'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

By Nagaraja

ಜರ್ಮನಿ, ಇಟಲಿ, ಬ್ರಿಟನ್ ಹಾಗೂ ಅಮೆರಿಕಗಳಂತಹ ಮುಂದುವರಿದ ದೇಶಗಳು ಸೂಪರ್ ಕಾರನ್ನು ಉತ್ಪಾದಿಸುವಾಗ ಭಾರತದಿಂದ ಏಕೆ ಸಾಧ್ಯವಿಲ್ಲ? ಎಂಬ ಯೋಚನೆಯೇ ದೇಶದಲ್ಲಿ ಸೂಪರ್ ಕಾರು ಕಲ್ಪನೆ ಹುಟ್ಟಿಕೊಳ್ಳಲು ಸಾಧ್ಯವಾಗಿದೆ. ಹೌದು, ಇಂತಹದೊಂದು ಮಹತ್ತರ ಯೋಜನೆಯನ್ನು ಮಣಿಪಾಲ ತಳಹದಿಯ ಎಂಎಂಎಂ ಅಥವಾ ಮೀನ್ ಮೆಟಲ್ ಮೋಟಾರ್ಸ್ (Mean Metal Motors) ಕೈಗೆತ್ತಿಗೊಂಡಿದೆ.

ಏರೋಡೈನಾಮಿಕ್ ವಿನ್ಯಾಸ, ಕಾರ್ಬನ್ ಫೈಬರ್ ಪರಿಕರ, ಗರಿಷ್ಠ ನಿರ್ವಹಣೆ, ಅತ್ಯಾಧುನಿಕ ತಂತ್ರಜ್ಞಾನ ಹೀಗೆ ಒಂದು ಸೂಪರ್ ಕಾರಿಗೆ ಬೇಕಾದ ಎಲ್ಲ ಅಂಶಗಳನ್ನು ಬಹಳ ಶ್ರದ್ಧೆಯಿಂದ ಅಭಿವೃದ್ಧಿಪಡಿಸಲಾಗುತ್ತಿದ್ದು, ನಿಕಟ ಭವಿಷ್ಯದಲ್ಲೇ ಸೂಪರ್ ಕಾರುಗಳ ಸಾಲಿನಲ್ಲಿ ಭಾರತದ ಹೆಸರು ಹೊಳೆಯಲಿದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

'ಎಂ-ಝೀರೋ' ಎಂಬ ಅಕ್ಕರೆಯ ಹೆಸರಿನಿಂದ ಕರೆಯಲ್ಪಡುವ ದೇಶದ ಚೊಚ್ಚಲ ಸೂಪರ್ ನಿರ್ಮಾಣದಲ್ಲಿ ನಾಲ್ಕು ರಾಷ್ಟ್ರಗಳ ನಾಲ್ಕು ತಂಡಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಿದೆ. ಇಟಲಿ ಹಾಗೂ ಪೋರ್ಚುಗಲ್ ತಂಡದ ಸದ್ಯಸರು ಕಾರಿನ ಬಾಡಿ ಹಾಗೂ ಶೈಲಿ ವಿನ್ಯಾಸಗೊಳಿಸುತ್ತಿದ್ದರೆ ಬ್ರಿಟನ್ ತಂಡವು ವಿಶ್ಲೇಷಣೆ ಮಾಡಲಿದೆ. ಇನ್ನುಳಿದಂತೆ ಪ್ರಮುಖ ಪಾತ್ರ ವಹಿಸಲಿರುವ ಭಾರತ ತಂಡವು ಎಂಜಿನ್, ಗೇರ್ ಬಾಕ್ಸ್, ಏರೋಡೈನಾಮಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಎನರ್ಜಿ ಸ್ಟೋರೆಜ್ ಸಿಸ್ಟಂಗಳ ಜವಾಬ್ದಾರಿಯನ್ನು ವಹಿಸಲಿದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂ-ಝೀರೋ ಸೂಪರ್ ಕಾರು ಹಗುರ ಭಾರದ ಕಾರ್ಬನ್ ಫೈಬರ್ ಮೊನೊಕಾಕ್ ಟ್ಯೂಬ್ ಚಾಸೀಯನ್ನು ಪಡೆಯಲಿದ್ದು, ಕಾರಿಗೆ ಬೇಕಾದಷ್ಟು ಬಿಗಿತವನ್ನು ಒದಗಿಸಲಿದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ 4.0 ಲೀಟರ್ ಎಎಂಜಿ ವಿ8 ಬೈರ್ ಟರ್ಬೊ ಅಥವಾ 4.8 ಲೀಟರ್ ಎನ್‌ಎ ವಿ10 ಎಂಜಿನ್ ಆಳವಡಿಸುವ ಯೋಜನೆಯಿದೆ. ಇದು 500ಕ್ಕೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂ-ಝೀರೋ ಒಂದು ಪರಿಪೂರ್ಣ ಹೈಬ್ರಿಡ್ ಕಾರೆನಿಸಿಕೊಳ್ಳಲಿದೆ. ಸಾಮಾನ್ಯ ಹೈಬ್ರಿಡ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಚಲಿಸಿದ ಬಳಿಕ ಎಲೆಕ್ಟ್ರಿಕ್ ಎಂಜಿನ್ ಕಾರ್ಯಾಚರಿಸುತ್ತದೆ. ಆದರೆ ಇಲ್ಲಿ ಎಂ-ಝೀರೋ ಏಕಕಾಲದಲ್ಲಿ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರು ಕಾರ್ಯನಿರ್ವಹಿಸುವಂತೆ ಎಂಜಿನ್ ಅಭಿವೃದ್ಧಿಪಡಿಸಲಾಗುತ್ತದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂ-ಝೀರೋ ಎಲೆಕ್ಟ್ರಿಕ್ ಮೋಟಾರು 250 ಅಶ್ವಶಕ್ತಿ ಉತ್ಪಾದಿಸಲಿದೆ. ಅಂದರೆ ಎರಡು ಎಂಜಿನ್ ಒಟ್ಟು ಸೇರಿ 900 ಎನ್‌ಎಂ ತಿರುಗುಬಲದಲ್ಲಿ 750ಕ್ಕೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸಲಿದೆ. ಓರ್ವ ಸೂಪರ್ ಕಾರು ಪ್ರಿಯನಿಗೆ ಇದಕ್ಕಿಂತಲೂ ಮಿಗಿಲಾಗಿ ಇನ್ನೇನು ಬೇಕು ಅಲ್ಲವೇ?

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಸಾರ್ಥಕ್ ಪಾಲ್ ಎಂಬವರೇ ಮೀನ್ ಮೆಟಲ್ ಮೋಟಾರ್ಸ್ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರಾಗಿದ್ದಾರೆ. ಆಟೋಮೊಬೈಲ್ ಬಗ್ಗೆ ಉತ್ಸಾಹವನ್ನು ಹೊಂದಿರುವ ಅವರು ತಮ್ಮ ಕನಸಿನ ಯಾತ್ರೆಯಲ್ಲಿ ಗೆಲುವನ್ನು ಸಾಧಿಸುವ ಅಚಲ ವಿಶ್ವಾಸವನ್ನು ಹೊಂದಿದ್ದಾರೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂ-ಝೀರೋ ಸೂಪರ್ ಕಾರು ಅಂದಾಜು ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ನಿರ್ಮಾಣ ಪ್ರಕ್ರಿಯೆಗಾಗಿ ಬಹು ಕೋಟಿ ವೆಚ್ಚ ತಗುಲಲಿದೆ. ಪ್ರಸ್ತುತ ಜರ್ಮನಿಯ ಮೂಲದ ಬರ್ನಾಯರ್ (Bernauer) ಗ್ರೂಪ್ ಆರ್ಥಿಕ ನೆರವನ್ನು ಒದಗಿಸುತ್ತಿದೆ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಆರಂಭದಲ್ಲಿ ಯುರೋಪ್ ನಲ್ಲಿ ಎಂ-ಝೀರೋ ಕಾರನ್ನು ನಲ್ಲಿ ನಿರ್ಮಾಣ ಮಾಡುವ ಯೋಜನೆ ಇರಿಸಿಕೊಳ್ಳಲಾಗಿತ್ತು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಭಾರತ ವಾಹನ ಮಾರುಕಟ್ಟೆಯ ಸಾಮರ್ಥ್ಯವನ್ನು ಅರಿತುಕೊಂಡ ಎಂಎಂಎಂ ತಂಡವು ತಮ್ಮ ನಿರ್ಧಾರವನ್ನು ಬದಲಾಯಿಸಿತ್ತು.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಎಂ-ಝೀರೋ ಸೂಪರ್ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಕಂಡುಬರಲಿದ್ದು, ಫಿಂಗರ್ ಪ್ರಿಂಟ್ ಕೀಲೆಸ್ ಎಂಟ್ರಿ ಇದರಲ್ಲಿ ಒಂದಾಗಿರಲಿದೆ. ಅಂದರೆ ಮಾಲಿಕನ ಹೊರತಾಗಿ ಇತರ ಯಾರು ಕಾರನ್ನು ಪ್ರವೇಶಿಸುವಂತಿಲ್ಲ.

'ಎಂ-ಝೀರೋ' ಆಗಲಿದೆ ಭಾರತದ ಮೊತ್ತ ಮೊದಲ ಸೂಪರ್ ಕಾರು?

ಒಟ್ಟಿನಲ್ಲಿ ದೇಶದ ಯುವ ಎಂಜಿನಿಯರ್ ಗಳ ಚೊಚ್ಚಲ ಸೂಪರ್ ಕಾರಿನ ಕನಸು ಅತಿ ಬೇಗನೇ ನನಸಾಗಲಿ ಎಂಬುದು ನಮ್ಮ ಹಾರೈಕೆಯಾಗಿದೆ.

Most Read Articles

Kannada
English summary
Meet the M-Zero, India's First Supercar?
Story first published: Wednesday, August 19, 2015, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X