ಹೊಸ ವರ್ಷದಲ್ಲಿ ದುಬಾರಿಯಾಗಲಿದೆ ರೆನೊ ಕ್ವಿಡ್

Written By:

ಹೊಚ್ಚ ಹೊಸ ರೆನೊ ಕ್ವಿಡ್ ಕಾರಿಗೆ ಭಾರಿ ಬೇಡಿಕೆ ಕಂಡುಬಂದಿರುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಈ ನಿಟ್ಟಿನಲ್ಲಿ ರೆನೊ ಸಂಸ್ಥೆಯು ತನ್ನ ಚೆನ್ನೈ ಘಟಕದಲ್ಲಿನ ನಿರ್ಮಾಣ ಸಾಮರ್ಥ್ಯವನ್ನು ವೃದ್ಧಿಸಿದೆ.

ಈ ನಡುವೇ ಖೇದಕರ ಸುದ್ದಿಯೊಂದರಲ್ಲಿ ಕ್ವಿಡ್ ಕಾರಿಗೆ ಶೇಕಡಾ ಮೂರರಷ್ಟು ಬೆಲೆ ಏರಿಕೆಗೊಳಿಸಲು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ನಿರ್ಧರಿಸಿದೆ. ನೂತನ ಬೆಲೆ ನೀತಿಯು 2016 ಜನವರಿ ತಿಂಗಳಿಂದ ಅನ್ವಯವಾಗಲಿದೆ.

ರೆನೊ ಕ್ವಿಡ್

ಪ್ರಸ್ತುತ ದೆಹಲಿ ಎಕ್ಸ್ ಶೋ ರೂಂ ಬೆಲೆ 2.56 ಲಕ್ಷ ರು.ಗಳಿಗೆ ದೊರಕುತ್ತಿದ್ದ ಕ್ವಿಡ್ ಈಗ 2.64 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಕ್ವಿಡ್ ಎಲ್ಲ ಶ್ರೇಣಿಯ ಕಾರುಗಳಲ್ಲೂ ಇದಕ್ಕೆ ಸಮಾನವಾದ ರೀತಿಯಲ್ಲಿ ಬೆಲೆ ಏರಿಕೆಗೊಳ್ಳಲಿದೆ.

ಪ್ರಸ್ತುತ ಕ್ವಿಡ್ ಕಾರಿಗೆ 75,000 ಯುನಿಟ್ ಗಳಷ್ಟು ಬುಕ್ಕಿಂಗ್ ದಾಖಲಾಗಿದೆ. ಅಲ್ಲದೆ ಬುಕ್ ಮಾಡಿದ ಗ್ರಾಹಕರು ತಮ್ಮ ಕನಸಿನ ಕಾರಿಗಾಗಿ ಅಂದಾಜು ಆರು ತಿಂಗಳಷ್ಟು ಕಾಯಬೇಕಾಗಿದೆ.

ಚೆನ್ನೈ ಮಳೆಯು ರೆನೊ ಕ್ವಿಡ್ ನಿರ್ಮಾಣಕ್ಕೂ ಹೊಡೆತ ನೀಡಿತ್ತು. ಇದರಿಂದಾಗಿ 5,000 ಯುನಿಟ್ ಗಳಿಷ್ಟಿದ್ದ ನಿರ್ಮಾಣವನ್ನು 8,000 ಸಂಖ್ಯೆಗೆ ಏರಿಸಲು ಸಂಸ್ಥೆ ನಿರ್ಧರಿಸಿದೆ.

800 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ 72 ಎನ್‌ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಈ ನಡುವೆ ಭಾರತದಲ್ಲಿ ನಿಸ್ಸಾನ್ ಸಂಸ್ಥೆಯ ಜೊತೆ ಪಾಲುದಾರಿಕೆ ಹೊಂದಿರುವ ರೆನೊ, ಚೆನ್ನೈ ಸಂತ್ರಸ್ತರ ನೆರವಿವಾಗಿ ಒಂದು ಕೋಟಿ ರು.ಗಳ ಸಹಾಯ ನಿಧಿಯನ್ನು ನೀಡಿದೆ.

Read more on ರೆನೊ renault
English summary
Renault Kwid Price To Be Hiked By Almost Three Percent
Story first published: Wednesday, December 16, 2015, 14:53 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark