ಮುಂದಿನ ಆರ್ಥಿಕ ಸಾಲಿನಿಂದ ಕಾರುಗಳು ಅಗ್ಗ?

Written By:

ಇಡೀ ವಾಹನ ಜಗತ್ತು ಮುಂಬರುವ ಕೇಂದ್ರ ಬಜೆಟ್ ಅನ್ನು ಕಾತರದಿಂದ ಕಾಯುತ್ತಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಪ್ರಮುಖವಾಗಿಯೂ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡುವ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಈ ಹಿಂದೆ ವರ್ಷಾರಂಭದಲ್ಲಿ ಅಬಕಾರಿ ಸುಂಕ ವಿನಾಯಿತಿಯನ್ನು ಹಿಂಪಡೆಯಲಾಗಿತ್ತು.

mahindra quanto

ಈ ನಡುವೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಪವನ್ ಗೋನ್ಖಾ, ಸರಕುಗಳ ಬೆಲೆ ಕಡಿಮೆಯಾಗುತ್ತಿರುವುದು ಹಾಗೂ ಬಡ್ಡಿದರ ಕಡಿತದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಾಹನಗಳು ಕೈಗೆಟುಕುವ ಬೆಲೆಯಲ್ಲಿ ದೊರಕುವ ಸಾಧ್ಯತೆಯಿದೆ ಎಂದಿದ್ದಾರೆ.

2015 ಜನವರಿ 01ರಂದು ಅಬಕಾರಿ ಸುಂಕ ವಿನಾಯಿತಿಯನ್ನು ಹಿಂಪಡೆದ ಬೆನ್ನಲ್ಲೇ, ವಾಹನಗಳ ಬೆಲೆಯನ್ನು ಏರಿಕೆಗೊಳಿಸಲಾಗಿತ್ತು. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಗೋನ್ಖಾ, ಯಾವತ್ತೂ ಅಬಕಾರಿ ಸುಂಕದ ಬಗ್ಗೆ ಅವಲಂಬಿಸಬಾರದು ಎಂದಿದ್ದಾರೆ.

ಒಟ್ಟಿನಲ್ಲಿ ವಾಹನೋದ್ಯಮದ ಪಾಲಿಗೆ ಅರುಣ್ ಜೇಟ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ ಹೆಚ್ಚು ಮಹತ್ವವನ್ನು ಪಡೆಯಲಿದೆ.

English summary
Vehicles more affordable in the next financial year?
Story first published: Wednesday, February 25, 2015, 8:45 [IST]
Please Wait while comments are loading...

Latest Photos