ಲೆಕ್ಸಸ್ ಇಎಸ್ ಮತ್ತು ಆರ್‌ಎಕ್ಸ್ ಮಾದರಿಗಳು ಭಾರತಕ್ಕೆ

By Nagaraja

ಟೊಯೊಟಾದ ಲಗ್ಷುರಿ ಬ್ರಾಂಡ್ ಆಗಿರುವ ಲಕ್ಸಸ್ ಭಾರತಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಈ ಮೂಲಕ ಜಗತ್ತಿನೆಲ್ಲೆಡೆಯ ಐಷಾರಾಮಿ ಸಂಸ್ಥೆಗಳು ದೇಶದತ್ತ ಗಮನ ಕೇಂದ್ರಿಸುವಂತಾಗಿದೆ.

ಜಾಗತಿಕವಾಗಿ ಅನೇಕ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಲೆಕ್ಸಸ್ ಈಗ ಭಾರತದತ್ತ ದಾಪುಗಾಲನ್ನಿಡಲು ಸಜ್ಜಾಗಿದೆ. ಬಲ್ಲ ಮೂಲಗಳ ಪ್ರಕಾರ ಲೆಕ್ಸಸ್ ಬ್ರಾಂಡ್ 2016ನೇ ಸಾಲಿನಲ್ಲಿ ಭಾರತ ಪ್ರವೇಶವಾಗಲಿದೆ.

ಟೊಯೊಟಾ ಲೆಕ್ಸಸ್

ಇದಕ್ಕೆ ಮುನ್ನುಡಿ ಬರೆಯಲಿರುವ ಟೊಯೊಟಾ ಆರಂಭದಲ್ಲಿ ಲೆಕ್ಸಸ್ ಇಎಸ್ ಮತ್ತು ಆರ್‌ಎಕ್ಸ್ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇವೆರಡು ಐಷಾರಾಮಿ ಸ್ಪೋರ್ಟ್ಸ್ ಸೆಡಾನ್ ಮತ್ತು ಕ್ರಾಸೋವರ್ ಮಾದರಿಯಾಗಿರಲಿದೆ.
ಟೊಯೊಟಾ ಲೆಕ್ಸಸ್

ಈ ಎರಡು ಮಾದರಿಗಳು ಟೊಯೊಟಾ ಕ್ಯಾಮ್ರಿಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಇದಕ್ಕೂ ಮೊದಲು 2016 ಆಟೋ ಎಕ್ಸ್ ಪೋದಲ್ಲೂ ಅನಾವರಣಗೊಳ್ಳುವ ಸಾಧ್ಯತೆಯಿದೆ.
ಟೊಯೊಟಾ ಲೆಕ್ಸಸ್

ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತದ ಮುಖಾಂತರ ಲೆಕ್ಸಸ್ ಬ್ರಾಂಡ್ ದೇಶಕ್ಕೆ ಪರಿಚಯಿಸಲು ಟೊಯೊಟಾ ಯೋಜನೆ ಹೊಂದಿದೆ. ಇದು ಕರ್ನಾಟಕದ ಘಟಕದಲ್ಲಿ ಜೋಡಣೆಯಾಗಲಿದೆ ಎಂಬುದು ಈಗ ಬಂದಿರುವ ಸಿಹಿ ಸುದ್ದಿ.
ಟೊಯೊಟಾ ಲೆಕ್ಸಸ್

ಈ ಎಲ್ಲದರ ಮೂಲಕ ಜರ್ಮನಿಯ ತ್ರಿವಳಿ ಐಷಾರಾಮಿ ಸಂಸ್ಥೆಗಳಾಗಿರುವ ಆಡಿ, ಬೆಂಝ್ ಹಾಗೂ ಬಿಎಂಡಬ್ಲ್ಯು ಮಾದರಿಗಳಿಗೆ ದೇಶದಲ್ಲಿ ಟೊಯೊಟಾ ಲೆಕ್ಸಸ್ ನೇರ ಪ್ರತಿಸ್ಪರ್ದೆಯನ್ನು ಒಡ್ಡಲಿದೆ.
Most Read Articles

Kannada
English summary
Lexus ES & RX Models To Be Introduced In India By Toyota AS CKD Units
Story first published: Saturday, December 19, 2015, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X