ಹೊಸ ವೆರಿಯಂಟ್‌ನೊಂದಿಗೆ ಮಾರುತಿ ಸೆಲೆರಿಯೊ ಈಸಿ ಶಿಫ್ಟ್
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನೂತನ ಝಡ್ ಎಕ್ಸ್ ಐ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಅಥವಾ ಈಸಿ ಶಿಫ್ಟ್ ವೆರಿಯಂಟ್ ಅನ್ನು ಪರಿಚಯಿಸಿದೆ.
ಬೆಲೆ ಮಾಹಿತಿ: 4.99 ಲಕ್ಷ ರು. (ಎಕ್ಸ್ ಶೋರೂಂ ದೆಹಲಿ)
ವರದಿಗಳ ಪ್ರಕಾರ ಸೆಲೆರಿಯೊ ನೂತನ ವೆರಿಯಂಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, 10 ದಿನಗಳೊಳಗೆ ವಿತರಣೆ ನಡೆಯುತ್ತಿದೆ. ಝಡ್ ಎಕ್ಸ್ ಐ ತಳಹದಿಯ ನೂತನ ವೆರಿಯಂಟ್ ನಲ್ಲಿ ಈ ಹಿಂದಿನ ವೆರಿಯಂಟ್ ನಲ್ಲಿರುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿದೆ. ಹಾಗಿದ್ದರೂ ಸ್ಟ್ಯಾಂಡರ್ಡ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಕೊರತೆ ಅನುಭವಿಸಲಿದೆ.

ವೈಶಿಷ್ಟ್ಯಗಳು
- ಚಾಲಕ ಬದಿಯ ಏರ್ ಬ್ಯಾಗ್,
- ಆಡಿಯೋ ಪ್ಲೇಯರ್ ಜೊತೆ ರೆಡಿಯೋ, ಸಿಡಿ, ಯುಎಸ್ ಬಿ, ಬ್ಲೂಟೂತ್, ಆಕ್ಸ್ ಇನ್ ಬೆಂಬಲ,
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್,
- ಸ್ಟೀರಿಂಗ್ ವೀಲ್ ನಲ್ಲಿ ಆಡಿಯೋ ಕಂಟ್ರೋಲ್ ಸೇವೆ,
- ದೇಹ ಬಣ್ಣದ ವಿಂಗ್ ಮಿರರ್,
- ದೇಹ ಬಣ್ಣದ ಬಂಪರ್ ಇತ್ಯಾದಿ.
ಇನ್ನು ಅಂತಿಮವಾಗಿ ನೂತನ ವೆರಿಯಂಟ್ ಕೂಡಾ 1.0 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 67 ಅಶ್ವಶಕ್ತಿ (90 ತಿರುಗುಬಲ) ಉತ್ಪಾದಿಸಲಿದೆ.


Click it and Unblock the Notifications








