ಡೀಸೆಲ್ ಬೆಲೆ 50 ಪೈಸೆ ಏರಿಕೆ; ಪೆಟ್ರೋಲ್ ಸ್ಥಿರ
ಸತತವಾಗಿ ಇಂಧನ ಬೆಲೆಗಳಲ್ಲಿ ಇಳಿಕೆ ಕಂಡುಬಂದ ಬಳಿಕ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ 50 ಪೈಸೆಗಳಷ್ಟು ಏರಿಕೆ ಕಂಡಿದೆ. ಹಾಗಿದ್ದರೂ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬರದಿರುವುದು ಗ್ರಾಹಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಇದು 2015 ಮೇ 16ರ ಬಳಿಕ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಪರಿಷ್ಕೃತ ದರ ಗುರುವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ.

ಪರಿಷ್ಕೃತ ಬೆಲೆಯಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 44.45 ರು.ಗಳಿಷ್ಟಿದ್ದ ಡೀಸೆಲ್ ಬೆಲೆಯೀಗ 44.95 ರು.ಗಳಿಗೆ ಏರಿಕೆಯಾಗಿದೆ.
ಡೀಸೆಲ್ ಬೆಲೆ ಮೇ 16ರಂದು ಏರಿಕೆಗೊಂಡಿತ್ತು. ತದಾ ಬಳಿಕ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಆರು ಬಾರಿ ಇಳಿಕೆ ಕಂಡಿತ್ತು.


Click it and Unblock the Notifications








