ಭಾರತದತ್ತ ಮುಖ ಮಾಡಿದ ಹೋಂಡಾ ಕಾಂಪಾಕ್ಟ್ ಎಸ್‌ಯುವಿ

By Nagaraja

ಹೋಂಡಾ ಕಾಂಪಾಕ್ಟ್ ಎಸ್‌ಯುವಿ ಭಾರತ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವೆನಿಸಿದೆ. ಇದರ ಮುಂದುವರಿದ ಬೆಳವಣಿಗೆಯಂತೆಯೇ ಬ್ರಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ಹೋಂಡಾ ಕಾಂಪಾಕ್ಟ್ ಎಸ್‌ಯುವಿ ಪ್ರಾಯೋಗಿತ ಸಂಚಾರ ಪರೀಕ್ಷೆಗಾಗಿ ಭಾರತವನ್ನು ತಲುಪಿದೆ.

ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಹೊಸ ಹೋಂಡಾ ಕಾಂಪಾಕ್ಟ್ ಎಸ್ ಯುವಿ ಪರೀಕ್ಷೆಗೊಳಪಡಿಸಲಾಗುವುದು. ಅನೇಕ ಜನಪ್ರಿಯ ಮಾದರಿಗಳಿಗೆ ತನ್ನ ತಳಹದಿ ಹಂಚಿಕೊಂಡಿರುವ ಬ್ರಿಯೊ, ಹೊಸ ಮಾದರಿಯ ನಿರ್ಮಾಣದಲ್ಲೂ ತನ್ನ ಸೇವೆಯನ್ನು ಸಲ್ಲಿಸಲಿದೆ.

ಹೋಂಡಾ ಕಾಂಪಾಕ್ಟ್ ಎಸ್‌ಯುವಿ

ವರದಿಗಳ ಪ್ರಕಾರ ಹೋಂಡಾ ಕಾಂಪಾಕ್ಟ್ ಎಸ್ ಯುವಿ 2016-17ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ. ಹಾಗಿದ್ದರೂ ಹೊಸ ಮಾದರಿಯು ನಾಲ್ಕು ಮೀಟರ್ ಪರಿಧಿಯನ್ನು ಒಳಗೊಂಡಿರುವುದಿಲ್ಲ. ಇದು ಅದಕ್ಕಿಂತಲೂ ದೊಡ್ಡದಾಗಿರಲಿದೆ.

ಅಂತೆಯೇ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳು ಇದರಲ್ಲಿ ಲಭ್ಯವಾಗಲಿದೆ. ಇದರಲ್ಲಿ ಮೊಬಿಲಿಯೊ ಹಾಗೂ ಸಿಟಿ ಸೆಡಾನ್ ಕಾರಿನಲ್ಲಿ ಬಳಕೆಯಾಗಿರುವುದಕ್ಕೆ ಸಮಾನವಾಗಿ 1.5 ಲೀಟರ್ ಡೀಸೆಲ್ ಎಂಜಿನ್ ಕಂಡುಬರಲಿದೆ.

ಹೋಂಡಾ ಕಾಂಪಾಕ್ಟ್ ಎಸ್‌ಯುವಿ

ನಿಮ್ಮ ಮಾಹಿತಿಗಾಗಿ, ಎಲ್ಲ ಹೊಸತನದ ಹೋಂಡಾ ಜಾಝ್ ಹಾಗೂ ಅಮೇಜ್ ಫೇಸ್ ಲಿಫ್ಟ್ ಮಾದರಿಯು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ. ಬಳಿಕ ಮುಂದಿನ ವರ್ಷ ಹೊಸ ಅಕಾರ್ಡ್ ಹಾಗೂ ಹೋಂಡಾ ಕಾಂಪಾಕ್ಟ್ ಎಸ್ ಯುವಿ ದೇಶದ ಮಾರುಕಟ್ಟೆಗೆ ಪರಿಚಯವಾಗಲಿದೆ.
Most Read Articles

Kannada
English summary
The Brio hatchback has served as a base to several of their models. Now Honda has imported to India their Brio based compact SUV for tests within the country.
Story first published: Saturday, June 6, 2015, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X