ಜಾಗ್ವಾರ್‌ನಿಂದ ರಸ್ತೆ ಗುಂಡಿ ಪತ್ತೆಹಚ್ಚುವ ತಂತ್ರಜ್ಞಾನ

Posted By:

ವಾಹನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಈಗ ರಸ್ತೆಯಲ್ಲಿನ ಗುಂಡಿಗಳನ್ನು ಪತ್ತೆಹಚ್ಚುವ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಲಿದೆ.

ಮುಂಬರುವ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ವಾಹನಗಳಲ್ಲಿ ಇದನ್ನು ಬಳಕೆ ಮಾಡುವುದರ ಬಗ್ಗೆಯೂ ಸಂಸ್ಥೆಯು ಸೂಚನೆಯನ್ನು ನೀಡಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ತಂತ್ರಗಾರಿಕೆಯು ನಿಕಟ ಭವಿಷ್ಯದಲ್ಲೇ ಲೋಕಾರ್ಪಣೆಯಾಗಲಿದೆ.

ಜಾಗ್ವಾರ್

ಇದಕ್ಕಾಗಿ ರೋಡ್ ಸೆನ್ಸಿಂಗ್ ಕ್ಯಾಮೆರಾ ಸಿಸ್ಟಂ ಆಳವಡಿಸಲಾಗುವುದು. ಈ ಸಂಬಂಧ ಜಾಗ್ವಾರ್ ಬ್ರಿಟನ್ ನ ಕಾವರ್ಟೆ ಸಿಟಿ ಕೌನ್ಸಿಂಲ್ ಸರ್ಕಾರಿ ಅಧಿಕಾರಗಳೊಂದಿಗೆ ಮಾತುಕತೆ ನಡೆಸಿದ್ದು, ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದರೆ ಕ್ಲೌಡ್ ಮುಖಾಂತರ ಎಚ್ಚರಿಕೆಯನ್ನು ರವಾನಿಸಲಿದೆ. ಇತರ ವಾಹನಗಳು ಇದರ ನೆರವನ್ನು ಪಡೆಯಲಿದೆ.

ರೇಂಜ್ ರೋವರ್ ಇವೋಕ್ ವಾಹನದಲ್ಲಿ ನೂತನ ರಸ್ತೆ ಗುಂಡಿ ಪತ್ತೆ ಹಚ್ಚುವ ಹಾಗೂ ಎಚ್ಚರಿಕೆ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುವುದು. ಇವೆಲ್ಲವೂ ರಸ್ತೆ ಪಯಣವನ್ನು ಇನ್ನಷ್ಟು ಸುರಕ್ಷಿತವಾಗಿಸಲಿದೆ.

English summary
JLR Researching New Pothole Detection Technology
Story first published: Saturday, June 13, 2015, 9:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark