14 ಹೊಸ ಡೀಲರ್‌ಶಿಪ್ ತೆರೆದುಕೊಳ್ಳಲು ಬೆಂಝ್ ಯೋಜನೆ

Written By:

2014ನೇ ಸಾಲಿನಲ್ಲಿ ಪ್ರಭಾವಾತ್ಮಕ ಪ್ರದರ್ಶನ ನೀಡಿರುವ ಜರ್ಮನಿಯ ಐಷಾರಮಿ ವಾಹ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಇನ್ನಷ್ಟು ಮಾರಾಟ ಕುದುರಿಸಿಕೊಳ್ಳುವ ಯೋಜನೆಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 14 ಹೊಸತಾದ ಡೀಲರ್ ಶಿಪ್ ತೆರೆದುಕೊಳ್ಳುವ ಯೋಜನೆಯಲ್ಲಿದೆ.

ಈ ಮೂಲಕ ಗ್ರಾಹಕರಿಗೆ ಗರಿಷ್ಠ ಆಫ್ಟರ್ ಸೇಲ್ ಅನುಭವ ನೀಡುವುದು ಸಂಸ್ಥೆಯ ಗುರಿಯಾಗಿದೆ. ಪ್ರತಿಯೊಂದು ಕಾರು ತಯಾರಿಕ ಸಂಸ್ಥೆಯ ಯಶಸ್ಸಿನಲ್ಲಿ ವಿತರಕ ಜಾಲ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ದೇಶದಲ್ಲಿ ವೃದ್ಧಿಯತ್ತ ಸಾಧಿಸಲು ಸಹಕಾರಿಯಾಗಲಿದೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಎಬೆರ್‌ಹಾರ್ಡ್ ಕೆರ್ನ್ ತಿಳಿಸಿದ್ದಾರೆ.

mercedes benz

ಸದ್ಯ ಬೆಂಜ್ ಸಂಸ್ಥೆಯು ಪೂರ್ವ ಭಾರತದತ್ತ ತನ್ನ ಚಿತ್ತ ಹಾಯಿಸಿದೆ. ಅಲ್ಲದೆ ಸಣ್ಣ ಸಣ್ಣ ನಗರಗಳತ್ತವೂ ಗಮನ ಹರಿಸಲಿದೆ. ಇದರಂತೆ ಜಾರ್ಖಂಡ್‌ನ ಆದಿತ್ಯಪುರದಲ್ಲಿ ಸಂಸ್ಥೆಯ ಮೊದಲ ಡೀಲರ್‌ಶಿಪ್ ತೆರೆದುಕೊಂಡಿದೆ.

2014ರಲ್ಲಿ 10,201 ಯುನಿಟ್‌ಗಳಷ್ಟು ಮಾರಾಟ ಕಂಡಿದ್ದ ಬೆಂಝ್ ಸಂಸ್ಥೆಯು ಶೇಕಡಾ 13ರಷ್ಟು ಏರಿಕೆ ದಾಖಲಿಸಿತ್ತು. ಇನ್ನೊಂದೆಡೆ ಪುಣೆಯಲ್ಲಿರುವ ಚಕನ್ ಘಟಕದ ನಿರ್ಮಾಣ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ 1000 ಕೋಟಿ ರು.ಗಳನ್ನು ಹೂಡಿಕೆ ಮಾಡಿದೆ.

ಪ್ರಸ್ತುತ ದೇಶದ 38 ನಗರಗಳಲ್ಲಾಗಿ 69 ಔಟ್ಲೆಟ್‌ಗಳನ್ನು ಹೊಂದಿರುವ ಬೆಂಝ್ ಸಂಸ್ಥೆಯು 2015ರ ವರ್ಷಾಂತ್ಯಕ್ಕೆ ಈ ಸಂಖ್ಯೆಯನ್ನು 80ಕ್ಕೆ ಏರಿಸುವ ಗುರಿ ಹೊಂದಿದೆ.

English summary
Now the German manufacturer has decided to introduce 15 new dealerships in India through 2015. Their focus will be on introducing exclusive dealerships in the Eastern part of India.
Story first published: Tuesday, February 10, 2015, 9:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark