ಬಂದೇ ಬಿಡ್ತು ಹೋಂಡಾ ಅಮೇಜ್ ಸಿಎನ್‌ಜಿ ಆವೃತ್ತಿ

Written By:

ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಕಾರುಗಳ ಪೈಕಿ ಒಂದಾಗಿರುವ ಹೋಂಡಾ ಅಮೇಜ್ ಈಗ ಸಿಎನ್‌ಜಿ ರೂಪದಲ್ಲಿ ಎಂಟ್ರಿ ಕೊಟ್ಟಿದೆ. ಈ ಹಿಂದೆ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾದಿಂದ ಭಾರತದಲ್ಲಿ ಬಿಡುಗಡೆಯಾಗಿರುವ ಮೊದಲ ಡೀಸೆಲ್ ಕಾರೆಂಬ ಹೆಗ್ಗಳಿಕೆಗೆ ಅಮೇಜ್ ಪಾತ್ರವಾಗಿತ್ತು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

1.2 ಎಂಟಿ ಪ್ಲಸ್ (ಐ-ವಿಟೆಕ್) - 5,99,585 ರು.

ಸಿಎನ್‌ಜಿ ಕಿಟ್ ಜೋಡಣೆ - ಹೆಚ್ಚುವರಿ 54,315 ರು.

Honda Amaze

ಈಗ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಅಮೇಜ್ 1.2 ಎಂಟಿ ಪ್ಲಸ್ ಐ-ವಿಟೆಕ್ ಪೆಟ್ರೋಲ್ ಮಾದರಿಯ ಸಿಎನ್‌ಜಿ ಕಿಟ್ ಪರಿಚಯಿಸಿದೆ. ಇದಕ್ಕಾಗಿ ಹೆಚ್ಚುವರಿ 54,315 ರು. ಪಾವತಿಸಬೇಕಾಗಿದೆ. 2013ನೇ ಇಸವಿಯಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದ ಕಾಂಪಾಕ್ಟ್ ಸೆಡಾನ್ ಅಮೇಜ್ ಈಗಾಗಲೇ 1.3 ಲಕ್ಷಕ್ಕೂ ಹೆಚ್ಚು ಹೆಮ್ಮೆಯ ಗ್ರಾಹಕರನ್ನು ಹೊಂದಿದೆ.

ಹೊಸತಾದ ಸಿಎನ್‌ಜಿ ವೆರಿಯಂಟ್ ಮೇಲೆ ಎರಡು ವರ್ಷಗಳ ವಾರಂಟಿ ಕೂಡಾ ಇರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ ಸೆನ್, "ಸಂಸ್ಥೆಯು ಗ್ರಾಹಕರ ಗರಿಷ್ಠ ಅನುಭವಕ್ಕಾಗಿ ಕಾರ್ಯ ನಿರತವಾಗಿದ್ದು, ಈಗ ಅಗ್ಗದ ಸಿಎನ್‌ಜಿ ವೆರಿಯಂಟ್ ಹೆಚ್ಚು ಪರಿಸರ ಸ್ನೇಹಿ ಕೂಡಾ ಆಗಿರಲಿದೆ" ಎಂದಿದ್ದಾರೆ.

ಹೊಸ ಹೋಂಡಾ ಅಮೇಜ್ ಕಾರಿನ ಹುಡುಕಾಟದಲ್ಲಿದ್ದೀರಾ? ಸಂಪೂರ್ಣ ವಿವರಗಳಿಗಾಗಿ ಕಳಗೆ ಕೊಟ್ಟಿರುವ ಶೋಧನಾ ಪುಟಕ್ಕೆ ಭೇಟಿ ಕೊಡಿರಿ.

English summary
Honda Cars India Ltd. (HCIL), leading manufacturer of premium cars in India, today launched its CNG-ready variant of the family-sedan Honda Amaze. The new variant Amaze 1.2 S MT Plus (i-VTEC) is modified petrol Honda Amaze which is compatible for CNG fuel option.
Story first published: Thursday, February 12, 2015, 16:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark