2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

By Nagaraja

ದೇಶದ ವಾಹನ ಸಂಚಾರಿಗಳಿಗೆ ಖುಷಿ ಸುದ್ದಿಯೊಂದು ಬಂದಿದ್ದು, ಕೆಲವೇ ವರ್ಷಗಳಲ್ಲಿ ನಿಮ್ಮ ಗಾಡಿ ಇನ್ನು ಹೆಚ್ಚಿನ ಮೈಲೇಜ್ ನೀಡಲಿದೆ. ಇಂತಹದೊಂದು ನೀತಿಯೊಂದಿಗೆ ಕೇಂದ್ರ ಸರಕಾರ ಮುಂದೆ ಬಂದಿದ್ದು, ವಾಹನ ತಯಾರಿಕ ಸಂಸ್ಥೆಗಳಿಗೆ ಇಂಧನ ಕ್ಷಮತೆಗೆ ಸಂಬಂಧಪಟ್ಟಂತೆ ನೂತನ ಮಾರ್ಗದರ್ಶನವನ್ನು ನೀಡಲಿದೆ.

ವರದಿಗಳ ಪ್ರಕಾರ 2017ನೇ ಇಸವಿಯಿಂದ ದೇಶದೆಲ್ಲ ವಾಹನ ತಯಾರಿಕ ಸಂಸ್ಥೆಗಳು ಪ್ರತಿ ಲೀಟರ್ ಗೆ ಸರಾಸರಿ 18.2 ಮೈಲೇಜ್ ಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ. ಇದು ಈಗಿರುವ ಸರಾಸರಿ ಮೈಲೇಜ್ ಗಿಂತ ಶೇಕಡಾ 15ರಷ್ಟು ಜಾಸ್ತಿಯಾಗಿದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಾಗಿದೆ. ಅಲ್ಲದೆ 2022 ಎಪ್ರಿಲ್ ವೇಳೆಯಾಗುವಾಗ ಮೈಲೇಜ್ ಸರಾಸರಿ ಮಟ್ಟವನ್ನು ಪ್ರತಿ ಲೀಟರ್ ಗೆ 22ಕ್ಕೆ ಏರಿಸುವ ಇರಾದೆಯನ್ನು ಸರಕಾರ ಹೊಂದಿದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ಇದರರ್ಥ ವಾಹನ ಸಂಸ್ಥೆಗಳು ಮಾರಾಟ ಮಾಡುವ ಪ್ರತಿಯೊಂದು ಮಾದರಿಗಳು 18.2 ಕೀ.ಮೀ. ಮೈಲೇಜ್ ಕಡ್ಡಾಯವಾಗಿ ಕಾಪಾಡಬೇಕು ಎಂಬುದಲ್ಲ. ಬದಲಾಗಿ ಕೆಲವು ನಿರ್ದಿಷ್ಟ ಮಾದರಿಗಳು ಇದಕ್ಕಿಂತಲೂ ಕಡಿಮೆ ಮೈಲೇಜ್ ಹೊಂದಿದ್ದರೂ ಸಹ ಇದಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ ಮಾದರಿಗಳನ್ನು ಉತ್ಪಾದಿಸಬೇಕಾಗುತ್ತದೆ. ಈ ಮೂಲಕ ಮೈಲೇಜ್ ಸರಾಸರಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ಹೊಸ ನಿಯಮ ಜಾರಿಗೆ ಬರಲಿರುವಂತೆಯೇ ವಾಹನಗಳು ಇನ್ನಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಯಾಕೆಂದರೆ ಮೈಲೇಜ್ ಹೆಚ್ಚಿಸುವ ನಿಟ್ಟಿನಲ್ಲಿ ವಾಹನ ಸಂಸ್ಥೆಗಳು ತಮ್ಮ ಮಾದರಿಗಳನ್ನು ಪರಿಷ್ಕೃತಗೊಳಿಸುವ ಅಗತ್ಯವಿರುತ್ತದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ಇವೆಲ್ಲದರಿಂದ ಭಾರತವು ಅಮೆರಿಕ, ಜಪಾನ್, ಜರ್ಮನಿ ಹಾಗೂ ಚೀನಾಗಳಂತಹ ಮುಂದುವರಿದ ರಾಷ್ಟ್ರಗಳೊಂದಿಗೆ ಗುರುತಿಸುವ ಯೋಜನೆ ಹೊಂದಿದೆ. ಈ ಎಲ್ಲ ದೇಶದಲ್ಲಿ ನಿಯಮ ಉಲ್ಲಂಘನೆಯಾದ್ದಲ್ಲಿ ಭಾರಿ ದಂಡ ವಿಧಿಸಲಾಗುತ್ತಿದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ಇದರಂತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಅನುಷ್ಠಾನ ಹಾಗೂ ಕಾರ್ಯವಿಧಾನಗಳನ್ನು ಕೇಂದ್ರ ರಸ್ತೆ , ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ನಿರ್ಧರಿಸಲಿದೆ. ಇದಕ್ಕಾಗಿ ಎನರ್ಜಿ ಕ್ಷಮತೆ ಬ್ಯುರೋ ರೂಪಿಸಲಿದೆ.

2017ರಲ್ಲಿ 18.2 ಸರಾಸರಿ ಮೈಲೇಜ್ ಮಟ್ಟ ಕಡ್ಡಾಯ

ನೂತನ ಇಂಧನ ಕ್ಷಮತೆಯ ಮಟ್ಟ ಜಾರಿಯಾಗುವುದರಿಂದ ದೇಶದಲ್ಲಿ ವರ್ಷಕ್ಕೆ 90,000 ಕೋಟಿ ರುಪಾಯಿಗಳಷ್ಟು ಉಳಿತಾಯವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.


Most Read Articles

Kannada
English summary
The Indian government has fixed compulsory minimum vehicle mileage as 18.2 kpl from April 20017 onwards. This is a 15 percent increase from what is mandatory today.
Story first published: Thursday, May 14, 2015, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X