ಚೆಲುವೆ ಜಾಕ್ವೆಲಿನ್ ಸಾರಥ್ಯದಲ್ಲಿ ರೇಂಜ್ ರೋವರ್ ಇವೊಕ್ ಎಂಟ್ರಿ

By Nagaraja

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾನಿಧ್ಯದಲ್ಲಿ ನೂತನ ರೇಂಜ್ ರೋವರ್ ಇವೊಕ್ ಫೇಸ್ ಲಿಫ್ಟ್ ಕಾರು ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಪ್ರಾರಂಭಿಕ ಬೆಲೆ: 47.10 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

Also Read: ಲಂಡನ್ ನಲ್ಲಿ ಪಲ್ಟಿ ಹೊಡೆದ ಕೋಟಿ ಬೆಲೆಬಾಳುವ ರೇಂಜ್ ರೋವರ್

ನೂತನ ಮಾದರಿಯು ಕಾರಿನ ಹೊರಮೈ ಹಾಗೂ ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ. ಅಲ್ಲದೆ ಬಿಡುಗಡೆಗೂ ಮುನ್ನವೇ 125ರಷ್ಟು ಮುಂಗಡ ಬುಕ್ಕಿಂಗ್ಸ್ ದಾಖಲಿಸಿದೆ ಎಂಬುದನ್ನು ಸಂಸ್ಥೆಯು ತಿಳಿಸಿದೆ.

2016 ರೇಂಜ್ ರೋವರ್ ಇವೊಕ್ ಬಿಡುಗಡೆ

ನೂತನ ರೇಂಜ್ ರೋವರ್ ಇವೊಕ್ ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ,

ಪ್ಯೂರ್, ಎಸ್‌ಇ, ಎಚ್‌ಎಸ್‌ಇ ಮತ್ತು ಎಚ್‌ಎಸ್‌ಇ ಡೈನಾಮಿಕ್. ಇವೆಲ್ಲದರ ಜೊತೆಗೆ ಮೂರು ವರ್ಷಗಳ ಅಥವಾ ಒಂದು ಲಕ್ಷ ಕೀ.ಮೀ.ಗಳ ವಾರಂಟಿ ಸೌಲಭ್ಯವೂ ಸಿಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ರೇಂಜ್ ರೋವರ್ ಇವೊಕ್ ಪ್ಯೂರ್: 47.10 ಲಕ್ಷ ರು.
  • ರೇಂಜ್ ರೋವರ್ ಇವೊಕ್ ಎಸ್‌ಇ: 52.90 ಲಕ್ಷ ರು.
  • ರೇಂಜ್ ರೋವರ್ ಇವೊಕ್ ಎಚ್‌ಎಸ್‌ಇ: 57.70 ಲಕ್ಷ ರು.
  • ರೇಂಜ್ ರೋವರ್ ಇವೊಕ್ ಎಚ್‌ಎಸ್‌ಇ ಡೈನಾಮಿಕ್: 63.20 ಲಕ್ಷ ರು.
  • 2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಶೈಲಿಯ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ ಹೊಸ ಬಂಪರ್, ಹೊಸ ಗ್ರಿಲ್, ಟಾಪ್ ಎಂಡ್ ವೆರಿಯಂಟ್ ನಲ್ಲಿ ಹೊಸ ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಲೈಟ್ಸ್ ಸೌಲಭ್ಯಗಳು ದೊರಕಲಿದೆ.

    2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಇನ್ನು ಹಿಂಭಾಗದಲ್ಲಿ ಪರಿಷ್ಕೃತ ಎಲ್‌ಇಡಿ ಟೈಲ್ ಲ್ಯಾಂಪ್, ಹೊಸ ಅಲಾಯ್ ವೀಲ್ ಡಿಸೈನ್ ಹೊಸ ಕಾರಿಗೆ ತಾಜಾತನ ವಿನ್ಯಾಸ ಪ್ರದಾನ ಮಾಡಲಿದೆ.

    2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಅದೇ ರೀತಿ ಕಾರಿನೊಳಗೆ ಎಂಟು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 17 ಸ್ಪೀಕರ್ ಗಳ 825 ಡಬ್ಲ್ಯು ಮೆರಿಡಿಯನ್ ಸೌಂಡ್ ಸಿಸ್ಟಂ ಹಾಗೂ ರಿಯರ್ ಸೀಟ್ ಮನರಂಜನಾ ಡಿಸ್ ಪ್ಲೇ ಸೌಲಭ್ಯಗಳು ಲಭ್ಯವಾಗಲಿದೆ.

    2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಇನ್ನುಳಿದಂತೆ ಹ್ಯಾಂಡ್ಸ್ ಫ್ರಿ ಟೈಲ್ ಗೇಟ್ ಕ್ರಿಯಾತ್ಮಕತೆ, ಹೆಡ್ಸ್ ಅಪ್ ಡಿಸ್ ಪ್ಲೇ, ಪ್ಯಾನರಾಮಿಕ್ ಸನ್ ರೂಫ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಹಾಗೂ ಟರೈನ್ ರೆಸ್ಪಾನ್ಸ್ ಸಿಸ್ಟಂಗಳಂತಹದ ವೈಶಿಷ್ಟ್ಯಗಳು ಹೊಸ ಕಾರನ್ನು ವಿಶಿಷ್ಟವಾಗಿಸಲಿದೆ.

    2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಅಂದ ಹಾಗೆ ನೂತನ ರೇಂಜ್ ರೋವರ್ ಇವೊಕ್ ಫೇಸ್ ಲಿಫ್ಟ್ ಮಾದರಿಯು 2.2 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 187 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಒಂಬತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

    2016 ರೇಂಜ್ ರೋವರ್ ಇವೊಕ್ ಬಿಡುಗಡೆ

    ಅಂತಿಮವಾಗಿ ಆಡಿ ಕ್ಯೂ5 ಹಾಗೂ ಬಿಎಂಡಬ್ಲ್ಯು ಎಕ್ಸ್3 ಗಳಂತಹ ಐಕಾನಿಕ್ ಮಾದರಿಗಳಿಗೆ ರೇಂಜ್ ರೋವರ್ ಇವೊಕ್ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

    ಇವನ್ನೂ ಓದಿ

    ರೇಂಜ್ ರೋವರ್ ಗೆ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ


Most Read Articles

Kannada
English summary
Range Rover Launch The 2016 Evoque Facelift In India At Rs. 47.10 Lakh
Story first published: Thursday, November 19, 2015, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X