ಸೆ.10ರಂದು ಮಹೀಂದ್ರ 'ಟಿಯುವಿ300' ಮಿನಿ ಎಸ್‌ಯುವಿ ಬಿಡುಗಡೆ

Written By:

ಭಾರಿ ಚರ್ಚೆಗೆ ಗ್ರಾಸವಾಗಿರುವ ಮಹೀಂದ್ರದ ಅತಿ ನೂತನ ಟಿಯುವಿ300 ಕ್ರೀಡಾ ಬಳಕೆಯ ವಾಹನವು ಮುಂಬರುವ 2015 ಸೆಪ್ಟೆಂಬರ್ 10ರಂದು ಭರ್ಜರಿ ಬಿಡುಗಡೆ ಕಾಣಲಿದೆಯೆಂದು ದೇಶದ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಹೊಚ್ಚ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿರುವ ಮಹೀಂದ್ರ ಮಿನಿ ಎಸ್‌ಯುವಿ ಕಾರನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ವಿಶ್ವದರ್ಜೆಯ ಸಂಸ್ಥೆಯ ಅಧ್ಯಯನ ಕೇಂದ್ರದಲ್ಲಿ (Mahindra Research Valley) ಅಭಿವೃದ್ಧಿಪಡಿಸಲಾಗಿದೆ.

To Follow DriveSpark On Facebook, Click The Like Button
ಮಹೀಂದ್ರ ಟಿಯುವಿ300

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಹಾಗೂ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪ್ರವೀಣ್ ಷಾ, "ಟಿಯುವಿ300 ಪ್ರಸಕ್ತ ಸಾಲಿನ ಬಹುನಿರೀಕ್ಷಿತ ಬಿಡುಗಡೆಯಾಗಿರಲಿದ್ದು, 'ಮೇಕ್ ಇನ್ ಇಂಡಿಯಾ' ಯೋಜನೆಯ ಸಂಕೇತವಾಗಿದೆ" ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ನೂತನ ಕ್ರೀಡಾ ಬಳಕೆಯ ವಾಹನವನ್ನು ಸಂಪೂರ್ಣ ನೂತನ ಫ್ಲ್ಯಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.

ಒಟ್ಟಿನಲ್ಲಿ ಮಹೀಂದ್ರ ಮಿನಿ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಸಾಧ್ಯತೆಯಿದ್ದು, ವಾಹನ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

English summary
Mahindra to launch its all new TUV300 on September 10
Story first published: Friday, August 14, 2015, 17:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark