಂಸ್ಥೆಗೆ ನೆರವಾಗಲಿದೆ. ಇದರಲ್ಲಿ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು, 100 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಮಹೀಂದ್ರ ಟಿಯುವಿ300 ಲಾಂಛನ ಮತ್ತು ರೇಖಾಚಿತ್ರ ವೀಡಿಯೋ ವೀಕ್ಷಿಸಿ

English summary
Mahindra TUV300 Compact SUV Microsite Launched With Video
Story first published: Friday, July 31, 2015, 16:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark