ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ!

Posted By:

ಇಡೀ ಆಟೋಮೊಬೈಲ್ ಕ್ಷೇತ್ರವನ್ನು ಬೆಚ್ಚಿ ಬೀಳಿಸಿರುವ ಈ ಯುಗದ ಅತಿ ದೊಡ್ಡ ಫೋಕ್ಸ್‌ವ್ಯಾಗನ್ ಮೋಸದಾಟ ಪ್ರಕರಣವನ್ನು ಬಯಲಿಗೆಳೆದಿರುವ ತ್ರಿವಳಿ ಎಂಜಿನಿಯರ್‌ಗಳಲ್ಲಿ ಓರ್ವ ಭಾರತೀಯ ಎಂಬುದು ತಿಳಿದು ಬಂದಿದೆ. ಇದು ಭಾರತೀಯರ ಪಾಲಿಗೆ ಅತ್ಯಂತ ಹೆಮ್ಮೆಯ ಸಮಾಚಾರವಾಗಿದೆ.

ಅಮೆರಿಕ ಮಾಲಿನ್ಯ ತಪಾಸಣೆಯ (ಎಮಿಷನ್ ಟೆಸ್ಟ್) ಮಾನದಂಡವನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಷ್ಟೇ ಫೋಕ್ಸ್‌ವ್ಯಾಗನ್ ಸಿಕ್ಕಿಬಿದ್ದಿತ್ತು. ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದ್ದರೂ ಅದನ್ನು ಪತ್ತೆಹಚ್ಚದಂತೆ ಸಾಫ್ಟ್ ವೇರ್ ಬಳಕೆ ಮಾಡಲಾಗಿತ್ತು.

ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ!

ಈಗ ಜಗತ್ತಿನ ಅತಿ ದೊಡ್ಡ ಕಳ್ಳಾಟವನ್ನು ಪತ್ತೆ ಹಚ್ಚುವಲ್ಲಿ ಅಮೆರಿಕದ ಸಂಶೋಧಕರು ಯಶಸ್ವಿಯಾಗಿದ್ದಾರೆ. ಇವರಲ್ಲಿ ಓರ್ವ ಭಾರತೀಯ ಮೂಲದವರಾದ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಸಂಶೋಧಕರಾಗಿರುವ ಅರವಿಂದ ತಿರುವೆಂಗದಮ್ ಆಗಿದ್ದಾರೆ.

ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ!

ವೆಸ್ಟ್ ವರ್ಜಿನಿಯಾ ವಿಶ್ವವಿದ್ಯಾಲಯದ ಪರ್ಯಾಯ ಇಂಧನ, ಎಂಜಿನ್ ಮತ್ತು ಎಮಿಷನ್ ಕೇಂದ್ರದಲ್ಲಿ ಸಂಶೋಧಕ ಎಂಜಿನಿಯರ್ ಆಗಿರುವ 32ರ ಹರೆಯದ ಅರವಿಂದ್ ಮತ್ತು ಅವರ ಇನ್ನಿತರ ಇಬ್ಬರು ಸಂಶೋಧಕರು (ಡ್ಯಾನಿಯಲ್ ಕಾರ್ಡರ್, ಮಾರ್ಕ್ ಬೆಷ್) ಒಟ್ಟು ಸೇರಿ ಅಂತರಾಷ್ಟ್ರೀಯ ಸಮಿತಿಯ ಪ್ರಸ್ತಾವಣೆ ಮೆರೆಗೆ ಕೂಲಂಕುಷವಾದ ಪರೀಶೀಲನೆಯನ್ನು ಹಮ್ಮಿಕೊಂಡಿದ್ದರು.

ಈ ವರೆಗೆ ಸಿಕ್ಕಿ ಬಿದ್ದ ಕಾರುಗಳು

ಈ ವರೆಗೆ ಸಿಕ್ಕಿ ಬಿದ್ದ ಕಾರುಗಳು

ಜೆಟ್ಟಾ (2009-2015),

ಬೀಟ್ಲ್ (2009-15),

ಗಾಲ್ಫ್ (2009-15),

ಪಸ್ಸಾಟ್ (2014-15),

ಆಡಿ ಎ3 (2009-15)

ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ!

ಸಂಶೋಧಕರ ಪ್ರಕಾರ, ಪ್ರಯೋಗಾಲಯದಲ್ಲಿ ಉಗುಳುತ್ತಿದ್ದ ಪ್ರಮಾಣಕ್ಕಿಂತಲೂ 15ರಿಂದ 35ರಷ್ಟು ಪಟ್ಟು ಹೆಚ್ಚು ಮಾಲಿನ್ಯವನ್ನು ನೈಜ ರಸ್ತೆ ಪರಿಸ್ಥಿತಿಯಲ್ಲಿ ಉಗುಳುತ್ತಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಇದಕ್ಕಾಗಿ ವಿಶೇಷ ಸಾಫ್ಟ್‌ವೇರ್ ತಂತ್ರಾಂಶವನ್ನು ಆಳವಡಿಸಲಾಗಿತ್ತು.

ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ!

ವಿಶ್ವದ್ಯಾಂತ ಒಟ್ಟು 1.10 ಕೋಟಿ ಫೋಕ್ಸ್ ವ್ಯಾಗನ್ ಡೀಸೆಲ್ ಕಾರುಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಿಮ್ಮ ಮಾಹಿತಿಗಾಗಿ ಪೋರ್ಷೆ, ಲಂಬೋರ್ಗಿನಿ, ಬೆಂಟ್ಲಿ, ಸ್ಕೋಡಾ, ಆಡಿ, ಸಿಯೆಟ್ ಗಳಂತಹ ಜನಪ್ರಿಯ ಮಾದಿರಗಳು ಫೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನತೆಯಲ್ಲಿದ್ದು, ಮತ್ತಷ್ಟು ಭೀತಿ ಹಬ್ಬಲು ಕಾರಣವಾಗಿದೆ. ಪ್ರಸ್ತುತ ಭಾರತದಲ್ಲಿ ಬಿಎಸ್‌4 ಮಾಲಿನ್ಯ ಮಾನದಂಡ ಜಾರಿಯಲ್ಲಿದ್ದು, ಅಗತ್ಯ ಬಿದ್ದಲ್ಲಿ ತನಿಖೆ ನಡೆಸುವುದಾಗಿ ಸರಕಾರ ತಿಳಿಸಿದೆ.

English summary
volkswagen emission scandal: Indian among detector trio
Story first published: Thursday, September 24, 2015, 15:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark