ಮಹೀಂದ್ರ ಎಸ್101 ಕಾರಿನಲ್ಲಿ ಹೊಸ ಪೆಟ್ರೋಲ್, ಡೀಸೆಲ್ ಎಂಜಿನ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅತಿ ನೂತನ ಮಹೀಂದ್ರ ಎಸ್101 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಗೆ ತಲುಪಲಿದೆ. ಪ್ರಸ್ತುತ ಕಾರಿನಲ್ಲಿ ಎಲ್ಲ ಹೊಸತನದ 1.2 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಬಳಕೆಯಾಗಲಿದೆ.

ಇದನ್ನು ಮಹೀಂದ್ರ ಎಂಜಿನಿಯರ್ ಗಳು ದೇಶೀಯವಾಗಿ ಅಭಿವೃದ್ಧಿಗೊಳಿಸಿದ್ದಾರೆ. ನಿಮ್ಮ ಮಾಹಿತಿಗಾಗಿ 1.2 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನಿರ್ಮಾಣವು 2015 ನವೆಂಬರ್ 06ರಿಂದ ಆರಂಭವಾಗಿದೆ.

ಮಹೀಂದ್ರ ಎಸ್101

ಹಾಗಿದ್ದರೂ ಈ ಎರಡು ಹೊಸ ಎಂಜಿನ್ ಗಳ ನಿರ್ಮಾಣ ಸಾಮರ್ಥ್ಯದ ಬಗ್ಗೆ ವಿವರಗಳು ಬಂದಿಲ್ಲ. ಅಲ್ಲದೆ ಸಂಸ್ಥೆಯು ಹೆಚ್ಚು ನಗರ ಪ್ರದೇಶದ ಚಾಲನೆಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ.

ಪ್ರಸಕ್ತ ಸಾಲಿನ ಅಂತ್ಯದೊಳಗೆ ಅಂದರೆ ಮಾರ್ಚ್ ತಿಂಗಳೊಳಗೆ ಎಸ್‌101 ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವುದು ಸಂಸ್ಥೆಯ ಯೋಜನೆಯಾಗಿದೆ. ಹಾಗೆಯೇ ಮೊನೊಕಾಕ್ ಚಾಸೀ ರಚನೆಯಲ್ಲಿ ನಿರ್ಮಾಣವಾಗಲಿದೆ.

2016 ಆಟೋ ಎಕ್ಸ್ ಪೋದಲ್ಲೂ ಮಹೀಂದ್ರ ಎಸ್‌101 ಭರ್ಜರಿ ಪ್ರದರ್ಶನ ಕಾಣಲಿದೆ. ಅಲ್ಲದೆ ಎಸ್101 ಜೊತೆಗೆ ಈಗಷ್ಟೇ ಬಿಡುಗಡೆಯಾಗಿರುವ ಟಿಯುವಿ300 ಮಾದರಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೂ ಪರಿಚಯಿಸುವ ಯೋಜನೆ ಹೊಂದಿದೆ.

ನೂತನ ಎಸ್‌101 ಮಿನಿ ಎಸ್‌ಯುವಿ 'ಎಕ್ಸ್‌ಯುವಿ 100' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಮಹೀಂದ್ರ ಎಸ್101, 3+3 ಆಸನ ವ್ಯವಸ್ಥೆಯನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಅಲ್ಲದೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ನಾಲ್ಕು ಏರ್ ಬ್ಯಾಗ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರೋ (ಇಎಸ್‌ಪಿ) ವ್ಯವಸ್ಥೆಗಳು ಮತ್ತಷ್ಟು ವಿಶಿಷ್ಟವಾಗಿಸಲಿದೆ.

Most Read Articles

Kannada
English summary
Mahindra S101 To Be Powered By 1.2-litre Petrol & Diesel Engines
Story first published: Saturday, November 7, 2015, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X