ಟಾಟಾ ಬ್ರಾಂಡ್ ಅಂಬಾಸಿಡರ್ ಆಗಲಿರುವ ಲಿಯೊನೆಲ್ ಮೆಸ್ಸಿ?

Written By:

ಅರ್ಜೆಂಟೀನಾ ಹಾಗೂ ಸ್ಪೇನ್‌ನ ಹೆಸರಾಂತ ಬಾರ್ಸಿಲೋನಾ ತಂಡದ ಮುನ್ನಡೆಯ ಪುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ, ದೇಶದ ಅತಿ ದೊಡ್ಡ ಸಂಸ್ಥೆ ಟಾಟಾ ಮೋಟಾರ್ಸ್ ಮುಖ್ಯ ಪ್ರಚಾರ ರಾಯಭಾರಿ ಆಗಲಿದ್ದಾರೆ ಎಂಬುದು ತಿಳಿದು ಬಂದಿದೆ.

Also Read : 'ಗೋಲ್ಡನ್ ಬಾಲ್' ಪುರಸ್ಕೃತ ಮೆಸ್ಸಿ ಕಾರು ಪ್ರೇಮ

ಟಾಟಾ ಸಂಸ್ಥೆಯ ಬಹುನಿರೀಕ್ಷಿತ ಕೈಟ್ ಮಾದರಿಯ ಬ್ರಾಂಡ್ ಅಂಬಾಸಿಡರ್ ಆಗಿ 28ರ ಹರೆಯದ ಮೆಸ್ಸಿ ಆಯ್ಕೆಯಾಗುವುದು ಬಹುತೇಕ ಖಚಿತವೆನಿಸಿದೆ. ಈ ಸಂಬಂಧ ಫಿಫಾ ಬ್ಯಾಲನ್ ಡಿಓರ್ (FIFA Ballon d'Or) ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದುಕೊಂಡಿರುವ ಏಕೈಕ ಫುಟ್ಬಾಲ್ ಆಟಗಾರ ಮೆಸ್ಸಿ ಜೊತೆ ಮಾತುಕತೆಗಳು ಪ್ರಗತಿಯಲ್ಲಿದೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ವಾಹನೋದ್ಯಮ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಲಿಯೊನೆಲ್ ಮೆಸ್ಸಿ ಈಗಾಗಲೇ ಸ್ಪೇನ್ ನಲ್ಲಿ ಟಾಟಾ ಮೋಟಾರ್ಸ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ಟಾಟಾ ಮೋಟಾರ್ಸ್‌ನ ಮುಂಬರುವ ಬಹುನಿರೀಕ್ಷಿತ ಮಾದರಿಗಳಾಗಿರುವ ಕೈಟ್ ಹ್ಯಾಚ್ ಬ್ಯಾಕ್ ಹಾಗೂ ಕೈಟ್ ಕಾಂಪಾಕ್ಟ್ ಸೆಡಾನ್ ಕಾರುಗಳ ಪ್ರಚಾರಕ್ಕೆ ಮೆಸ್ಸಿ ಉತ್ತೇಜನ ತುಂಬಲಿದ್ದಾರೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ಟಾಟಾ ಸಂಸ್ಥೆಯು ಮೆಸ್ಸಿ ಅವರನ್ನು ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ಮಾಡಿರುವುದರ ಹಿಂದೆ ಕಾರಣವೊಂದಿದೆ. ಇದು ಸಂಸ್ಥೆಯ ಮುಂಬರುವ ಜಾಗತಿಕ ಉತ್ಪನ್ನ ಕೈಟ್ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತಿದೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ಅತಿ ನೂತನ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಿರುವ ಟಾಟಾ ಕೈಟ್, ವರ್ಷಾಂತ್ಯದಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ. ಇದು 1.05 ಲೀಟರ್ ತ್ರಿ ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, 140 ಎನ್‌ಎಂ ತಿರುಗುಬಲದಲ್ಲಿ 64.1 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಮಗದೊಂದು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹ ಕಾಣಿಸಿಕೊಳ್ಳಲಿದೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗಲಿರುವ ಟಾಟಾ ಕೈಟ್ ಗುಜರಾತ್ ನ ಸನಂದ್ ಘಟಕದಲ್ಲಿ ನಿರ್ಮಾಣವಾಗಲಿದ್ದು, ಮಾರುತಿ ಸೆಲೆರಿಯೊ ಹಾಗೂ ಹ್ಯುಂಡೈ ಗ್ರಾಂಡ್ ಐ10 ಮಾದರಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ.

ಟಾಟಾ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮೆಸ್ಸಿ?

ಇಟಲಿಯ ಮ್ಯಾಗ್ನೆಟಿ ಮರೆಲ್ಲಿ ಸಹಯೋಗದಲ್ಲಿ ನೂತನ ಕೈಟ್ ಕಾರಲ್ಲೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಆಳವಡಿಕೆಯಾಗಲಿದೆ. ಒಟ್ಟಿನಲ್ಲಿ ಮೆಸ್ಸಿ ಎಂಟ್ರಿಯೊಂದಿಗೆ ಜಾಗತಿಕ ಮಟ್ಟದಲ್ಲೂ ಟಾಟಾ ತನ್ನ ಪ್ರತಿಷ್ಠೆಯನ್ನು ವೃದ್ಧಿಸಲಿದೆ.

ಇವನ್ನೂ ಓದಿ

ಟಾಪ್ 10 ಫುಟ್ಬಾಲ್ ಆಟಗಾರರ ಕಾರು ಸಂಗ್ರಹಗಳು - ಮುಂದಕ್ಕೆ ಓದಲು ಕ್ಲಿಕ್ಕಿಸಿ

 

English summary
Lionel Messi to become brand ambassador of Tata Kite

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark