2014 ಅತ್ಯಂತ ಅಂದದ ಕಾರು - ಜಾಗ್ವಾರ್ ಎಕ್ಸ್‌ಇ

Written By:

ಜಗತ್ತಿನ ಅತ್ಯಂತ ಆಕರ್ಷಕ ಕಾರುಗಳಲ್ಲಿ ಒಂದಾಗಿರುವ ಜಾಗ್ವಾರ್ ಎಕ್ಸ್‌ಇ ತನ್ನ ಸೌಂದರ್ಯಕ್ಕೆ ತಕ್ಕಂತೆ 2014ನೇ ಸಾಲಿನ 'ಅತ್ಯಂತ ಅಂದದ ಕಾರು' ಪ್ರಶಸ್ತಿಗೆ ಅರ್ಹವಾಗಿದೆ.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ 30ನೇ ಆವೃತ್ತಿಯ ಫೇಸ್ಟಿವಲ್ ಆಟೋಮೊಬೈಲ್ ಇಂಟರ್ ನ್ಯಾಷನಲ್ ಸಮಾರಂಭದಲ್ಲಿ ಜಾಗ್ವಾರ್ ಎಕ್ಸ್‌ಇ ಕಾರಿಗೆ ಇಂತಹದೊಂದು ಮನ್ನಣೆ ದೊರಕಿದೆ.

jaguar xe

ವಿಶ್ವದ್ಯಾಂತ 59 ರಾಷ್ಟ್ರಗಳ 1,00,000ದಷ್ಟು ಸಾರ್ವಜನಕರು ಚಲಾಯಿಸಿರುವ ಮತದ ಆಧಾರದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದರಂತೆ ಮಾಜ್ದಾ ಎಂಎಕ್ಸ್-5, ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಎಸ್ಟೇಟ್ ಹಾಗೂ ಫಿಯೆಟ್ 500ಎಕ್ಸ್ ಕಾರುಗಳನ್ನು ಹಿಂದಿಕ್ಕಿರುವ ಜಾಗ್ವಾರ್ ಎಕ್ಸ್‌ಇ ಜಯಶಾಲಿಯಾಗಿದೆ.

ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಜಾಗ್ವಾರ್ ವಿನ್ಯಾಸ ನಿರ್ದೇಶಕ ಇಯಾನ್ ಕಾಲಂ ಪ್ರಶಸ್ತಿ ಸ್ವೀಕರಿಸಿದರು. ಅಂದ ಹಾಗೆ ಇದು ಎರಡನೇ ಬಾರಿಗೆ ಜಾಗ್ವಾರ್ ಎಕ್ಸ್‌ಇ ಪ್ರಶಸ್ತಿ ಬಾಚಿಕೊಳ್ಳುತ್ತಿರುವುದು. ಇದಕ್ಕೂ ಮೊದಲು 2014 ಅಕ್ಟೋಬರ್‌ನಲ್ಲಿ ನಡೆದ ಪ್ಯಾರಿಸ್ ಮೋಟಾರು ಶೋದಲ್ಲಿ ಅತ್ಯುತ್ತಮ ನಿರ್ಮಾಣ ಕಾರು ಪ್ರಶಸ್ತಿಗೂ ಭಾಜನವಾಗಿತ್ತು.

English summary
The Jaguar XE has been awarded the Most Beautiful Car of 2014 at the 30th edition of Festival Automobile International in Paris.
Story first published: Friday, January 30, 2015, 10:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark