ಮಹೀಂದ್ರ ಮಗದೊಂದು ಎಸ್‌ಯುವಿ ಬರಮಾಡಿಕೊಳ್ಳಲು ತಯಾರಾಗಿರಿ!

Written By:

ಈಗಷ್ಟೇ ಹೊಚ್ಚ ಹೊಸ ತಳಹದಿಯಲ್ಲಿ ನಿರ್ಮಾಣವಾಗಿರುವ ಟಿಯುವಿ300 ಸಣ್ಣ ಕ್ರೀಡಾ ಬಳಕೆಯ ವಾಹನದ ಯಶಸ್ಸನ್ನು ಆಚರಿಸಿಕೊಳ್ಳುತ್ತಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಮಗದೊಂದು ಆಕರ್ಷಕ ಎಸ್‌ಯುವಿ ಬಿಡುಗಡೆಯ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಈ ಸಂಬಂಧ ಚೆನ್ನೈನಲ್ಲಿ ಟೆಸ್ಟಿಂಗ್ ವೇಳೆ ಸೆರೆಹಿಡಿಯಲಾಗಿರುವ ಎಕ್ಸ್ ಕ್ಲೂಸಿವ್ ಚಿತ್ರವನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇವೆ. ನಿಮ್ಮ ಮಾಹಿತಿಗಾಗಿ, ಇದೊಂದು ಪರಿಪೂರ್ಣ ಕ್ರೀಡಾ ಬಳಕೆಯ ವಾಹನ ಆಗಿರದ್ದು, ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ಬಿಡುಗಡೆ ಮಾಡಲಿರುವ ಒಂಬತ್ತು ವಾಹನಗಳ ಪೈಕಿ ಒಂದಾಗಿರಲಿದೆ.

To Follow DriveSpark On Facebook, Click The Like Button
ಮಹೀಂದ್ರ ಆಂಡ್ ಮಹೀಂದ್ರ

ಪ್ರಸ್ತುತ ಎಸ್101 ಎಂಬ ಕೋಡ್ ಪಡೆದುಕೊಂಡಿರುವ ಮಹೀಂದ್ರದ ಹೊಸ ಎಸ್‌ಯುವಿ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ ಎಂಬುದು ಮೂಲಗಳು ತಿಳಿಸಿವೆ. ಇದು ಕೂಡಾ ಎಲ್ಲ ಹೊಸತನದ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ಸಂತಸದಾಯಕ ವಿಚಾರವಾಗಿದೆ.

ನೂತನ ಎಸ್‌ಯುವಿ 'ಎಕ್ಸ್‌ಯುವಿ 100' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಮಹೀಂದ್ರ ಎಸ್101, 3+3 ಆಸನ ವ್ಯವಸ್ಥೆಯನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಅಲ್ಲದೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ನಾಲ್ಕು ಏರ್ ಬ್ಯಾಗ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರೋ (ಇಎಸ್‌ಪಿ) ವ್ಯವಸ್ಥೆಗಳು ಮತ್ತಷ್ಟು ವಿಶಿಷ್ಟವಾಗಿಸಲಿದೆ.

English summary
Mahindra S101 Spotted! Here Is What Could Be Expected Of It
Story first published: Saturday, September 12, 2015, 13:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark