ಗರಿಷ್ಠ ಮೈಲೇಜ್ ನೀಡುವ ದೇಶದ 5 ಡೀಸೆಲ್ ಕಾರುಗಳು

Written By:

ಹೊಸ ಕಾರು ಖರೀದಿಗಾರರ ಮನದಲ್ಲಿ ಮೊದಲು ಮೂಡುವ ಸಂದೇಹ ಏನೆಂದರೆ ಕಾರು ಮೈಲೇಜ್ ಎಷ್ಟು ಕೊಡುತ್ತದೆ? ಎಂಬುದಾಗಿರುತ್ತದೆ. ಈ ನಿಟ್ಟಿನಲ್ಲಿ ಗರಿಷ್ಠ ಇಂಧನ ಕ್ಷಮತೆಯ ಕಾರುಗಳಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ.

ಈ ನಡುವೆ ದೇಶದಲ್ಲೇ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರು ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಈ ಸಂಬಂಧ ಸದ್ಯ ಭಾರತದಲ್ಲಿರುವ ಐದು ಗರಿಷ್ಠ ಇಂಧನ ಕ್ಷಮತೆಯ ಡೀಸೆಲ್ ಕಾರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

 05. ಹೋಂಡಾ ಅಮೇಜ್ ಡೀಸೆಲ್

05. ಹೋಂಡಾ ಅಮೇಜ್ ಡೀಸೆಲ್

ಸಣ್ಣ ಕಾಂಪಾಕ್ಟ್ ಸೆಡಾನ್ ಕಾರಿನಲ್ಲಿ ಅತ್ಯುತ್ತಮ ವಿನ್ಯಾಸ, ನಿರ್ವಹಣೆ, ಹ್ಯಾಡ್ಲಿಂಗ್ ಜೊತೆ ಜೊತೆಗೆ ಮೈಲೇಜ್ ನಲ್ಲೂ ಮೋಡಿ ಮಾಡಿದ್ದ ಹೋಂಡಾ ಅಮೇಜ್ ಡೀಸೆಲ್ ಕಾರು ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು.

05. ಹೋಂಡಾ ಅಮೇಜ್ ಡೀಸೆಲ್

05. ಹೋಂಡಾ ಅಮೇಜ್ ಡೀಸೆಲ್

ಮೈಲೇಜ್: 25.8 kmpl

ಎಂಜಿನ್: 1.5 ಲೀಟರ್ ಐ-ಡಿಟೆಕ್ (i-DTEC engine)

ಪವರ್- 100 ಪಿಎಸ್, 200 ಎನ್‌ಎಂ ಟರ್ಕ್ಯೂ

04. ಹೋಂಡಾ ಸಿಟಿ ಡೀಸೆಲ್

04. ಹೋಂಡಾ ಸಿಟಿ ಡೀಸೆಲ್

ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹೋಂಡಾ ಸಿಟಿ, ಈಗಾಗಲೇ ಜನಮೆಚ್ಚುಗೆಗೆ ಪಾತ್ರವಾಗಿದೆ.

04. ಹೋಂಡಾ ಸಿಟಿ ಡೀಸೆಲ್

04. ಹೋಂಡಾ ಸಿಟಿ ಡೀಸೆಲ್

ಮೈಲೇಜ್: 26.0 kmpl

ಎಂಜಿನ್: 1.5 ಲೀಟರ್ ಐ-ಡಿಟೆಕ್ (i-DTEC engine)

ಅಶ್ವಶಕ್ತಿ: 100

03. ಮಾರುತಿ ಸುಜುಕಿ ಸಿಯಾಝ್ ಡೀಸೆಲ್

03. ಮಾರುತಿ ಸುಜುಕಿ ಸಿಯಾಝ್ ಡೀಸೆಲ್

ಹೋಂಡಾ ಸಿಟಿ ಪ್ರತಿಸ್ಪರ್ಧಿಯಾಗಿರುವ ಸಿಯಾಝ್ ಈಗಲೂ ನಿಷ್ಠಾವಂತ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

03. ಮಾರುತಿ ಸುಜುಕಿ ಸಿಯಾಝ್ ಡೀಸೆಲ್

03. ಮಾರುತಿ ಸುಜುಕಿ ಸಿಯಾಝ್ ಡೀಸೆಲ್

ಮೈಲೇಜ್: 26.1 kmpl

ಎಂಜಿನ್: 1.3 ಲೀಟರ್ ಡಿಡಿಐಎಸ್200

ಅಶ್ವಶಕ್ತಿ: 66 ಅಶ್ವಶಕ್ತಿ

02. ಮಾರುತಿ ಸುಜುಕಿ ಡಿಜೈರ್ ಡೀಸೆಲ್

02. ಮಾರುತಿ ಸುಜುಕಿ ಡಿಜೈರ್ ಡೀಸೆಲ್

ಇತ್ತೀಚೆಗಷ್ಟೇ ಪರಿಸ್ಕೃತ ಸಿಯಾಝ್ ಕಾರನ್ನು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಪರಿಚಯಿಸಿತ್ತು. ಮೈಲೇಜ್ ವಿಚಾರದಲ್ಲಿ ನೂತನ ಡಿಜೈರ್ ನಿರಾಸೆಯನ್ನುಂಟು ಮಾಡಲಿಲ್ಲ.

02. ಮಾರುತಿ ಸುಜುಕಿ ಡಿಜೈರ್ ಡೀಸೆಲ್

02. ಮಾರುತಿ ಸುಜುಕಿ ಡಿಜೈರ್ ಡೀಸೆಲ್

ಮೈಲೇಜ್: 26.59 kmpl

ಎಂಜಿನ್: 1248 ಸಿಸಿ ಡಿಡಿಐಎಸ್

ಅಶ್ವಶಕ್ತಿ: 69

01. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

01. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸುಜುಕಿ ಸೆಲೆರಿಯೊ ದೇಶದಲ್ಲೇ ಅತಿ ಹೆಚ್ಚು ಮೈಲೇಜ್ ನೀಡುವ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರತಿ ಲೀಟರ್ ಗೆ 27.62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

01. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

01. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

ಮೈಲೇಜ್: 27.62

ಎಂಜಿನ್: 793 ಸಿಸಿ ಟ್ವಿನ್ ಸಿಲಿಂಡರ್ ಟರ್ಬೊ ಚಾರ್ಜ್ಡ್

ಅಶ್ವಶಕ್ತಿ: 47

ಗರಿಷ್ಠ ಮೈಲೇಜ್ ನೀಡುವ ದೇಶದ 5 ಡೀಸೆಲ್ ಕಾರುಗಳು

ಈಗ ನಿಮ್ಮ ನೆಚ್ಚಿನ ಮೈಲೇಜ್ ಕಾರಿನ ಬಗ್ಗೆ ಅನಿಸಿಕೆಗಳನ್ನು ತಿಳಿಸಿರಿ.

English summary
Five Most Fuel Efficient Diesel Cars In India
Story first published: Monday, June 8, 2015, 15:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark