ಬ್ರಿಟನ್ ರಾಜಕುಮಾರಿಗೆ ರೇಂಜ್ ರೋವರ್ ಐಷಾರಾಮಿ ಕಾರು

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಲ್ಯಾಂಡ್ ರೋವರ್, ಬ್ರಿಟನ್ ರಾಜಕುಮಾರಿ ಕ್ವೀನ್ ಎಲಿಜಬೆತ್ II ಅವರಿಗಾಗಿ ನೂತನ ರೇಂಜ್ ರೋವರ್ ಹೈಬ್ರಿಡ್ ಕಾರನ್ನು ನಿರ್ಮಿಸಿದೆ.

ನೂತನ ರೇಂಜ್ ರೋವರ್ ಹೈಬ್ರಿಡ್ ಓಪನ್ ಟಾಪ್ ಕಾರಾಗಿರಲಿದೆ. ಇದನ್ನು ಸಂಸ್ಥೆಯ ಫ್ಲ್ಯಾಗ್ ಶಿಪ್ ಮಾದರಿಯ ಲಾಂಗ್ ವೀಲ್ ಬೇಸ್ ವರ್ಷನ್ ತಳಹದಿಯಿಂದ ನಿರ್ಮಿಸಲಾಗಿದೆ. ಹಾಗೆಯೇ ವಿಶೇಷ ಬಣ್ಣದ ಆಯ್ಕೆಯನ್ನು ಇದಕ್ಕೆ ಕೊಡಲಾಗಿದೆ.

ಕ್ವೀನ್ ಎಲಿಜಬೆತ್ II

ನೂತನ ವಾಹನವು 3.0 ಲೀಟರ್ ಎಸ್ ಡಿವಿ6 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 340 ಅಶ್ವಶಕ್ತಿ (700 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಪ್ರಸ್ತುತ ಕಾರು ಕೇವಲ 6.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಹಾಗೂ ಗಂಟೆಗೆ ಗರಿಷ್ಠ 218 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ ಎಲೆಕ್ಟ್ರಿಕ್ ಮೋಟಾರು ಇದರಲ್ಲಿರಲಿದೆ.

89ರ ಹರೆಯದ ಎರಡನೇ ಎಲಿಜಬೆತ್ ಈಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೂತನ ರೇಂಜ್ ರೋವರ್ ಕಾರಿನಲ್ಲಿ ಜನರಿಗೆ ದರ್ಶನ ನೀಡಲಿದ್ದಾರೆ.

English summary
Range Rover has custom built a one-off SUV for Queen Elizabeth II. Based on the long wheelbase version of the Range Rover Hybrid, this has been signed by Jaguar Land Rover Special Vehicle Operations and by Land Rover Design, as being a one-off model.
Story first published: Monday, June 15, 2015, 12:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark