ದೇಶದ ಟಾಪ್ 10 ಉಪಯುಕ್ತ ವಾಹನಗಳು

Written By:

ಬೆಳೆದು ಬರುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆ ಹಾಗೂ ಬಹು ಬಳಕೆಯಂತಹ ಉಪಯುಕ್ತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದನ್ನೇ ಮನಗಂಡಿರುವ ದೇಶದ ಮುಂಚೂಣಿಯ ಸಂಸ್ಥೆಗಳು ಹೆಚ್ಚೆಚ್ಚು ಎಸ್‌ಯುವಿ ಹಾಗೂ ಎಂಯುವಿ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದೆ.

Also Read: ಹ್ಯುಂಡೈ ಕ್ರೆಟಾಗೆ ಭಾರಿ ಬೇಡಿಕೆ; ಕಾರಣ ಏನು ?

ಇತ್ತೀಚೆಗಿನ ದಿನಗಳಲ್ಲಿ ಅತಿ ಹೆಚ್ಚು ಯಶಸ್ಸು ದಾಖಲಿಸಿರುವ ವಾಹನಗಳಿಗೆ ಹ್ಯುಂಡೈ ಕ್ರೆಟಾ ಅತ್ಯುತ್ತಮ ಉದಾಹರಣೆಯಾಗಿದೆ. ಇದು ಬಿಡುಗಡೆಯಾದ ಒಂದೆರೆಡು ತಿಂಗಳಲ್ಲೇ ದೇಶದ ನಂ.1 ಎಸ್‌ಯುವಿ ಕಾರೆಂಬ ಪಟ್ಟ ಆಲಂಕರಿಸಿದೆ. ಪ್ರಸ್ತುತ ಲೇಖನದಲ್ಲಿ 2015 ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಕಂಡಿರುವ ಅಗ್ರ 10 ಉಪಯುಕ್ತ ವಾಹನಗಳ ಬಗ್ಗೆ ಚರ್ಚಿಸಲಿದ್ದೇವೆ.

10. ಟೊಯೊಟಾ ಫಾರ್ಚ್ಯುನರ್

10. ಟೊಯೊಟಾ ಫಾರ್ಚ್ಯುನರ್

ಮಾರಾಟ ಇಳಿಕೆಯ ನಡುವೆಯೂ ಕಳೆದ ವರ್ಷದ ಅದೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಟೊಯೊಟಾ ಫಾರ್ಚ್ಯುನರ್ ಯಶ ಕಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 1089
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 1749

ಟೊಯೊಟಾ ಫಾರ್ಚ್ಯುನರ್ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

09. ಮಾರುತಿ ಸುಜುಕಿ ಎರ್ಟಿಗಾ

09. ಮಾರುತಿ ಸುಜುಕಿ ಎರ್ಟಿಗಾ

ಕಳೆದ ವರ್ಷಕ್ಕೆ ಹೋಲಿಸಿದಾಗ ಮಾರುತಿ ಸುಜುಕಿ ಎರ್ಟಿಗಾ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ. ಅಲ್ಲದೇ ಕಳೆದ ವರ್ಷವಿದ್ದ ನಾಲ್ಕನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಹಿನ್ನೆಡೆ ಅನುಭವಿಸಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 2641
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 5672

ಮಾರುತಿ ಎರ್ಟಿಗಾ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

08. ಮಹೀಂದ್ರ ಎಕ್ಸ್‌ಯುವಿ500

08. ಮಹೀಂದ್ರ ಎಕ್ಸ್‌ಯುವಿ500

ಬಹುತೇಕ ಸ್ಥಿರ ಮಾರಾಟವನ್ನು ಕಾಯ್ದುಕೊಂಡಿರುವ ಮಹೀಂದ್ರ ಎಕ್ಸ್‌ಯುವಿ500 ಕಳೆದ ವರ್ಷವಿದ್ದ ಎಂಟನೇ ಸ್ಥಾನವನ್ನು ಕಾಪಾಡಿಕೊಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 3110
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 3035

ಮಹೀಂದ್ರ ಎಕ್ಸ್‌ಯುವಿ500 ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

07. ಫೋರ್ಡ್ ಇಕೊಸ್ಪೋರ್ಟ್

07. ಫೋರ್ಡ್ ಇಕೊಸ್ಪೋರ್ಟ್

ತನ್ನ ಪ್ರತಿಸ್ಪರ್ಧಿಗಳಿಂದ ನಿಕಟ ಪೈಪೋಟಿಯನ್ನು ಎದುರಿಸುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಇತ್ತೀಚೆಗಷ್ಟೇ ಹೊಸ ಸ್ವರೂಪವನ್ನು ಪಡೆದುಕೊಂಡಿತ್ತು. ಇನ್ನು ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನದ ಇಳಿಕೆಯನ್ನು ಕಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 3121
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 4515

ಫೋರ್ಡ್ ಇಕೊಸ್ಪೋರ್ಟ್ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

06. ಮಾರುತಿ ಸುಜುಕಿ ಎಸ್ ಕ್ರಾಸ್

06. ಮಾರುತಿ ಸುಜುಕಿ ಎಸ್ ಕ್ರಾಸ್

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಎಸ್ ಕ್ರಾಸ್ 2015 ಸೆಪ್ಟೆಂಬರ್ ತಿಂಗಳಲ್ಲಿ 3603 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

05. ಮಹೀಂದ್ರ ಸ್ಕಾರ್ಪಿಯೊ

05. ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸಂಸ್ಥೆಯ ಅತ್ಯುತ್ತಮ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿರುವ ಸ್ಕಾರ್ಪಿಯೊ ನಿಧಾನವಾಗಿ ಹಿನ್ನೆಡೆ ಅನುಭವಿಸುತ್ತಿರುವುದಕ್ಕೆ ಅಂಕಿಅಂಶಗಳೇ ಪುಷ್ಠಿ ನೀಡುತ್ತದೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಸ್ಕಾರ್ಪಿಯೊ ಈ ಬಾರಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 4313
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 6060

ಮಹೀಂದ್ರ ಸ್ಕಾರ್ಪಿಯೊ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

04. ಮಹೀಂದ್ರ ಟಿಯುವಿ300

04. ಮಹೀಂದ್ರ ಟಿಯುವಿ300

ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಕಾಂಪಾಕ್ಟ್ ಎಸ್‌ಯುವಿಗಳ ಪೈಕಿ ಮಹೀಂದ್ರ ಟಿಯುವಿ300 ಒಂದಾಗಿದೆ. ಅಲ್ಲದೆ 2015 ಸೆಪ್ಟೆಂಬರ್ ತಿಂಗಳಲ್ಲಿ 4321 ಯುನಿಟ್ ಗಳ ಮಾರಾಟ ಕಾಣುವ ಮೂಲಕ ತನ್ನ ಇರಾದೆಯನ್ನು ಸ್ಪಷ್ಟಪಡಿಸಿದೆ.

ಮಹೀಂದ್ರ ಟಿಯುವಿ300 ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

03. ಟೊಯೊಟಾ ಇನ್ನೋವಾ

03. ಟೊಯೊಟಾ ಇನ್ನೋವಾ

ಕಳೆದ ವರ್ಷಕ್ಕೆ ಹೋಲಿಸಿದಾಗ ಸರಾಸರಿ ಸ್ಥಿರತೆಯ ಮಾರಾಟ ಕಾಪಾಡಿಕೊಂಡಿರುವ ಇನ್ನೋವಾ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 5430
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 5876

ಟೊಯೊಟಾ ಇನ್ನೋವಾ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

02. ಮಹೀಂದ್ರ ಬೊಲೆರೊ

02. ಮಹೀಂದ್ರ ಬೊಲೆರೊ

ದೇಶದ ಸರ್ವಕಾಲಿಕ ಶ್ರೇಷ್ಠ ಉಪಯುಕ್ತ ವಾಹನಗಳಲ್ಲಿ ಒಂದಾಗಿರುವ ಮಹೀಂದ್ರ ಬೊಲೆರೊ ಈ ಬಾರಿಯೂ ಮುಂಚೂಣಿಯ ಸಾಲಿನಲ್ಲಿ ಗುರುತಿಸಿಕೊಂಡಿದೆ.

 • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 5585
 • 201 4ಸೆಪ್ಟೆಂಬರ್ ಮಾರಾಟ ಸಂಖ್ಯೆ: 8541

ಮಹೀಂದ್ರ ಬೊಲೆರೊ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

01. ಹ್ಯುಂಡೈ ಕ್ರೆಟಾ

01. ಹ್ಯುಂಡೈ ಕ್ರೆಟಾ

ನಾವು ಈಗಾಗಲೇ ತಿಳಿಸಿರುವಂತೆಯೇ ದೇಶದ ನಂ.1 ಎಸ್‌ಯುವಿ ಪಟ್ಟ ಆಲಂಕರಿಸಿರುವ ಕ್ರೆಟಾ ಕಾಂಪಾಕ್ಟ್ ಎಸ್‌ಯುವಿ, ಉಪಯುಕ್ತ ಬಳಕೆಯ ವಾಹನ ವಿಭಾಗವನ್ನು ಮುನ್ನಡೆಸುತ್ತಿದೆ.

2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 7256

ಹ್ಯುಂಡೈ ಕ್ರೆಟಾ ಕಾರಿನಲ್ಲಿ ಏನೆನಿದೆ? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ಟಾಪ್ 10 ಉಪಯುಕ್ತ ವಾಹನಗಳು

ಹೊಸ ಕಾರುಗಳ ಮಾರಾಟ ಎಷ್ಟೆಷ್ಟು? ಇಲ್ಲಿದೆ ರಿಪೋರ್ಟ್ ಕಾರ್ಡ್

 

Read more on ಟಾಪ್ 10 top 10
English summary
Top 10 Selling Utility Vehicles In September 2015
Story first published: Tuesday, October 27, 2015, 16:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark