2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

Written By:

ಫ್ರಾನ್ಸ್ ಮೂಲದ ಪ್ರಖ್ಯಾತ ಕಾರು ಸಂಸ್ಥೆ ರೆನೊ, ಈಗಷ್ಟೇ ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ಕ್ವಿಡ್ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸಿತ್ತು. ಪ್ರಸ್ತುತ ಸಣ್ಣ ಕಾರಿಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿರುವ ಸಂಸ್ಥೆಯು ಕ್ವಿಡ್ ಆಟೋಮ್ಯಾಟಿಕ್ ಕಾರನ್ನು 2016ರಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Also Read: ರೆನೊ ಕ್ವಿಡ್ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ

ಇದಕ್ಕೂ ಮುಂಚಿತವಾಗಿ ಮುಂದಿನ ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಮಾದರಿಯು ಭರ್ಜರಿ ಪ್ರದರ್ಶನ ಕಾಣಲಿದೆ.

2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

ಹಾಗಿದ್ದರೂ ನೂತನ ರೆನೊ ಕ್ವಿಡ್ ನಲ್ಲಿ ಹೆಚ್ಚು ಶಕ್ತಿಶಾಲಿ ಒಂದು ಲೀಟರ್ ಎಂಜಿನ್ ಆಳವಡಿಕೆಯಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ. ಪ್ರಸ್ತುತ ರೆನೊ ಕ್ವಿಡ್ 799 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 72 ಎನ್‌ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಇದರಲ್ಲಿದೆ.

2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

ರೆನೊ ಕ್ವಿಡ್ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು ಈ ವಿಭಾಗದಲ್ಲಿ ಅತ್ಯುತ್ತಮವಾಗಿದ್ದು, ಆಟೋಮ್ಯಾಟಿಕ್ ವೆರಿಯಂಟ್ ಇದೇ ಇಂಧನ ಕ್ಷಮತೆಯ ಮಟ್ಟವನ್ನು ಕಾಯ್ದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

ಇನ್ನು ರೆನೊಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಲ್ಲಿಂದ ರವಾನೆಯಾಗಲಿದೆ ಎಂಬುದು ಬಹಳ ಕುತೂಹಲವೆನಿಸಿದೆ. ಇಟಲಿಯ ಮ್ನಾಗ್ನೆಟ್ಟಿ ಮರೆಲ್ಲಿ ಈ ಸಾಲಿನಲ್ಲಿ ಹೆಚ್ಚು ಜನಪ್ರಿಯವೆನಿಸಿದರೂ ರೆನೊ ತನ್ನದೇ ಘಟಕದಲ್ಲಿ ಎಎಂಟಿ ಗೇರ್ ಬಾಕ್ಸ್ ತಯಾರಿಸಲಿದರೆ ಅಚ್ಚರಿಪಡಬೇಕಾಗಿಲ್ಲ.

2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಬಿಡುಗಡೆಯಾದ ಬಳಿಕ ಈ ವೆರೆಗೆ 50,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ. ಇದರೊಂದಿಗೆ ಕಾಯುವಿಕೆ ಅವಧಿಯು ಆರು ತಿಂಗಳುಗಳಿಗೆ ವಿಸ್ತರಣೆಯಾಗಿದೆ.

2016ರಲ್ಲಿ ರೆನೊ ಕ್ವಿಡ್ ಆಟೋಮ್ಯಾಟಿಕ್ ಕಾರು ಭಾರತಕ್ಕೆ

ರೆನೊ ಕ್ವಿಡ್ ಚಾಲನಾ ವಿಮರ್ಶೆ

Read more on ರೆನೊ renault
English summary
Renault To Launch An AMT Model Of The Kwid In 2016
Story first published: Saturday, November 21, 2015, 15:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark