ನ್ಯಾನೋ ಜೆನ್ ಎಕ್ಸ್ ಭರ್ಜರಿ ಬಿಡುಗಡೆ; ಬೆಲೆ ಎಷ್ಟು?

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನಿರೀಕ್ಷೆಯಂತೆಯೇ ಬಹುನಿರೀಕ್ಷಿತ ಟಾಟಾ ನ್ಯಾನೋ ಜೆನ್ ಎಕ್ಸ್ ಈಸಿ ಶಿಫ್ಟ್ (ಎಎಂಟಿ) ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 1.99 ಲಕ್ಷ ರು.ಗಳಾಗಿರಲಿದೆ. ಇನ್ನು ಈಸಿ ಶಿಫ್ಟ್ ಪ್ರಾರಂಭಿಕ ಬೆಲೆ 2.69 ಲಕ್ಷ ರು.ಗಳಾಗಿರಲಿದೆ.

ಪ್ರಮುಖವಾಗಿಯೂ ಎರಡು ಪ್ರಮುಖ ಬದಲಾವಣೆಗಳು ಹೊಸ ನ್ಯಾನೋ ಜೆನ್ ಎಕ್ಸ್ ಕಾರಿನಲ್ಲಿ ಕಂಡುಬರಲಿದೆ. ಅವುಗಳೆಂದರೆ, ಎಎಂಟಿ ಅಥವಾ ಈಸಿ ಶಿಫ್ಟ್ ಮತ್ತು ತೆರೆಯಬಹುದಾದ ಢಿಕ್ಕಿ ಬಾಗಿಲು.

tata nano

ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಕ್ಸ್ ಇ - 1.99 ಲಕ್ಷ ರು.
  • ಎಕ್ಸ್ ಎಂ- 2.29 ಲಕ್ಷ ರು.
  • ಎಕ್ಸ್ ಟಿ - 2.49, ಲಕ್ಷ ರು.
  • ಈಸಿ ಶಿಫ್ಟ್ - 2.69 ಲಕ್ಷ ರು.
  • ಈಸಿ ಶಿಫ್ಟ್ ಎಕ್ಸ್‌ಟಿಎ - 2.89 ಲಕ್ಷ ರು.

ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

  • ಎಕ್ಸ್ ಇ - 2.10 ಲಕ್ಷ ರು.
  • ಎಕ್ಸ್ ಎಂ- 2.40 ಲಕ್ಷ ರು.
  • ಎಕ್ಸ್ ಟಿ - 2.59, ಲಕ್ಷ ರು.
  • ಈಸಿ ಶಿಫ್ಟ್ - 2.80 ಲಕ್ಷ ರು.
  • ಈಸಿ ಶಿಫ್ಟ್ ಎಕ್ಸ್‌ಟಿಎ - 2.99 ಲಕ್ಷ ರು.
English summary
Tata Motors has launched the Tata Nano GenX in India today. This will be the world's most affordable AMT for sale in the market.
Story first published: Tuesday, May 19, 2015, 12:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark