ಫೆ.18ರಂದು ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಇಂಡಿಯಾ ಮುಂಬರುವ ಫೆಬ್ರವರಿ 18ರಂದು ಬಹುನಿರೀಕ್ಷಿತ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಳೆದ ವರ್ಷಾಂತ್ಯದಲ್ಲೇ ಬಿಎಂಡಬ್ಲ್ಯು ಐ8 ಭಾರತ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತಾದರೂ ಕಾರಣಾಂತರಗಳಿಂದಾಗಿ ತನ್ನ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು 1.5 ಲೀಟರ್ ಟರ್ಬೊಚಾರ್ಜ್ಡ್ ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದ್ದು, 228 ಅಶ್ವಶಕ್ತಿ (319.9 ತಿರುಗುಬಲ) ಉತ್ಪಾದಿಸಲಿದೆ. ಇದರ ಜೊತೆಗೆ ಎಸಿ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋಸ್ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಇದು ಮತ್ತಷ್ಟು 129 ಅಶ್ವಶಕ್ತಿ (249.4 ತಿರುಗುಬಲ) ಉತ್ಪಾದಿಸಲು ನೆರವಾಗಲಿದೆ. ಇವೆರಡು ಸೇರಿ ಗರಿಷ್ಠ 357 ಅಶ್ವಶಕ್ತಿ (569.44 ತಿರುಗುಬಲ) ಹುಟ್ಟು ಹಾಕಲಿದೆ.

bmw i8

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕೇವಲ 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ ವೇಗವನ್ನು ಗಂಟೆಗೆ 249 ಕೀ.ಮೀ.ಗಳಿಗೆ ನಿಲುಗಡೆಗೊಳಿಸಲಾಗಿದೆ. ಇನ್ನು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂದ ಹಾಗೆ ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಮುಖಾಂತರ ಭಾರತ ಮಾರುಕಟ್ಟೆಯನ್ನು ತಲುಪಲಿದೆ.
bmw i8

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಎಕ್ಸ್ ಶೋರೂಂ ಬೆಲೆ ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ. ಬಿಎಂಡಬ್ಲ್ಯು ಐ8 ಕಾರಿಗೆ ಭಾರಿ ಬೇಡಿಕೆಯಿರುವುದರಿಂದ ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.
bmw i8

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಬಿಎಂಡಬ್ಲ್ಯು ಐ8 ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಇದು ಸಾಮಾನ್ಯ ಸ್ಪೋರ್ಟ್ಸ್ ಕಾರಿಗಿಂತಲೂ ಶೇಕಡಾ 50ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.
Most Read Articles

Kannada
English summary
BMW India will be launching its much awaited hybrid sports car the i8 on 18th of February, 2015. The German manufacturer was supposed to launch the i8 at the end of 2014, however, it was delayed due to certain circumstances.
Story first published: Friday, February 13, 2015, 9:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X