ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ; ಅಜೆಂಡಾ ಏನು?

Written By:

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ಶನಿವಾರದಂದು ಜಗತ್ತಿನ ಮುಂಚೂಣಿಯ ವಿದ್ಯುತ್ ಚಾಲಿತ ಕಾರು ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್ ಘಟಕಕ್ಕೆ ಭೇಟಿ ನೀಡಿದ್ದರಲ್ಲದೆ ಅಲ್ಲಿನ ನಿರ್ಮಾಣ ಪ್ರಕ್ರಿಯೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರು.

ಒಂದೆಡೆ ಭಾರತಕ್ಕೆ ಕಾಲಿಡಲು ಟೆಸ್ಲಾ ಮೋಟಾರ್ಸ್ ತುದಿಗಾಲಲ್ಲಿ ನಿಂತಿರುವಂತೆಯೇ ಮೋದಿ ನೀಡಿರುವ ಭೇಟಿಯೂ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಸುಸ್ಥಿರ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪರ್ಯಾಯ ಚೈತನ್ಯದ ವ್ಯವಸ್ಥೆಯನ್ನು ರೂಪಿಸಲು ಸ್ಪಷ್ಟ ವೇದಿಕೆವೊದಗಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆಯೂ ನಡೆಯಿತು.

To Follow DriveSpark On Facebook, Click The Like Button
ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಕ್ಯಾಲಿಫೋರ್ನಿಯಾದ ಪಾವೊ ಆಲ್ಟೊದಲ್ಲಿರುವ ಟೆಸ್ಲಾ ಪ್ರಧಾನ ಕಚೇರಿಗೆ ಭೇಟಿ ಕೊಟ್ಟಿರುದ್ದ ನರೇಂದ್ರ ಮೋದಿ, ಭವಿಷ್ಯತ್ತಿನ ವಾಹನ ವಿನ್ಯಾಸ, ತಂತ್ರಗಾರಿಕೆ ಹಾಗೂ ಚೈತನ್ಯ ಬಳಕೆಯ ಬಗ್ಗೆ ಅಲ್ಲಿನ ಸಂಸ್ಥೆಯ ಪ್ರತಿನಿಧಿಗಳಿಂದ ಮಾಹಿತಿ ಗಿಟ್ಟಿಸಿಕೊಂಡರು.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

2003ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಟೆಸ್ಲಾ ಮೋಟಾರ್ಸ್ ಕಳೆದ ಒಂದು ದಶಕದಲ್ಲೇ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲದೆ ವಿದ್ಯುತ್ ಚಾಲಿತ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಪಳೆಯುಳಿಕೆ ಇಂಧನ ಚಾಲಿತ ಕಾರುಗಳಿಗಿಂತ ವಿದ್ಯುತ್ ಚಾಲಿತ ಕಾರುಗಳು ಏಕೆ ಅತ್ಯುತ್ತಮವಾಗಿದೆ ಎಂಬುದನ್ನು ಮೋದಿ ಅವರಿಗೆ ವಿವರಿಸುವ ಪ್ರಯತ್ನ ಮಾಡಲಾಗಿತ್ತು.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಬಳಿಕ ಬ್ಯಾಟರಿ ಚಾಲಿತ ವಾಹನದಲ್ಲಿ ಮೋದಿ ಘಟಕದತ್ತ ಒಂದು ಚಿಕ್ಕ ರೌಂಡಪ್ ಹೊಡೆದು ಬಂದರು. ಅಲ್ಲದೆ ಪ್ರತಿನಿಧಿಗಳೊಂದಿಗೆ ಫೋಟೊಗೆ ಫೋಸ್ ನೀಡಲು ಮರೆಯಲಿಲ್ಲ.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಟೆಸ್ಲಾ ಮೋಟಾರ್ಸ್ ಸ್ಥಾಪಕ ಹಾಗೂ ಮುಖ್ಯ ಕಾರ್ಯಕಾರಿಣಿ ಎಲಾನ್ ಮಸ್ಕ್ ಜೊತೆಗಿನ ಭೇಟಿಯನ್ನು ಬಳಿಕ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಮೋದಿ, ರೈತರಿಗೆ ನೆರವಾಗಬಲ್ಲ ಬ್ಯಾಟರಿ ತಂತ್ರಾಂಶದ ಬಗೆಗಿನ ಚರ್ಚೆಯನ್ನು ಆನಂದಿಸಿರುವುದಾಗಿ ತಿಳಿಸಿದರು.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಭಾರತದಲ್ಲಿ 2020ರ ವೇಳೆಯಾಗುವ ಹೆಚ್ಚಿನ ಸಂಖ್ಯೆಯ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ತಳಿಯ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ. ಇದಕ್ಕಾಗಿ ದೊಡ್ಡ ಮೊತ್ತವನ್ನೇ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬೇಕಾಗಿರುವ ಮೂಲ ಸೌಕರ್ಯದ ಕೊರತೆಯೇ ಟೆಸ್ಲಾದಂತಹ ಜಗತ್ತಿನ ಅಗ್ರಗಣ್ಯ ಸಂಸ್ಥೆಗಳು ತನ್ನ ಐಕಾನಿಕ್ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಲು ಮೀನಾಮೀಷ ಎದುರಿಸಲು ಕಾರಣವಾಗಿದೆ.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ

ಈಗ ಮೋದಿ ಭೇಟಿಯೊಂದಿಗೆ ಮತ್ತಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಭಾರತ ಕೂಡಾ ಪರಿಸರ ಸ್ನೇಹಿ ವಾಹನಗಳ ಸಾಲಿನಲ್ಲಿ ಅತಿ ಬೇಗನೇ ಸೇರಿಕೊಳ್ಳಲಿ ಎಂಬುದು ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

English summary
Prime Minister Narendra Modi interacts with Elon Reeve Musk, CEO and Product Architect of Tesla Motors during a visit of TESLA motors facility in San Jose.
Story first published: Monday, September 28, 2015, 14:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark