ನಿರೀಕ್ಷೆಗೂ ಮೊದಲೇ ಮಹೀಂದ್ರ ಎಸ್101 ರಸ್ತೆಗೆ?

Written By:

ಹೊಸತಾದ ಮಹೀಂದ್ರ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಸಾಧ್ಯತೆಯ ಬಗ್ಗೆ ವರದಿಯಾಗಿದ್ದವು. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ 'ಎಸ್101' ಕೋಡ್ ಪಡೆದುಕೊಂಡಿರುವ ಈ ವಾಹನವು ನಿರೀಕ್ಷೆಗೂ ಮೊದಲು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಅಧಿಕೃತ ಹೆಸರೇನು ?

ಎಸ್101 ಕೋಡ್ ಪಡೆದುಕೊಂಡಿರುವ ಮಹೀಂದ್ರ ಮಿನಿ ಎಸ್‌ಯುವಿ ಐಕಾನಿಕ್ ಎಕ್ಸ್‌ಯುವಿ500 ಮಾದರಿಯ ಸಣ್ಣ ಸ್ವರೂಪವಾಗಲಿದೆ ಎಂಬುದರಲ್ಲಿ ಸಂಶಯವೇ ಬೇಡ. ಈ ನಿಟ್ಟಿನಲ್ಲಿ ಇದೇ ಶ್ರೇಣಿಯ ಹೆಸರನ್ನು ಉಳಿಸಿಕೊಳ್ಳುವ ಮೂಲಕ ಎಕ್ಸ್‌ಯುವಿ100 ಹೆಸರನ್ನಿಡಲಿದೆಯೇ ಎಂಬುದು ಕಾದು ನೋಡಬೇಕಾಗಿದೆ. ಇನ್ನೊಂದೆಡೆ ಹೊಸ ಮಾದರಿಗೆ 'ಕೆಯುವಿ100' ನಾಮಕರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

To Follow DriveSpark On Facebook, Click The Like Button
ಮಹೀಂದ್ರ ಎಸ್101

ಹೊಸ ಎಂಜಿನ್...

ಈ ನಡುವೆ ಹೊಸ ಕಾರಿಗೆ ನೂತನ ಎಂಜಿನ್ ನಿರ್ಮಾಣವನ್ನು ಮಹೀಂದ್ರ ಖಚಿತಪಡಿಸಿದೆ. ಈ ಬಗ್ಗೆ ನಾವೀಗಲೇ ವರದಿ ಮಾಡಿದ್ದು, 1.2 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನಿರ್ಮಾಣವಾಗಲಿದೆ. ಹಾಗಿದ್ದರೂ ಇವೆರಡರ ನಿರ್ವಹಣಾ ಅಂಕಿಅಂಶಗಳು ಇನ್ನಷ್ಟೇ ಬಯಲಾಗಬೇಕಾಗಿದೆ. [ಮಹೀಂದ್ರ ಎಸ್ 101 ಕಾರಿನಲ್ಲಿ ಹೊಸ ಪೆಟ್ರೋಲ್ ಡೀಸೆಲ್ ಎಂಜಿನ್ ].

ಹೊಸ ತಳಹದಿ...

ಎಲ್ಲ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನೂತನ ಮಹೀಂದ್ರ ಎಸ್ ಯುವಿ ನಿರ್ಮಾಣವಾಗುತ್ತಿದ್ದು, ಮೊನೊಕಾಕ್ ಸಂರಚನೆಯನ್ನು ಪಡೆಯಲಿದೆ. ಇದಕ್ಕೂ ಮೊದಲು ಎಕ್ಸ್‌ಯುವಿ500 ನಿರ್ಮಾಣದಲ್ಲೂ ಇದೇ ನೀತಿ ಅನುಸರಿಸಲಾಗಿತ್ತು.

ಟಿಯುವಿ300

ಇದೀಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದ ಟಿಯುವಿ300 ಸ್ಪೂರ್ತಿ ಪಡೆದಿರುವ ಹೊಸ ಮಹೀಂದ್ರ ಎಸ್101, ನಾಲ್ಕು ಮೀಟರ್ ಪರಿಧಿಯೊಳಗೆ ಮಗದೊಂದು ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದೆ.

English summary
Mahindra S101 Could Launch Earlier Than Expected In India
Story first published: Monday, November 23, 2015, 17:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark