ದೇಶದ ಐದು ಅತ್ಯುತ್ತಮ ಮೈಲೇಜ್ ಕಾರುಗಳು

Written By:

ಭಾರತದ ಮಧ್ಯಮ ವರ್ಗದ ವಾಹನ ಖರೀದಿಗಾರರು ನೂತನ ಕಾರು ಕೊಳ್ಳುವಾಗ ಮೈಲೇಜ್‌ಗೂ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಇದು ನಿರ್ದಿಷ್ಟ ಸಂಸ್ಥೆಯೊಂದರ ಕಾರಿನ ಮಾರಾಟದಲ್ಲೂ ಪ್ರತಿಫಲಿಸುತ್ತದೆ. ಅಂದ ಹಾಗೆ ಮೈಲೇಜ್ ಮೇಲೆ ಅನೇಕ ಘಟಕಕಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾರಿನ ಕಂಡೀಷನ್ ನಿಂದ ಆರಂಭವಾಗಿ, ಎಂಜಿನ್, ನಿರ್ವಹಣೆ, ಚಾಲನಾ ಶೈಲಿ ಹೀಗೆ ಎಲ್ಲವೂ ಮೈಲೇಜ್ ಮೇಲೆ ಅವಲಂಬಿತವಾಗಿರುತ್ತದೆ.

ಈ ನಡುವೆ ಇತ್ತೀಚೆಗಷ್ಟೇ ದೇಶದಲ್ಲಿ ಬಿಡುಗಡೆಯಾಗಿರುವ ಹೊಸ ಹೊಸ ಮಾದರಿಗಳು ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ. ಇಂದಿನ ಈ ಲೇಖನದಲ್ಲಿ ಸದ್ಯ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಐದು ಕಾರುಗಳ ಪಟ್ಟಿ ಮಾಡಿಕೊಡಲಿದ್ದೇವೆ. ವಾಹನ ಪ್ರೇಮಿಗಳಾದ ತಮಗೆಲ್ಲರಿಗೂ ಈ ಲೇಖನ ನೆರವಾಗುವ ಭರವಸೆ ನಮ್ಮದ್ದು.

ವಿ.ಸೂ: ಇಲ್ಲಿ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ (Automotive Research Association of India) ಆಧಾರದಲ್ಲಿ ಮೈಲೇಜ್ ಅಂಕಿಅಂಶಗಳನ್ನು ಕೊಡಲಾಗಿದೆ.

05. ಹೋಂಡಾ ಸಿಟಿ

05. ಹೋಂಡಾ ಸಿಟಿ

ಬಿಡುಗಡೆ ವೇಳೆ ದೇಶದ ನಂ.1 ಮೈಲೇಜ್ ಕಾರೆಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಹೋಂಡಾ ಸಿಟಿ, ಹೊಸ ಕಾರುಗಳ ಆಗಮನದೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದೆ. ಇದರಲ್ಲಿ 1498 ಸಿಸಿ, 4 ಸಿಲಿಂಡರ್ ಡಬಲ್ ಓವರ್ ಹೆಡ್ ಕಾಮ್ ಶಾಫ್ಟ್ 16 ವಾಲ್ವ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 200 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿ ಉತ್ಪಾದಿಸುತ್ತದೆ.

 05. ಹೋಂಡಾ ಸಿಟಿ - ಮೈಲೇಜ್ 26

05. ಹೋಂಡಾ ಸಿಟಿ - ಮೈಲೇಜ್ 26

ಮಾರುಕಟ್ಟೆಗೆ ಪ್ರವೇಶಿಸಿದ ಸರಿ ಸುಮಾರು 16 ವರ್ಷಗಳ ಬಳಿಕ ಡೀಸೆಲ್ ಎಂಜಿನ್ ಸಿಟಿ ಕಾರನ್ನು ಬಿಡುಗಡೆ ಹೋಂಡಾ ಸಂಸ್ಥೆಯ ಈ ಜನಪ್ರಿಯ ಮಾದರಿಯು ಪ್ರತಿ ಲೀಟರ್ ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

04. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

04. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರಾಟದ ವಿಚಾರದಲ್ಲಿ ಈಗಲೂ ಅಗ್ರಸ್ಥಾನವನ್ನು ಕಾಪಾಡಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಇತ್ತೀಚೆಗಷ್ಟೇ ಫೇಸ್ ಲಿಫ್ಟ್ ರೂಪವನ್ನು ಪಡೆದುಕೊಂಡಿತ್ತು. ಇದರ 1.3 ಲೀಟರ್ ಡೀಸೆಲ್ ಮೋಟಾರು ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

04. ಸ್ವಿಫ್ಟ್ ಡಿಜೈರ್ - ಮೈಲೇಜ್ 26.59

04. ಸ್ವಿಫ್ಟ್ ಡಿಜೈರ್ - ಮೈಲೇಜ್ 26.59

ದೇಶದ ಅತ್ಯಂತ ಇಂಧನ ಕ್ಷಮತೆಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಪ್ರತಿ ಲೀಟರ್ ಗೆ 26.59 ಕೀ.ಮೀ. ಮೈಲೇಜ್ ನೀಡುವಷ್ಟು ಸಾಮರ್ಥ್ಯ ಹೊಂದಿದೆ.

03. ಹೋಂಡಾ ಜಾಝ್

03. ಹೋಂಡಾ ಜಾಝ್

ಎಲ್ಲ ಹೊಸತನದ ವಿನ್ಯಾಸದೊಂದಿಗೆ ಭಾರತ ಮಾರುಕಟ್ಟೆಗೆ ರಿ ಎಂಟ್ರಿ ಕೊಟ್ಟಿರುವ ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೊಸ ಹವಾ ಬೀಸುವ ನಿರೀಕ್ಷೆಯಲ್ಲಿದೆ. ಹೊಸ ತಲೆಮಾರಿನ ಜಾಝ್ ಕಾರು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಮತ್ತು 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ನಿಯಂತ್ರಿಸ್ಪಡುತ್ತದೆ.

03. ಹೋಂಡಾ ಜಾಝ್ - ಮೈಲೇಜ್ 27.3

03. ಹೋಂಡಾ ಜಾಝ್ - ಮೈಲೇಜ್ 27.3

ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಹೋಂಡಾ ಡೀಸೆಲ್ ಮಾದರಿಯು 99 ಅಶ್ವಶಕ್ತಿ (200 ಎನ್ಎಂ ತಿರುಗುಬಲ) ಉತ್ಪಾದಿಸುತ್ತಿರುವ ನಡುವೆಯೂ ಪ್ರತಿ ಲೀಟರ್ ಗೆ 27.3 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ. ಸದ್ಯ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಜಾಝ್ ಹೈಬ್ರಿಡ್ ಕಾರು ಭಾರತ ಪ್ರವೇಶ ಪಡೆದ್ದಲ್ಲಿ ಇನ್ನು ಹೆಚ್ಚಿನ ಮೈಲೇಜ್ ನೀಡುವುದಂತೂ ಗ್ಯಾರಂಟಿ.

02. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

02. ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್

ಸೆಲೆರಿಯೊ ಪೆಟ್ರೋಲ್ ಯಶಸ್ಸಿನ ಬಳಿಕ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, 4.65 ಲಕ್ಷ ರು. ದೆಹಲಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಅತಿ ನೂತನ ಸೆಲೆರಿಯೊ ಡೀಸೆಲ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

02. ಸೆಲೆರಿಯೊ ಡೀಸೆಲ್ - ಮೈಲೇಜ್ 27.62

02. ಸೆಲೆರಿಯೊ ಡೀಸೆಲ್ - ಮೈಲೇಜ್ 27.62

ಸೆಲೆರಿಯೊ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 27.62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಸದ್ಯ ದೇಶದಲ್ಲಿ ಮಾರಾಟದಲ್ಲಿರುವ ಕಾರುಗಳ ಪೈಕಿ ಎರಡನೇ ಗರಿಷ್ಠ ಮೈಲೇಜ್ ಕಾರೆನಿಸಿಕೊಂಡಿದೆ.

01. ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

01. ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

ಪ್ರಮುಖಯಾಗಿಯೂ ಹೋಂಡಾ ಸಿಟಿ ಅಧಿಪತ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಾರುತಿ ಸಂಸ್ಥೆಯು ಇದೀಗಷ್ಟೇ ಸಿಯಾಝ್ ಹೈಬ್ರಿಡ್ ಕಾರನ್ನು ಪರಿಚಯಿಸಿತ್ತು. ಇದರಲ್ಲಿ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ.

 01. ಸಿಯಾಝ್ ಹೈಬ್ರಿಡ್ - ಮೈಲೇಜ್ 28.09

01. ಸಿಯಾಝ್ ಹೈಬ್ರಿಡ್ - ಮೈಲೇಜ್ 28.09

ಇಂಟೇಗ್ರೇಟಡ್ ಸ್ಟ್ಯಾರ್ಟರ್ ಜನರೇಟರ್, ಹೆಚ್ಚು ಸಾಮರ್ಥ್ಯದ ಬ್ಯಾಟರಿ, ಸ್ಟ್ಯಾರ್ಟ್ ಸ್ಟಾಪ್ ತಂತ್ರಜ್ಞಾನ ಹೊಂದಿರುವ ಸಿಯಾಝ್ ಹೈಬ್ರಿಡ್ ಕಾರು ಸದ್ಯ ದೇಶದ ಗರಿಷ್ಠ ಮೈಲೇಜ್ ಕಾರಾಗಿದ್ದು ಪ್ರತಿ ಲೀಟರ್ ಗೆ 28.09 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

English summary
Top 5 Most Fuel-Efficient Cars in India
Story first published: Friday, September 4, 2015, 10:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark