ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

Written By:

ಅತಿ ದುರದೃಷ್ಟಕರ ಸಂಗತಿಯೊಂದರಲ್ಲಿ ಬೆಂಗಳೂರು ರೇಸರುಗಳ ಪಾಲಿಗೆ ಅತ್ಯಂತ ನೆಚ್ಚಿನ ರೇಸಿಂಗ್ ಸ್ಪರ್ಧೆಯಾಗಿದ್ದ ಹಾಗೂ ವರ್ಷಂಪ್ರತಿ ಆಯೋಜನೆಯಾಗುತ್ತಿದ್ದ ನಂದಿ ಹಿಲ್ ಕ್ಲೈಂಬ್ ರೇಸ್ ಅನ್ನು ಕಾರಣಾಂತರಗಳಿಂದಾಗಿ ರದ್ದುಗೊಳಿಸಲಾಗಿದೆ.

ಬಲ್ಲ ಮೂಲಗಳ ಪ್ರಕಾರ ನಂದಿ ಬೆಟ್ಟದ 1.5 ಕೀ.ಮೀ. ದೂರದ ರೇಸ್ ಟ್ರ್ಯಾಕ್‌ನಲ್ಲಿ ಬೈಕ್ ಅಪಘಾತದ ಬೆನ್ನಲ್ಲೇ ಸಂಭವಿಸಿರುವ ಕಳವಳಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ರೇಸ್ ಅನ್ನು ಸಂಪೂರ್ಣವಾಗಿ ಕೈಬಿಡಲು ಆಯೋಜಕರು ನಿರ್ಧರಿಸಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ಸ್ಲೈಡ್‌ನತ್ತ ಮುಂದುವರಿಯಿರಿ...

ರೇಸ್ ಏಕೆ ರದ್ದಾಯಿತು?

ರೇಸ್ ಏಕೆ ರದ್ದಾಯಿತು?

ಇನ್ನರ್ ಲೈನ್ ರೇಸಿಂಗ್ ಪ್ರಾಯೋಜಕತ್ವದಲ್ಲಿ ನಂದಿ ಹಿಲ್ ಕ್ಲೈಂಬ್ ಕಾರು ಹಾಗೂ ಬೈಕ್ ರೇಸ್ ಜನವರಿ 20ರಿಂದ 22ರ ವರೆಗೆ ಆಯೋಜಿಸಲಾಗಿತ್ತು. ಇದರಂತೆ ಜನವರಿ 20ರಂದು ಅಭ್ಯಾಸ ರೇಸಿಂಗ್ ಕೂಡಾ ಯಶಸ್ವಿಯಾಗಿ ನಡೆದಿತ್ತು. ಇದಾದ ಬಳಿಕ ಜನವರಿ 21ರಂದು ಕಳೆದ ದಿನ ಕಡಿಮೆ ಸಿಸಿ ಬೈಕ್‌ಗಳ ರೇಸ್ ಕೂಡಾ ಆಯೋಜಿಸಲಾಗಿತ್ತು.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ಈ ನಡುವೆ ಸಾಯಂಕಾಲದ ವೇಳೆ ವೀಕ್ಷಣೆಗೆಂದು ಬಂದಿದ್ದ ಬೈಕ್ ಉತ್ಸಾಹಿಯೊಬ್ಬ ನಡೆಸಿದ್ದ ಬೈಕ್ ಕಸರತ್ತು ವೇಳೆ ದನವೊಂದಕ್ಕೆ ಢಿಕ್ಕಿಯಾದ ಪರಿಣಾಮ ಗಂಭೀರ ಅಪಘಾತಕ್ಕೊಳಗಾಗಿದ್ದರು. ಸ್ಥಳೀಯರ ಪ್ರಕಾರ ಬೈಕರ್ ಸ್ಥಿತಿ ಚಿಂತಾಜನಕವಾಗಿದೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ರೇಸ್‌ನಲ್ಲಿ ಹೆಸರು ನೊಂದಾಯಿಸದ ಈತ ಈ ರೀತಿ ಬೈಕ್ ವೀಲಿಂಗ್ ಮಾಡಿರುವ ಎಡವಟ್ಟಿನಿಂದಾಗಿ ಇಂತಹದೊಂದು ಘಟನೆ ನಡೆದಿದೆ. ಇದರಿಂದಾಗಿ ಪ್ರೇಕ್ಷಕರನ್ನು ನಿಯಂತ್ರಿಸುವುದರಲ್ಲಿ ಹಾಗೂ ರೇಸ್ ಯಶಸ್ವಿಯಾಗಿ ಆಯೋಜಿಸುವುದರಲ್ಲಿ ಆಯೋಜಕರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ಇದಾದ ಬಳಿಕ ಕುಪಿತಗೊಂಡ ಸ್ಥಳೀಯರು ರೇಸ್ ಸ್ಥಗಿತಗೊಳಿಸಲು ಬಯಸಿದ್ದರೆಂಬ ಮಾತು ಕೇಳಿ ಬಂದಿದೆ. ತದಾ ಬಳಿಕ ರೇಸ್ ಕೈಬಿಡುವಂತೆ ಪೊಲೀಸರು ಆಯೋಜಕರಿಗೆ ತಿಳಿಸಿದ್ದರು ಎಂಬುದು ತಿಳಿದು ಬಂದಿದೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ಒಟ್ಟಾರೆಯಾಗಿ ಪ್ರೇಕ್ಷಕರ ರೂಪದಲ್ಲಿ ರೇಸ್ ವೀಕ್ಷಣೆಗೆಂದು ಬಂದಿದ್ದ ಓರ್ವ ಬೈಕ್ ಉತ್ಸಾಹಿ ತೋರಿರುವ ಅತಿ ಬುದ್ಧಿವಂತಿಕೆಯಿಂದಾಗಿ ಸಂಪೂರ್ಣ ರೇಸ್ ರದ್ದಾಗುವಂತಾಗಿದ್ದು, ರೇಸಿಂಗ್ ಕನಸು ಹೊತ್ತುಕೊಂಡು ಬಂದಿದ್ದ ಅನೇಕ ವೃತ್ತಿಪರರ ಕನಸು ಭಗ್ನವಾಗಿದೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ಈಗ ದುಡ್ಡು ಪಾವತಿಸಿ ರೇಸ್‌ಗೆ ಹೆಸರು ನೊಂದಾಯಿಸಿಕೊಂಡವರು ಅಧಿಕೃರನ್ನು ಸಂಪರ್ಕಿಸುತ್ತಿದ್ದು, ಹಣ ಹಿಂತಿರುಗಿ ನೀಡುವಂತೆ ಬೇಡಿಕೆಯಿರಿಸಿದ್ದಾರೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ರೇಸರುಗಳು ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿಕೊಂಡು ನಂದಿ ಹಿಲ್ ಕ್ಲೈಂಬ್ ರೇಸ್‌ನಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ ಇವರಿಗಾಗಿರುವ ನಷ್ಟವನ್ನು ಯಾರು ಭರಿಸಲಿದ್ದಾರೆ ಎಂಬುದು ಚರ್ಚೆಯ ವಿಷವಾಗಿದೆ.

ಬೈಕ್ ಆಕ್ಸಿಡೆಂಟ್: ಬೆಂಗಳೂರು ನಂದಿ ಹಿಲ್ ಕ್ಲೈಂಬ್ ರೇಸ್ ರದ್ದು

ಒಟ್ಟಿನಲ್ಲಿ ರೇಸಿಂಗ್ ಎಂಬುದು ಮಕ್ಕಳಾಟವಲ್ಲ ಎಂಬ ವಿಚಾರವನ್ನು ಇಂತಹ ಬೈಕರ್‌ಗಳು ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆದರೆ ಹೇಳುವವರು ಕೇಳುವವರು ಯಾರು ಇರಲ್ಲ.

 

English summary
The 2015 Nandi Hill Climb race has canceled due to the accident took place on Wednesday. 

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark