2015ರಲ್ಲಿ ಮಸೆರೆಟಿ ಭಾರತಕ್ಕೆ ಪುನರಾಗಮನ

By Nagaraja

ಇಟಲಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮಸೆರೆಟಿ ಭಾರತಕ್ಕೆ ಭರ್ಜರಿ ಪುನರಾಗಮನ ಮಾಡುವ ತವಕದಲ್ಲಿದೆ. ದೇಶದ ಆಗಾಧ ಮಾರುಕಟ್ಟೆ ಸಾಮರ್ಥ್ಯವನ್ನು ಮನಗಂಡಿರುವ ಇಟಲಿಯ ಪ್ರೀಮಿಯಂ ಸಂಸ್ಥೆಯಿಂದ ಇಂತಹದೊಂದು ಸ್ವಾಗತಾರ್ಹ ಬೆಳವಣೆಗೆ ಕಂಡುಬಂದಿದೆ.

ಈ ಹಿಂದೆಯೂ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಫೆರಾರಿ ಸಂಬ್ ಬ್ರಾಂಡ್ ಆಗಿರುವ ಮಸೆರೆಟಿ ಕಾರಣಾಂತರಗಳಿಂದಾಗಿ ಹಿಂದಕ್ಕೆ ಸರಿದಿತ್ತು. ಈಗ ಬೃಹತ್ ಯೋಜನೆ ಹೊಂದಿರುವ ಸಂಸ್ಥೆಯು 2015 ಮಧ್ಯಂತರ ಅವಧಿಯಲ್ಲಿ ಪುನರಾಗಮನ ಮಾಡಿಕೊಳ್ಳುವ ಇರಾದೆ ಹೊಂದಿದೆ.

Maserati

ದೇಶದಲ್ಲಿ ಮಸೆರೆಟಿ ಮಾರಾಟ ಬಳಿಕದ ಸೇವೆ ಅತ್ಯಂತ ಕಳಪೆ ಮಟ್ಟದಲ್ಲಿದೆಯೆಂಬ ಆರೋಪ ಕೇಳಿ ಬಂದಿತ್ತು. ಇದಕ್ಕೀಗ ಫೆರಾರಿ ಸ್ಪಷ್ಟ ಯೋಜನೆಯನ್ನು ಹೊಂದಿದೆ. ಸಂಸ್ಥೆಯು ಈಗಾಗಲೇ ಮುಂಬೈ ಹಾಗೂ ನವದಹೆಲಿಯಲ್ಲಿ ಎರಡು ಶೋ ರೂಂಗಳನ್ನು ತೆರೆದುಕೊಂಡಿದೆ.

ಹಾಗಿದ್ದರೂ ಭಾರತದಲ್ಲಿ ಮಸೆರೆಟಿ ಕಾರುಗಳು ಮಾರಾಟ ಪಾಲುದಾರಿಕೆ ಯಾರು ಪಡೆಯಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಸಂಸ್ಥೆಯಿಂದ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.

Most Read Articles

Kannada
English summary
Italian premium luxury brand Ferrari has come back to India after a short absence. Many of its customers were worried as to what would happen to the maintenance and upkeep of their prized possessions. Now its sub-brand is also staging its comeback.
Story first published: Saturday, January 24, 2015, 12:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X