ದೇಶದ ಪ್ರಪ್ರಥಮ ಆ್ಯಂಟಿ ಲಿಫ್ಟ್ ಟ್ರ್ಯಾಕ್ಟರ್ ಬಿಡುಗಡೆ

By Nagaraja

ಎಸ್ಕಾರ್ಟ್ಸ್ ಸಂಸ್ಥೆಯು "ಚಾಲಕರ ಪ್ರಾಣ ಸುರಕ್ಷಿತ, ಮಾಲಿಕರ ಜೇಬು ಸುರಕ್ಷಿತ" ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಪ್ರಪ್ರಥಮ ಆ್ಯಂಟಿ ಲಿಫ್ಟ್ ಟ್ರಾಕ್ಟರ್ (ಎಎಲ್‌ಟಿ) ಅನ್ನು ಬಿಡುಗಡೆಗೊಳಿಸಿದೆ.

ಈ ನಾವೀನ್ಯತೆಯ ಆ್ಯಂಟಿ ಲಿಫ್ಟ್ ಟ್ರ್ಯಾಕ್ಟರ್ ಈಗ ಕರ್ನಾಟಕದ ಹೊರತಾಗಿ ಆಂಧ್ರ ಪ್ರದೇಶ, ಬಿಹಾರ, ಚತ್ತೀಸಗಡ, ಹರಿಯಾಣ, ಜಾರ್ಖಂಡ್, ಮುಂಬೈ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಲಭ್ಯವಾಗಲಿದೆ.

escorts tractor

ಒಟ್ಟು ಎರಡು ಮಾದರಿಗಳಲ್ಲಿ ಎಸ್ಕಾರ್ಟ್ಸ್ ಟ್ರ್ಯಾಕ್ಟರ್ ಲಭ್ಯವಾಗಲಿದೆ. ಅವುಗಳೆಂದರೆ. ಎಎಲ್‌ಟಿ 4000 ಹಾಗೂ ಎಎಲ್‌ಟಿ 3500.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಎಸ್ಕಾರ್ಟ್ಸ್ ಅಗ್ರಿ ಮೆಷನರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಎಸ್ ‌ಶ್ರೀಧರ್, "ಗ್ರಾಹಕರ ನೋವನ್ನು ನಮ್ಮ ಎಂಜಿನಿಯರ್‌ಗಳು ಅರಿತುಕೊಂಡಿದ್ದು, ಇದರಂತೆ ದೇಶದ ಪ್ರಪ್ರಥಮ ಸಮಗ್ರವಾದ ಆ್ಯಂಟಿ ಲಿಫ್ಟ್ ಟ್ರ್ಯಾಕ್ಟರ್ ಅಭಿವೃದ್ಧಿಪಡಿಸಲಾಗಿದೆ" ಎಂದಿದ್ದಾರೆ.

ಅಂದ ಹಾಗೆ ನಾವೀನ್ಯತೆಯ ತಂತ್ರಜ್ಞಾನಗಳನ್ನು ಹೊಸತಾದ ಆ್ಯಂಟಿ ಲಿಫ್ಟ್ ಟ್ರ್ಯಾಕ್ಟರ್‌ನಲ್ಲಿ ಅನುಸರಿಸಲಾಗಿದೆ. ಇದು ಟ್ರಾನ್ಸ್‌ಮಿಷನ್, ಉದ್ದವಾದ ಚಂಕ್ರಾಂತರ, ಭಾರವಾದ ಮುಂಭಾಗದ ಚಕ್ರ, 85 ಕೆ.ಜಿ ಫ್ರಂಟ್ ಬಂಪರ್, ತೀಕ್ಷ್ಣವಾದ ಫ್ರಂಟ್ ಲ್ಯಾಂಪ್ ಮುಂತಾದ ಸೌಲಭ್ಯಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Escorts launched their first anti fit tractor in India on the 27th of February, 2015. This new innovative machine from the manufacturer will be currently available only in Andhra Pradesh, Bihar, Chhattisgarh, Haryana, Jharkhand, Karnataka, Mumbai, Punjab and Uttar Pradesh.
Story first published: Monday, March 2, 2015, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X