ನ್ಯೂಯಾರ್ಕ್ ಶೋಗಿಂತ ಮುನ್ನ ಜಾಗ್ವಾರ್ ಎಕ್ಸ್‌ಎಫ್ ಅನಾವರಣ

Written By:

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಐಕಾನಿಕ್ ಸಂಸ್ಥೆಯಾಗಿರುವ ಜಾಗ್ವಾರ್, ಮುಂಬರುವ ನ್ಯೂಯಾರ್ಕ್ ಆಟೋ ಶೋಗಿಂತಲೂ ಮುಂಚಿತವಾಗಿ ಬಹುನಿರೀಕ್ಷಿತ ಎಕ್ಸ್‌ಎಫ್ ಮಾದರಿಯನ್ನು ಅನಾವರಣಗೊಳಿಸಲಿದೆ.

ವರದಿಗಳ ಪ್ರಕಾರ ಜಾಗ್ವಾರ್ ಎಕ್ಸ್‌ಎಫ್ ಮಾದರಿಯು ಇದೇ ಬರುವ 2015 ಮಾರ್ಚ್ 24ರಂದು ಲಂಡನ್‌ನಲ್ಲಿ ಅನಾವರಣಗೊಳ್ಳಲಿದೆ. ತದಾ ಬಳಿಕವಷ್ಟೇ ನ್ಯೂಯಾರ್ಕ್ ಪ್ರದರ್ಶನ ಕಾಣಲಿದೆ.

jaguar xf

ಮುಂದುವರಿದ ಅಲ್ಯೂಮಿನಿಯಂ ವಾಸ್ತುಶಿಲ್ಪದ ತಳಹದಿಯಲ್ಲಿ ನಿರ್ಮಾಣವಾಗಿರುವ ಹೊಚ್ಚ ಹೊಸ ಜಾಗ್ವಾರ್ ಎಕ್ಸ್‌ಎಫ್ ಜನಪ್ರಿಯ ಮಾದರಿಗಳಲ್ಲಿ ಒಂದೆನಿಸಿಕೊಳ್ಳಲಿದ್ದು, ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಅತ್ಯಂತ ಸೊಗಸಾದ ಹಾಗೂ ಸುಂದರ ವಿನ್ಯಾಸವು ಜಾಗ್ವಾರ್ ಪ್ರೇಮಿಗಳ ಮನ ಸೆಳೆಯಲಿದೆ. ಅಂತೆಯೇ 2.0 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದುವ ಸಾಧ್ಯತೆಯಿದೆ.

jaguar xf

ಹೆಚ್ಚಿನ ಮಾಹಿತಿಗಳು ನ್ಯೂಯಾರ್ಕ್ ಆಟೋ ಶೋದಲ್ಲಷ್ಟೇ ಬಯಲಾಗಲಿದೆ. ಅಲ್ಲಿಯ ವರೆಗೆ ವೈಶಿಷ್ಟ್ಯ ಹಾಗೂ ಸುರಕ್ಷತಾ ವಿಚಾರಗಳನ್ನು ಗೌಪ್ಯವಾಗಿಡಲಾಗುವುದು.

ಅಂದ ಹಾಗೆ ಪ್ರತಿಷ್ಠಿತ 2015 ನ್ಯೂಯಾರ್ಕ್ ಆಟೋ ಶೋ ಎಪ್ರಿಲ್ 01ರಂದು ಆರಂಭವಾಗಲಿದೆ. ಪ್ರಸ್ತುತ ಮಾದರಿಯು ಭಾರತಕ್ಕೆ ಬಂದರೆ ಅಚ್ಚರಿಪಡಬೇಕಾಗಿಲ್ಲ.

English summary
British based automobile manufacturer Jaguar will be introducing it all-new XF sedan on 24th March, 2015 in London. The vehicle was scheduled to be debuted at New York Auto Show.
Story first published: Friday, March 20, 2015, 7:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark