ದುಬಾರಿಯಾಯ್ತು ಷೆವರ್ಲೆ ಕಾರುಗಳು
ಅಮೆರಿಕದ ಜನರಲ್ ಮೋಟಾರ್ಸ್ ಅಧೀನತೆಯಲ್ಲಿರುವ ಷೆವರ್ಲೆ ಕಾರು ಬ್ರಾಂಡ್ ಸದ್ಯದಲ್ಲೇ ದುಬಾರಿಯಾಗಲಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸ್ಥೆಯು ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ತನ್ನೆಲ್ಲ ಮಾದರಿಗಳಿಗೆ ಶೇಕಡಾ 2ರಷ್ಟು ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿರುವ ಷೆವರ್ಲೆ ಮಾದರಿಗಳು
- ಷೆವರ್ಲೆ ಸ್ಪಾರ್ಕ್
- ಷೆವರ್ಲೆ ಬೀಟ್
- ಷೆವರ್ಲೆ ಸೈಲ್ (ಹ್ಯಾಚ್ ಬ್ಯಾಕ್, ಕಾಂಪಾಕ್ಟ್)
- ಷೆವರ್ಲೆ ಎಂಜಾಯ್
- ಷೆವರ್ಲೆ ಕ್ರೂಝ್
- ಷೆವರ್ಲೆ ಕಾಪ್ಟಿವಾ
- ಷೆವರ್ಲೆ ಟವೆರಾ
ಹೊಸ ಬೆಲೆ ದರಗಳು ಮುಂದಿನ 2015 ಜುಲೈ ತಿಂಗಳಲ್ಲಿ ಜಾರಿಗೆ ಬರಲಿದೆ. ಅಂತೆಯೇ ನಿರ್ದಿಷ್ಟ ಮಾದರಿಗಳ ಬೆಲೆ ಮಾಹಿತಿಯು ಮುಂದಿನ ತಿಂಗಳಲ್ಲೇ ಹೊರಬೀಳಲಿದೆ.
ಅಬಕಾರಿ ಸುಂಕ ವಿನಾಯಿತಿ ನೀತಿಯನ್ನು ಸರಕಾರ ಹಿಂಪಡೆದಿರುವುದೇ ಬೆಲೆ ಏರಿಕೆಯ ಹಿಂದಿರುವ ಪ್ರಮುಖ ಕಾರಣವಾಗಿದೆ. ಈ ನಡುವೆ ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನ ನೀಡುವಲ್ಲಿ ತನ್ನ ಬದ್ಧತೆಯನ್ನು ಷೆವರ್ಲೆ ಪ್ರದರ್ಶಿಸಿದೆ.


Click it and Unblock the Notifications








