ಫೋಕ್ಸ್ ವ್ಯಾಗನ್ ಪಸ್ಸಾಟ್ ಸಿಸಿ ಕಾನ್ಸೆಪ್ಟ್ ನೋಡುವುದೇ ಗಮ್ಮತ್ತು

Written By:

ಜರ್ಮನಿಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಎಲ್ಲ ಹೊಸತನದಿಂದ ಕೂಡಿರುವ ನೂತನ ಪಸ್ಸಾಟ್ ಸಿಸಿ ಕಾನ್ಸೆಪ್ಟ್ ಕಾರನ್ನು ಪ್ರದರ್ಶನಗೊಳಿಸಿದೆ. ವಿಶೇಷವೆಂದರೆ ಫೋಕ್ಸ್‌ವ್ಯಾಗನ್‌ನ ಈ ಬಹುನಿರೀಕ್ಷಿತ ಕಾರು ಮುಂಬರುವ 2015 ಜಿನೆವಾ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿದೆ.

ಫೋಕ್ಸ್‌ವ್ಯಾಗನ್ ಭವಿಷ್ಯದ ವಿನ್ಯಾಸದ ಸೂಚಕವನ್ನು ಹೊಸ ಪಸ್ಸಾಟ್‌ನಲ್ಲಿ ಕಾಣಬಹುದಾಗಿದೆ. ಆಕ್ರಮಣಕಾರಿ ಮೈಮಾಟ, ದಿಟ್ಟ ನೋಟ, ಕ್ರೀತಾತ್ಮಕ ಶೈಲಿ ಇವೆಲ್ಲವೂ ಹೊಸ ಪಸ್ಸಾಟ್‌ಗೆ ಹೆಚ್ಚು ಹೊಂದಿಕೆಯಾಗುತ್ತಿದೆ.

volkswagen passat cc

ಮುಂಭಾಗದಲ್ಲಿ ಅಗಲವಾದ ಫ್ರಂಟ್ ಗ್ರಿಲ್, ಆಕರ್ಷಕ ಎಲ್‌ಇಡಿ ಲೈಟ್ಸ್‌ಗಳನ್ನು ಕಾಣಬಹುದಾಗಿದೆ. ಇನ್ನು ಈ ದಿಟ್ಟ ರೇಖೆಗಳನ್ನು ಕಾರಿನ ಬದಿಯಲ್ಲೂ ಕಾಣಬಹುದಾಗಿದೆ.

volkswagen passat cc

ಇನ್ನು ಹಿಂದುಗಡೆಯಿಂದ ರೇಸ್ ಕಾರಿನ ಶೈಲಿಯನ್ನು ನೋಡಬಹುದಾಗಿದೆ. ಇದು ನಾಲ್ಕು ಬಾಗಿಲುಗಳ ಕೂಪೆ ವಿನ್ಯಾಸವನ್ನು ಕಾಯ್ದುಕೊಂಡಿದೆ. ಇದರ ಟೈಲ್ ಲೈಟ್‌ಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

volkswagen passat cc

ಒಟ್ಟಿನಲ್ಲಿ ಹೊಸ ಕಾರು ಮುಂಬರುವ 2015 ಜಿನೆವಾ ಮೋಟಾರು ಶೋದಲ್ಲಿ ಹೆಚ್ಚಿನ ಗಮನ ಸೆಳೆಯಲಿದೆ ಎಂಬುದರಲ್ಲೇ ಸಂದೇಹವೇ ಇಲ್ಲ.

English summary
First official pictures of the upcoming new Volkswagen Passat CC replacement were recently revealed to the world. The new concept car will debut at the 2015 Geneva Auto Show and looks to be very interesting indeed.
Story first published: Friday, February 27, 2015, 11:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark