ಅಧ್ಯಯನ, ಅಭಿವೃದ್ಧಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ

By Nagaraja

ಕಳೆದ ದಿನವಷ್ಟೇ ಅಧ್ಯಯನ ಹಾಗೂ ಅಭಿವೃದ್ಧಿಗಾಗಿ 2016 ಟೊಯೊಟಾ ಫಾರ್ಚ್ಯುನರ್ ಭಾರತಕ್ಕೆ ಆಮದು ಮಾಡಿರುವ ಬಗ್ಗೆ ವರದಿ ಮಾಡಿರುತ್ತೇವೆ. ಈಗ ದೇಶದ ಮಗದೊಂದು ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ಸಹ ಇದಕ್ಕೆ ಸಮಾನವಾದ ನಡೆ ಸ್ವೀಕರಿಸಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಹೀಂದ್ರ ಸಂಸ್ಥೆಯ ಅಧೀನತೆಯಲ್ಲಿರುವ ದಕ್ಷಿಣ ಕೊರಿಯಾದ ಸ್ಯಾಂಗ್ಯೊಂಗ್‌ನ ಬಹುನಿರೀಕ್ಷಿತ ಟಿವೊಲಿ ಮಾದರಿಯನ್ನು ಅಧ್ಯಯನ ಹಾಗೂ ಅಭಿವೃದ್ಧಿ ಯೋಜನೆಗಾಗಿ ಭಾರತಕ್ಕೆ ಆಮದು ಮಾಡಲಾಗಿದೆ.

ಅಧ್ಯಯನ, ಅಭಿವೃದ್ಧಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ

ಭಾರತದಲ್ಲಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ನಿಮ್ಮ ಮಾಹಿತಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ 1.6 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಅಧ್ಯಯನ, ಅಭಿವೃದ್ಧಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ

ಇದರ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 160 ಎನ್‌ಎಂ ತಿರುಗುಬದಲ್ಲಿ 136 ಅಶ್ವಶಕ್ತಿಯನ್ನು ಹಾಗೂ ಡೀಸೆಲ್ ಎಂಜಿನ್ 300 ಎನ್‌ಎಂ ತಿರುಗುಬಲಲ್ಲಿದ 113 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇವೆರಡೂ ಆರು ಸ್ಪೀಡ್ ಮ್ಯಾನುವಲ್ ಹಾಗೂ ಐಸಿನ್ (Aisin) ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಗಳಿಂದ ನಿಯಂತ್ರಿಸಲ್ಪಡುತ್ತದೆ.

ಅಧ್ಯಯನ, ಅಭಿವೃದ್ಧಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ

ಇನ್ನು ಭಾರತದಲ್ಲಿ ಟಿಯುವಿ300 ಮಾದರಿಯಲ್ಲಿರುವದಕ್ಕೆ ಸಮಾನವಾದ 1.5 ಲೀಟರ್ 3 ಸಿಲಿಂಡರ್ ಎಂಹಾಕ್80 ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಅಲ್ಲದೆ 4X2 ಹಾಗೂ 4X4 ಆಯ್ಕೆಯೂ ಇರಲಿದೆ.

ಆಯಾಮ

ಆಯಾಮ

  • ಉದ್ದ: 4195 ಎಂಎಂ
  • ಅಗಲ: 1795 ಎಂಎಂ
  • ಎತ್ತರ: 1590 ಎಂಎಂ
  • ಚಕ್ರಾಂತರ: 2600 ಎಂಎಂ
  • ಢಿಕ್ಕಿ ಜಾಗ: 423 ಲೀಟರ್
  • ವಿಶಿಷ್ಟತೆ

    ವಿಶಿಷ್ಟತೆ

    • ಸೆಂಟ್ರಲ್ ಟಚ್ ಸ್ಕ್ರೀನ್,
    • ಬ್ಲೂಟೂತ್ ಆಡಿಯೋ,
    • ರಿಯರ್ ವ್ಯೂ ಕ್ಯಾಮೆರಾ,
    • ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್
    • ಭದ್ರತೆ

      ಭದ್ರತೆ

      • ಏಳು ಏರ್ ಬ್ಯಾಗ್,
      • ಚಾಲಕ ಮೊಣಕಾಲು ಏರ್ ಬ್ಯಾಗ್,
      • ಕರ್ಟೈನ್ ಏರ್ ಬ್ಯಾಗ್,
      • ಬದಿ ಏರ್ ಬ್ಯಾಗ್
      • ಅಧ್ಯಯನ, ಅಭಿವೃದ್ಧಿಗಾಗಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ

        ಅಂದ ಹಾಗೆ ಮುಂದಿನ ವರ್ಷದಲ್ಲಿ ಸ್ಯಾಂಗ್ಯೊಂಗ್ ಟಿವೊಲಿ ಭಾರತಕ್ಕೆ ಕಾಲಿಡುವ ಸಾಧ್ಯತೆಯಿದೆ. ಈ ಬಗೆಗಿನ ನಿರಂತರ ಸುದ್ದಿಗಾಗಿ ನಿಮ್ಮ ಮೆಚ್ಚಿನ ವಾಹನ ಜಾಲತಾಣ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
Mahindra has imported the Ssangyong Tivoli (compact SUV) for R&D purpose
Story first published: Thursday, October 22, 2015, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X