ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಬೆಂಗಳುರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಅಧಿಕವೇ ಆದರೂ ಅವರಲ್ಲಿ ಬಹುತೇಕವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರೇ ಹೆಚ್ಚು. ಟಾಫಿಕ್ ನಿಯಮಗಳನ್ನು ಪಾಲನೆ ಮಾಡದೆ ಇದ್ದಲ್ಲಿ ದಂಡ ವಿಧಿಸಬೇಕಾಗುತ್ತದೆ ಎಂಬ ವಿಷಯವನ್ನು ಅರಿತರೂ ಸಹ, ಸಣ್ಣ ಮೊತ್ತದ ದಂಡವೇ ತಾನೆ ಎಂದು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದರು. ಆದರೆ ಇಂತಹ ವ್ಯಕ್ತಿಗಳಿಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಒಂದು ಶಾಕಿಂಗ್ ಸುದ್ದಿಯನ್ನು ನೀಡಿದೆ.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಹೌದು ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆಯಿಂದಾಗಿ, ಬೆಂಗಳೂರಿನ ಟ್ರಾಫಿಕ್ ಪೊಲೀಸರು ಒಂದು ಹೊಸ ನಿಯಮವನ್ನು ತಂದಿದ್ದು, ಇದು ಇಂದಿನಿಂದಲೇ ಚಾಲ್ತಿಯಾಗಲಿದೆ. ಅದೆನೆಂದರೆ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ದಲ್ಲಿ, ರೂ. 1000 ದಂಡವನ್ನು ವಿಧಿಸಬೇಕಾಗುತ್ತದೆ. ಕೇವಲ ಈ ನಿಯಮಕ್ಕೆ ಮಾತ್ರವಲ್ಲದೆಯೆ ಮತ್ತಷ್ಟು ನಿಯಮಗಳ ದಂಡವನ್ನು ಹೆಚ್ಚಿಸಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಯಾವುದೇ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಾಗಿ ಕೇವಲ ರೂ. 100 ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದ ಕೆಲ ವಾಹನ ಚಾಲಕರಿಗೆ ರಾಜ್ಯ ಸರ್ಕಾರವು ಟ್ರಾಫಿಕ್ ದಂಡಗಳಲ್ಲಿ ಮಾದಿದ ಬದಲಾವಣೆಯು ತಪ್ಪದೇ ಶಾಕ್ ನೀಡುತ್ತೆ. ಇಷ್ಟ ಬಂದಲ್ಲಿ ಪಾರ್ಕಿಂಗ್ ನಿಮ್ಮ ವಾಹನವನ್ನು ಪಾರ್ಕಿಂಗ್ ಮಾಡಿದ್ದಲ್ಲಿ ಕೂಡಾ ರೂ. 1000 ದಂಡ ವಿಧಿಸಬೇಕಾಗುತ್ತದೆ.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಇನ್ನುಳಿದಂತೆ ಮೊದಲನೆಯ ಬಾರಿ ನೋಂದಣಿ ರಹಿತ ವಾಹನ ಚಾಲನೆ ಮಾಡುವಾಗ ಸಿಕ್ಕಿಕೊಂಡರೆ ರೂ. 5,000, ಪದೇ ಪದೇ ಇದೇ ಅಪರಾಧದಲ್ಲಿ ಸಿಕ್ಕಿಕೊಂಡರೆ ರೂ. 10,000 ದಂಡ. ಹಾಗೆಯೆ ಕಾಣೆಯಾದ ಫಿಟ್‌ನೆಸ್ ಪ್ರಮಾಣಪತ್ರವು ಮೊದಲ ಬಾರಿಗೆ 2,000 ರೂ. ಮತ್ತು ಪುನರಾವರ್ತಿತ ಅಪರಾಧಕ್ಕೆ 5,000 ರೂ ದಂಡ ನೀಡಲಾಗುವುದು, ಆದರೆ ಈ ಮೊದಲು ಈ ಎರಡು ವಿಭಾಗಗಳಿಗೆ ದಂಡವನ್ನು ನ್ಯಾಯಾಲಯ ನಿರ್ಧರಿಸುತ್ತಿತ್ತು.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲುಗಡೆಗಾಗಿ ರೂ. 100 ರಿಂದ ರೂ. 1000 ದಂಡ ವಿಧಿಸಲಾಗುವುದು. ಈ ಮೊತ್ತದಲ್ಲಿ ಟೋವಿಂಗ್ ಶೂಲ್ಕ ಇರುವುದಿಲ್ಲ. ಟೋವಿಂಗ್ ಶುಲ್ಕ ಸೇರ್ಪಡೆಯಾಗಿ ದ್ವಿಚಕ್ರ ವಾಹನಗಳ ನೋ ಪಾರ್ಕಿಂಗ್‍ಗಾಗಿ ರೂ. 1,650 ಮತ್ತು ಕಾರುಗಳಿಗೆ ರೂ. 2,000 ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಸರ್ಕಾರದ (ಸಾರಿಗೆ ಇಲಾಖೆ) ಅಂಡರ್ ಸೆಕ್ರೆಟರಿ ಎಂ.ಸತ್ಯವತಿ ಅವರು ಈ ಅಧಿಸೂಚನೆಗೆ ಸಹಿ ಹಾಕಿಲಾಗಿದ್ದು, ಇದು 1988ರ ಮೋಟಾರು ವಾಹನ ಕಾಯ್ದೆ ವ್ಯಾಪ್ತಿಯಲ್ಲಿ ದಂಡವನ್ನು ಪರಿಷ್ಕರಿಸಲಾಗಿದೆ ಎಂದು ಹೇಳುತ್ತದೆ. ಹಾಗೆಯೆ ಈ ದಂಡದಲ್ಲಿನ ಬದಲಾವಣೇಗಳು ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಹ ಅವರು ತಿಳಿಸಿದ್ದಾರೆ.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಇಷ್ಟೆ ಅಲ್ಲದೆಯೆ ನಿಮ್ಮ ಸ್ವಂತ ವಾಹನವನು ಮನೆಯ ಮುಂದೆ ಪರ್ಕಿಂಗ್ ಮಾಡಲು ಇನ್ಮುಂದೆ ಶುಲ್ಕ ಪಾವತಿಸಬೇಕಾಗಬಹುದಾದ ಸಮಯ ಕೂಡಾ ಬರಬಹುದಾಗಿದೆ. ಹೌದು., ನೀವು ಓದಿದ್ದು ನಿಜ ಶೀಘ್ರದಲ್ಲೇ ಈ ಹೊಸ ರೂಲ್ಸ್ ಜಾರಿಯಾಗಲಿದ್ದು, ನಿಮ್ಮ ಮನೆಯ ಮುಂದೆ ನಿಮ್ಮ ಕಾರನ್ನು ಅಥವಾ ಬೈಕುಗಳನ್ನು ನಿಲುಗಡೆ ಮಾಡಲು ನೀವು ಶೀಘ್ರದಲ್ಲೇ ಶುಲ್ಕಗಳು ಪಾವತಿಸಬೇಕಾಗಬಹುದು.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಈ ಕುರಿತಾಗಿ ನಗರಾಭಿವೃದ್ಧಿ ಇಲಾಖೆಯಿಂದ ಒಂದು ನೀತಿಯನ್ನು ರಚಿಸಲಾಗುತ್ತಿದ್ದು, ಇನ್ಮುಂದೆ ಪ್ರತಿ ವಾಹನ ಮಾಲೀಕರು ಸಾರ್ವಜನಿಕ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಾಹನಗಳನ್ನು ಸಾರ್ವಜನಿಕ ರಸ್ತೆಗಳಿಂದ ಹೊರಗಿಡಲು ಚಲನಶೀಲ ತಜ್ಞರು ನೀಡಿದ ಸಲಹೆಗಳಲ್ಲಿ ಇದು ಒಂದಾಗಿದ್ದು, ಈ ನೀತಿಯು ಕಾರ್ಯರೂಪಕ್ಕೆ ಬಂದರೆ, ಸಾರ್ವಜನಿಕ ರಸ್ತೆಗಳಲ್ಲಿ ಜನರು ಪಾರ್ಕಿಂಗ್ ಮಾಡುವ ರೀತಿಯಲ್ಲಿ ಕೆಲವು ಬದಲಾವಣೆಯನ್ನು ಕಾಣಬಹುದಾಗಿದೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ರಸ್ತೆಗಳು ಇದೀಗ ಬಹುತೇಕ ನಗರಗಳಲ್ಲಿ ಪ್ರೀಮಿಯಂ ಆಗಿರಲಿದ್ದು, ಜೊತೆಗೆ ಫುಟ್‍‍ಪಾತ್‍ಗಳು ಸಹ ಪ್ರೀಮಿಯಂ ಆಗಿರಲಿದೆ. ಈ ಫುಟ್‍‍ಪಾತ್‍ಗಳು ಚಲನಶೀಲತೆಗಾಗಿಯೆ ಹೊರತು ಪಾರ್ಕಿಂಗ್‍‍ಗಾಗಿ ಬಳಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಗರದೊಳಗೆ ಪಾರ್ಕಿಂಗ್ ಸ್ಥಳವನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ನಾವು ಮಾದುತ್ತಿದ್ದೇವೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಾದ ಮಹೇಂದ್ರ ಜೈನ್ ಅವರು ಹೇಳಿಕೊಂಡಿದ್ದಾರೆ.

MOST READ: ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡೆಯೊಲ್ಲ

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಇದರ ಜೊತೆಗೆ ರಸ್ತೆ ಸುರಕ್ಷತೆ, ಪಾದಚಾರಿಗಳಿಗೆ ಸೌಲಭ್ಯಗಳು, ಪಾರ್ಕಿಂಗ್ ಸ್ಥಳಾವಕಾಶಗಳ ಅಭಿವೃದ್ಧಿ ಮತ್ತು ಇದೇ ರೀತಿಯ ಚಟುವಟಿಕೆಗಳನ್ನು ಸುಧಾರಿಸಲು ಪಾರ್ಕಿಂಗ್ ಶುಲ್ಕದಿಂದ ಪಡೆದ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಜೈನ್ ಸೇರಿಸಲಾಗಿದೆ. ಈ ನೀತಿಯು ರಸ್ತೆಗಳಲ್ಲಿ ದಟ್ಟಣೆಯನ್ನು ಗಮನಾರ್ಹ ರೀತಿಯಲ್ಲಿ ಕಡಿಮೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ವಾಹನ ಚಾಲಕರೇ ಇತ್ತ ಗಮನಿಸಿ - ಬಂದಾಯ್ತು ಹೊಸ ರೂಲ್ಸ್

ಹೀಗಿರುವಾಗ ಈ ಮುಂದೆಯೆ 2015 ರಲ್ಲಿ ಪರಿಷ್ಕೃತ ಪರಿಹಾರವನ್ನು ರೂಪಿಸಲು ಸ್ಥಳೀಯ ಪ್ರದೇಶದ ನಿರ್ದಿಷ್ಟ ಅಥವಾ ಸಂಯೋಜಿತ ಪಾರ್ಕಿಂಗ್ ಯೋಜನೆಯನ್ನು ತಯಾರಿಸಲು ಮತ್ತು ಕಾರ್ಯಗತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಬಿಬಿಎಂಪಿ ಕಾರ್ಯಪಡೆಯಾಗಿ ನೇಮಕಗೊಳ್ಳಲಿದೆ ಹಾಗು ಬಿಬಿಎಂಪಿಯ ವಲಯ ಆಯುಕ್ತರು ತಮ್ಮ ವ್ಯಾಪ್ತಿ ವ್ಯಾಪ್ತಿಯ ಪ್ರದೇಶಗಳಿಗೆ ಅವರು ಪಾರ್ಕಿಂಗ್ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ ಎನ್ನಲಾಗಿದೆ.

Source: ETauto

Most Read Articles

Kannada
English summary
Bengalur Police Fine Rs.1000 For Talking On Phone. Read In Kannada
Story first published: Friday, June 28, 2019, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more